ಶ್ರೀಲಂಕಾದಲ್ಲಿ ರಾಜಕೀಯ ಡ್ರಾಮಾ, ರಾಜಪಕ್ಷೆ ಹೊಸ ಪ್ರಧಾನಿ

By Web DeskFirst Published Oct 26, 2018, 9:43 PM IST
Highlights

ಶ್ರೀಲಂಕಾದಲ್ಲಿ ರಾಜಕಾಕಾರಣ ಕ್ಷಿಪ್ರ ಕ್ರಾಂತಿ ನಡೆದಿದೆ.  ಶುಕ್ರವಾರ ಶ್ರೀಲಂಕಾ ಸರ್ಕಾರದಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಅಲ್ಲಿನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಂದ ಅಧಿಕಾರ ಪಡೆದು ನೂತನ ಪ್ರಧಾನಿಯಾಗಿ ಮಹಿಂದಾ ರಾಜಪಕ್ಷೆ ಅಧಿಕಾರ ವಹಿಸಿಕೊಂಡಿದ್ದಾರೆ.

ಕೋಲಂಬೋ[ಅ.26]  ಶುಕ್ರವಾರ ಶ್ರೀಲಂಕಾ ಸರ್ಕಾರದಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಅಲ್ಲಿನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಂದ ಅಧಿಕಾರ ಪಡೆದು ನೂತನ ಪ್ರಧಾನಿಯಾಗಿ ಮಹಿಂದಾ ರಾಜಪಕ್ಷೆ ಅಧಿಕಾರ ವಹಿಸಿಕೊಂಡಿದ್ದಾರೆ.

ಸಮ್ಮಿಶ್ರ ಸರ್ಕಾರದಿಂದ ಸಿರಿಸೇನಾ ಅವರ ಪಕ್ಷ ಹೊರಬಂದ ನಂತರ ರಾಜಪಕ್ಷ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮೈತ್ರಿ ಸರ್ಕಾರದಿಂದ ಯುನೈಟೆಡ್ ಪೀಪಲ್ಸ್ ಫ್ರೀಡಂ ಅಲೈಯನ್ಸ್ (ಯುಪಿಎಫ್ಎ)ಹೊರಬಂದಿದೆ ಎಂದು ಸಿರಿಸೇನಾ ಸರ್ಕಾರದಲ್ಲಿದ್ದ ಕೃಷಿ ಸಚಿವ ಮಹಿಂದಾ ಅಮರವೀರ ತಿಳಿಸಿದ್ದಾರೆ ಎಂದು ವರದಿಯಾಗಿದೆ.

click me!