ಮನೆ ಟಿವಿ ತೆಗೆದಾಗ್ತಿನಿ ಅಂಥ ಎಚ್‌ಡಿಕೆ ಹೇಳಿದ್ದು ಯಾಕೆ?

Published : Oct 26, 2018, 08:47 PM ISTUpdated : Oct 26, 2018, 08:50 PM IST
ಮನೆ ಟಿವಿ ತೆಗೆದಾಗ್ತಿನಿ ಅಂಥ ಎಚ್‌ಡಿಕೆ ಹೇಳಿದ್ದು ಯಾಕೆ?

ಸಾರಾಂಶ

ಸಿಎಂ ಕುಮಾರಸ್ವಾಮಿ ಆರೋಗ್ಯ ಹದಗೆಡಲು ಮಾಧ್ಯಮಗಳೆ ಕಾರಣವಂತೆ, ಅದರಲ್ಲೂ ಪ್ರಮುಖವಾಗಿ ಟಿವಿ ಮಾಧ್ಯಮಗಳೆ ಕಾರಣವಂತೆ. ಸಿಎಂ ಇದೇ ವಿಚಾರದಲ್ಲಿ ಮಾಧ್ಯಮಗಳೆ ಮೇಲೆಯೆ ಹರಿಹಾಯ್ದಿದ್ದಾರೆ.

ಮಂಡ್ಯ[ಅ.26]  ಮತ್ತೆ ಮಾಧ್ಯಮಗಳ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಮಾಧ್ಯಮಗಳು ನನ್ನ ವಿರುದ್ಧ ಜನರನ್ನು ಎತ್ತಿ ಕಟ್ಟುತ್ತಿವೆ ಎಂದು ಆರೋಪಿಸಿದ್ದಾರೆ.

ನನ್ನನ್ನ ಯಾರೂ ಹಂಗಿನಲ್ಲಿ ಇಟ್ಟುಕೊಳ್ಳಲು ಆಗಲ್ಲ, ನಾನು ಏನೇ ಮಾತಾಡಿದ್ರು ತಿರುಚಿ ಬರೆಯುತ್ತಾರೆ.ಎಲ್ಲರ ಬಗ್ಗೆ ಹೇಳಲ್ಲ, ಬೆಂಗಳೂರಿನ ಕೆಲವು ಮಾಧ್ಯಮಗಳು ಎಂದು ಕಿಡಿಕಾರಿದರು. ನಾನು ಟಿವಿ ಚಾನೆಲ್ ಗಳಿಗೆ ಹೆದರಲ್ಲ. ಹೆದರಿಸೋಕೂ ಅವರಿಂದ ಸಾಧ್ಯವಿಲ್ಲ. ನಿಮ್ಮ ಬಂಡವಾಳ ಏನಿದೆ ಅನ್ನೋದನ್ನೂ ತೆಗೆಯಬೇಕಾಗುತ್ತೆ. ಪತ್ರಿಕಾ ಸ್ವಾತಂತ್ರ್ಯಕ್ಕೆ ನಾನು ಚ್ಯುತಿ ತರಲ್ಲ. ಬರೆಯಬೇಕಿದ್ರೆ ಸತ್ಯ ಬರೆಯಿರಿ. ನನ್ನ ಜೀವನದ ಜೊತೆ ಚೆಲ್ಲಾಟವಾಡ್ತಿದ್ದಾರೆ ಎಂದು ನೊಂದು ನುಡಿದರು.

ನಿಮ್ಮ ಮನೆ ಟಿವಿ ತೆಗೆದು ಹಾಕಿ ಅಂತಾ ಕೆಲವು ಡಾಕ್ಟರ್ ನನಗೆ ಸಲಹೆ ನೀಡಿದ್ದಾರೆ. ನಿಮಗೆ ಇಷ್ಟ ಬಂದಂತೆ ಬರೆಯಬೇಡಿ. ನಾನು ಭಂಡ ರಾಜಕಾರಣಿ ಅಲ್ಲ. ಮೊನ್ನೆ ನಾನು ದೇವರ ದಯೆಯಿಂದ ಬದುಕಿ ಬಂದಿದ್ದೇನೆ. ಜನರನ್ನು ದಿಕ್ಕು ತಪ್ಪಿಸಬೇಡಿ. ನನ್ನ ಭಾವನಾತ್ಮಕ ನಡವಳಿಕೆ ಜೊತೆ ಚೆಲ್ಲಾಟವಾಡಬೇಡಿ. ನನ್ನ ಆರೋಗ್ಯ ಕೆಡಲು ಕೆಲವು ಚಾನೆಲ್ ಗಳು ಕಾರಣ. ಇದು ಮುಂದುವರಿದರೆ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?