
Click Here: ಉಚಿತ ಜಿಯೋ ಆಫರ್ ಇನ್ನಷ್ಟು ತಿಂಗಳು ಮುಂದುವರಿಕೆ : ಗ್ರಾಹಕರಿಗೆ ಸುಗ್ಗಿಯೋ ಸುಗ್ಗಿ !
ಮುಂಬೈ(ಏ.06): ಗ್ರಾಹಕರಿಗೆ 6.5 ತಿಂಗಳು ಉಚಿತ ಇಂಟರ್'ನೆಟ್ ಸೇವೆ ಒದಗಿಸುವುದರೊಂದಿಗೆ ಕೇವಲ 6 ತಿಂಗಳಲ್ಲಿ 10 ಕೋಟಿಗೂ ಹೆಚ್ಚು ಚಂದದಾರರನ್ನು ಹೊಂದಿದ ರಿಲಾಯನ್ಸ್ ಜಿಯೋ ಸಂಸ್ಥೆ ಮತ್ತೊಂದು ಹೊಸ ವಿಕ್ರಮವನ್ನು ಬರೆಯಲು ಮುಂದಾಗಿದೆ.
ಜಿಯೋ ಸಂಸ್ಥೆ ಲ್ಯಾಪ್'ಟಾಪ್'ಗಳನ್ನು ತಯಾರಿಸಲು ಮುಂದಾಗಿದ್ದು, ಇದನ್ನು ಗ್ರಾಹಕರಿಗೆ ಅತೀ ಕಡಿಮೆ ಬೆಲೆಗೆ ಒದಗಿಸಲು ಸಜ್ಜಾಗಿದೆ. ಈ ಲ್ಯಾಪ್'ಗಳಲ್ಲಿ ಇಂಟರ್'ನೆಟ್ ಪಡೆಯಲು ಯಾವುದೇ ಡಾಂಗಲ್, ವೈಫೈ ಅನ್ನು ಪ್ರತ್ಯೇಕ ಕೊಂಡು ಅಳವಡಿಸಬೇಕಾಗಿಲ್ಲ. ಪ್ರಸ್ತುತ ಜಿಯೋ 4ಜಿ ಸಿಮ್' ಅನ್ನು ಲ್ಯಾಪ್'ಟಾಪ್'ಗೆ ಸಂಪರ್ಕಿಸಿದರೆ ಅತೀ ವೇಗದ ಇಂಟರ್'ನೆಟ್ ಸೌಲಭ್ಯ ಪಡೆಯಬಹುದು.
ತೈವಾನ್ ದೇಶದ 'ಫಾಕ್ಸ್ಕಾನ್' ಎಂಬ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಜಿಯೋ ಸಿಮ್'ಗೆ ಬೆಂಬಲ ನೀಡುವ ವಿಂಡೋಸ್ ಸೇರಿದಂತೆ ಮುಂತಾದ ಸೌಲಭ್ಯವಿರುವ ಲ್ಯಾಪ್'ಟಾಪ್ ತಯಾರಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಉದ್ಘಾಟನೆಗೊಳ್ಳಲಿದೆ.
ಈ ಲ್ಯಾಪ್'ಟಾಪ್' 13.3 ಇಂಚಿನ ಫೂಲ್ ಹೆಚ್'ಡಿ ರೆಸಲ್ಯೂಶನ್'ನೊಂದಿಗಿನ ಡಿಸ್'ಪ್ಲೆ, 4ಜಿಬಿ ಟಾಮ್, 128 ಜಿಬಿ ಎಸ್'ಎಸ್'ಡಿ ಜೊತೆಗೆ ಹೆಚ್'ಡಿ ಕ್ಯಾಮರಾ ಅನುಕೂಲತೆಗಳಿರುತ್ತವೆ. ಬೇರೆ ಲ್ಯಾಪ್'ಟಾಪ್ ಸಂಸ್ಥೆಗಳಿಗಿಂತ ಅತೀ ಕಡಿಮೆ ಬೆಲೆಗೆ ಮಾರಾಟ ಮಾಡಲು ಜಿಯೊ ಮುಂದಾಗಿದೆ.
ಈಗಾಗಲೇ 1ಜಿಬಿ ಉಚಿತ ಇಂಟರ್'ನೆಟ್ ಸೇವೆಯನ್ನು 15 ದಿನಗಳು ವಿಸ್ತರಿಸಿರುವ ಜಿಯೋ ಅಷ್ಟು ದಿನಗಳಲ್ಲಿ 303 ರೂ. ಪಾವತಿಸಿದರೆ ಈಗಿರುವ ಸೌಲಭ್ಯಗಳು ಮತ್ತೆ 3 ತಿಂಗಳು ಮುಂದುವರಿಯುತ್ತವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.