ಗಳಗಳನೆ ಅತ್ತ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್

Published : Oct 15, 2016, 11:59 AM ISTUpdated : Apr 11, 2018, 01:10 PM IST
ಗಳಗಳನೆ ಅತ್ತ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್

ಸಾರಾಂಶ

ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ತೊರೆದಿರುವ ಪ್ರಸಾದ್ ಕಾಂಗ್ರೆಸ್​ ಪಕ್ಷದಲ್ಲಿ ತಾವು ನಂಬಿದ್ದ ನಾಯಕರೇ ತಮಗೆ ಕೈಕೊಟ್ಟು ಮೋಸ ಮಾಡಿದ್ದನ್ನು ತಮ್ಮ ಇಂದಿನ ಸ್ಥಿತಿಯನ್ನು ನೆನೆದು ಕಣ್ಣೀರು ಹಾಕಿದ್ದು ಸಮಾವೇಶದಲ್ಲಿದ್ದ ಎಲ್ಲರನ್ನು ಭಾವುಕರನ್ನಾಗಿ ಮಾಡಿತು

ಮೈಸೂರು(ಅ.15): ಹಿರಿಯ ರಾಜಕಾರಣಿ, ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ ಭಾವುಕರಾಗಿ ಗಳಗಳನೇ ಅತ್ತ ಘಟನೆ ಮೈಸೂರಿನಲ್ಲಿ ನೆಡೆದಿದೆ. ರಾಜ್ಯಮಟ್ಟದ ಬೌದ್ಧ ಧರ್ಮ ಸ್ವೀಕಾರ ಸಮಾವೇಶದಲ್ಲಿ ಭಾಗವಹಿಸಿದ್ದ ಶ್ರೀನಿವಾಸಪ್ರಸಾದ್ ಕವಿ ಸಿದ್ದಲಿಂಗಯ್ಯ ರಚಿಸಿದ ಹಾಡಿಗೆ ಭಾವುಕರಾಗಿದ್ದಾರೆ. `ನಾಡ ನಡುವಿನಿಂದ ಬಂದ ನೋವಿನ ಕೂಗೆ, ಆಕಾಶದ ಅಗಲಕ್ಕೂ ನಿಂತ ಆಲವೇ..'.ಎಂಬ ಹಾಡನ್ನು ಹಾಡಲಾರಂಭಿಸಿದಾಗ ಪ್ರಸಾದ್ ತೀವ್ರ ಭಾವೋದ್ವೆಗಕ್ಕೆ ಒಳಗಾದರು. ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ತೊರೆದಿರುವ ಪ್ರಸಾದ್ ಕಾಂಗ್ರೆಸ್​ ಪಕ್ಷದಲ್ಲಿ ತಾವು ನಂಬಿದ್ದ ನಾಯಕರೇ ತಮಗೆ ಕೈಕೊಟ್ಟು ಮೋಸ ಮಾಡಿದ್ದನ್ನು ತಮ್ಮ ಇಂದಿನ ಸ್ಥಿತಿಯನ್ನು ನೆನೆದು ಕಣ್ಣೀರು ಹಾಕಿದ್ದು ಸಮಾವೇಶದಲ್ಲಿದ್ದ ಎಲ್ಲರನ್ನು ಭಾವುಕರನ್ನಾಗಿ ಮಾಡಿತು.

ಎಂತಹದ್ದೇ ಪರಿಸ್ಥಿತಿಯಲ್ಲೂ ಕಣ್ಣು ತೇವ ಮಾಡಿಕೊಳ್ಳದ ಪ್ರಸಾದ್ ಇವತ್ತು ಮಾತ್ರ ಅತ್ಯಂತ ಭಾವುಕರಾದ ಕ್ಷಣಕ್ಕೆ ಸಮಾವೇಶ ಸಾಕ್ಷಿಯಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದ 2ನೇ ರಾಜಧಾನಿ ಬೆಳಗಾವಿಗೆ ಉತ್ತಮ ಭವಿಷ್ಯ: ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ಲೋಕಸಭೆಯಲ್ಲಿ 2 ರೈತಪರ ಮಸೂದೆ ಮಂಡನೆ: ಸಂಸದ ಡಾ.ಕೆ.ಸುಧಾಕರ್