ಹೌಡಿ ಮೋದಿ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಹಾಡಲಿದ್ದಾನೆ 16 ವರ್ಷದ ಬಾಲಕ| ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಈತ ಎಲ್ಲರಿಗೂ ಪ್ರೇರಣೆ| ಯಾರೀತ? ಇಲ್ಲಿದೆ ಸಂಪೂರ್ಣ ವಿವರ
ಹೂಸ್ಟನ್[ಸೆ.22]: ಹೂಸ್ಟನ್ ನಲ್ಲಿ ನಡೆಯಲಿರುವ ಹೌಡಿ ಮೋದಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಮೋದಿ ಈಗಾಗಲೇ ಅಮೆರಿಕಾ ತಲುಪಿದ್ದು, ಈ ಕಾರ್ಯಕ್ರಮ ಇಡೀ ವಿಶ್ವದ ಗಮನ ಸೆಳೆದಿದೆ. ಸದ್ಯ ಇದಕ್ಕೂ ಇಂಟರೆಸ್ಟಿಂಗ್ ವಿಚಾರವೆಂದರೆ ಇಂದು ರಾತ್ರಿ ಹೂಸ್ಟನ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 16 ವರ್ಷದ ಭಾರತೀಯ ಮೂಲಕದ ಬಾಲಕನೊಬ್ಬ 50ಸಾವಿರ ಮಂದಿಯೆದುರು ರಾಷ್ಟ್ರಗೀತೆ ಹಾಡಲಿದ್ದಾನೆ. ಷ್ಟಕ್ಕೂ ಆತ ಯರು? ಯಾಕಿಷ್ಟು ಗಮನ ಸೆಳೆದಿದ್ದಾನೆ? ಇಲ್ಲಿದೆ ವಿವರ
ಅಮೆರಿಕದಲ್ಲಿಂದು ‘ಹೌಡಿ, ಮೋದಿ’ ಹವಾ!: ‘ದಾಖಲೆ’ಯ ಸಮಾವೇಶ ಉದ್ದೇಶಿಸಿ ಪಿಎಂ ಭಾಷಣ!
ಹೌದು ಹುಟ್ಟಿನಿಂದಲೇ ಆಸ್ಟ್ರಿಯೋಜಾನ್ಸಿಸ್ ಇಂಪರ್ಫೆಕ್ಟಾ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಭಾರತೀಯ ಮೂಲಕದ 16 ವರ್ಷದ ಸ್ಪರ್ಶ್ ಶಾ, ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಗೀತೆ ಹಾಡಲಿದ್ದಾನೆ. ಈ ಬಾಲಕ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಲು ಕಾತುರದಿಂದ ಕಾಯುತ್ತಿದ್ದಾನೆ. ಸ್ಪರ್ಶ್ ಶಾ ಓರ್ವ ರ್ಯಾಪರ್, ಗಾಯಕ, ಲೇಖಕ ಹಾಗೂ ಸ್ಪೂರ್ತಿದಾಯಕ ಭಾಷಣಕಾರ. ಈತ ಸದ್ಯ ಅಮೆರಿಕಾದ ನ್ಯೂ ಜರ್ಸಿಯಲ್ಲಿ ನೆಲೆಸಿದ್ದಾನೆ.
