
ಬೆಂಗಳೂರು (ಏ.06): ಸಚಿವ ಸ್ಥಾನದಿಂದ ನನ್ನನ್ನು ನಿರ್ದಾಕ್ಷಿಣ್ಯವಾಗಿ ಕಿತ್ತು ಹಾಕಿದ್ರು. ನನಗೆ ಅವಮಾನ ಮಾಡಿದ್ರು. ನಾನು ಮಂತ್ರಿ ಮಾಡಿ ಅಂತ ಯಾರ ಮನೆ ಬಾಗಿಲಿಗೂ ಹೋದವನಲ್ಲ. ನಿಮಗೆ ಪರಮಾಧಿಕಾರವಿದೆ. ಆದರೆ ಪರಮಾಧಿಕಾರದ ಜೊತೆಗೆ ವಿವೇಚನೆಯೂ ಮುಖ್ಯ ಎಂದು ಚುನಾವಣಾ ಪ್ರಚಾರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶ್ರೀನಿವಾಸ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಪರಮಾಧಿಕಾರದ ಜೊತೆಗೆ ವಿವೇಚನೆ ಇದ್ದಾಗ ಮಾತ್ರ ಗೌರವ ಸಿಗುತ್ತೆ. ಏಕಾಏಕಿ 14 ಮಂದಿಯನ್ನ ಕೈಬಿಟ್ರಿ. 40 ವರ್ಷಗಳ ರಾಜಕೀಯ ಜೀವನಕ್ಕೆ ಅವಮಾನ ಮಾಡಿದ್ರಿ. ನಿಮಗಿಂತ ಹಿರಿಯ ರಾಜಕಾರಣಿ ನಾನು. ನನ್ನನ್ನ ತೆಗೆದು ಆ ಸ್ಥಾನಕ್ಕೆ ಪ್ರಿಯಾಂಕ ಖರ್ಗೆಯನ್ನ ಭರ್ತಿ ಮಾಡಿದ್ರಿ. ದಲಿತರನ್ನ ನೀವು ಕಡೆಗಣಿಸಿದ್ದೀರಿ ಎಂದು ಕಿಡಿಕಾರಿದ್ದಾರೆ.
ಈ ಚುನಾವಣೆಯಲ್ಲಿ ನಾನೆನೆನ್ನುವುದನ್ನ ತೋರಿಸುತ್ತೇನೆ. ಭೂಕಂಪ ಆದಾಗ ಮೊದಲು ಹೊರ ಬರುವುದು ಹಾವು - ಚೇಳುಗಳು. ಹಾಗೆಯೇ ಈಗ ರಾಜಕೀಯ ಭೂಕಂಪ ಆಗ್ತಿದೆ. ಅದಕ್ಕೆ ಸಿದ್ದರಾಮಯ್ಯ ಸಂಪುಟದ ಹಾವು ಚೇಳುಗಳು ಹೊರ ಬರ್ತಿದೆ ಎಂದು ವಿ. ಶ್ರೀನಿವಾಸಪ್ರಸಾದ ಲೇವಡಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.