ವರದಿಗಳನ್ನು ಗಮನಿಸುವುದಾದರೆ ಕಳೆದ ಕೆಲ ವರ್ಷಗಳಲ್ಲಿ ಸ್ಪರ್ಶ್ ದೇಹದ ಸುಮಾರು 130 ಮೂಳೆಗಳು ಮುರಿದಿವೆ. ಇನ್ನೂ ಶಾಕಿಂಗ್ ವಿಚಾರವೆಂದರೆ ತಾಯಿಯ ಹೊಟ್ಟೆಯಲ್ಲಿದ್ದಾಗಲೇ ಈತನ ದೇಹದ ಸುಮಾರು 35 ಮೂಳೆಗಳು ಮುರಿದಿದ್ದವೆನ್ನಲಾಗಿದೆ. ಆಸ್ಟ್ರಿಯೋಜಾನ್ಸಿಸ್ ಇಂಪರ್ಫೆಕ್ಟಾದಿಂದಾಗಿ ಸ್ಪರ್ಶ್ ಗೆ ನಡೆದಾಡಲೂ ಕೂಡಾ ಆಗುವುದಿಲ್ಲ. 16 ವರ್ಷದ ಈ ಬಾಲಕನಿಗೆ ಈವರೆಗೂ ಒಟ್ಟು 100ಕ್ಕೂ ಅಧಿಕ ಫ್ರ್ಯಾಕ್ಚರ್ ಆಗಿದೆ. ಮಾರ್ಚ್ 2018ರಲ್ಲಿ ಬಿಡುಗಡೆಯಾದ 'ಬ್ರಿಟಲ್ ಬೋನ್ ರ್ಯಾಪರ್' ಸಾಕ್ಷ್ಯ ಚಿತ್ರದಲ್ಲಿ ಸ್ಪರ್ಶ್ ಶಾ ಜೀವನಗಾಥೆಯನ್ನು ತೋರಿಸಲಾಗಿದೆ.
ಮೋದಿ ವಿದೇಶಿ ರ‍್ಯಾಲಿಗಳತ್ತ ಕಣ್ಣು: ವಿಶ್ವ ವೇದಿಕೆಗಳಲ್ಲಿ ವಿಜೃಂಭಿಸಿದ ತಾಯ್ನಾಡಿನ ಮಣ್ಣು!
ಇನ್ನು ಇಂದು ಭಾನುವಾರ ನಡೆಯಲಿರುವ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಗೀತೆ ಹಾಡಲು ಸ್ಪರ್ಶ್ ಉತ್ಸುಕನಾಗಿದ್ದಾನೆ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಸ್ಪರ್ಶ್ 'ಇಷ್ಟು ದೊಡ್ಡ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಹಾಡಲು ನನಗೆ ಅವಕಾಶ ಸಿಕ್ಕಿದ್ದು ತುಂಬ ಖುಷಿ ಕೊಟ್ಟಿದೆ. ರಾಷ್ಟ್ರಗೀತೆ 'ಜನಗಣಮನ' ಹಾಡಲು ಬಹಳ ಉತ್ಸಾಹದಿಂದಿದ್ದೇನೆ. ನಾನು ಮೋದಿಯನ್ನು ಮೊದಲ ಬಾರಿ ಮೆಡಿಸಿನ್ ಸ್ಕ್ವಾಯರ್ ಗಾರ್ಡನ್ ನಲ್ಲಿ ನೋಡಿದ್ದೆ. ಅಂದು ನಾನು ಅವರನ್ನು ಭೇಟಿಯಾಗಲು ಬಯಸಿದ್ದೆ, ಆದರೆ ಸಾಧ್ಯವಾಗಲಿಲ್ಲ. ಕೇವಲ ಟಿವಿ ಸ್ಕ್ರೀನ್ ನಲ್ಲಿ ನೋಡುವ ಅವಕಾಶ ಸಿಕ್ಕಿತ್ತು. ಆದರೆ ದೇವರ ಕೃಪೆಯಿಂದ ನನಗೆ ಮೋದಿಯನ್ನು ಭೇಟಿಯಾಗುವ ಅವಕಾಶ ಒದಗಿ ಬಂದಿದೆ' ಎಂದಿದ್ದಾರೆ.
ಸ್ಪರ್ಶ್ ಈ ಹಿಂದೆ ಅಮೆರಿಕಾರ ಖ್ಯಾತ ರ್ಯಾಪರ್ ಎಮಿನೆಮ್ ರ 'ನಾಟ್ ಅಫ್ರೈಡ್' ಎಂಬ ಹಾಡನ್ನು ಹಾಡುವ ಮೂಲಕ ಬಹಳಷ್ಟು ಸದ್ದು ಮಾಡಿದ್ದರು. ಈ ಹಾಡನ್ನು 65 ಮಿಲಿಯನ್ ಗೂ ಅಧಿಕ ಮಂದಿ ವೀಕ್ಷಿಸಿದ್ದರು. ಎಮಿನೆಮ್ ರಿಂದ ಬಹಳಷ್ಟು ಪ್ರಭಾವಿತನಾಗಿರುವ ಸ್ಪರ್ಶ್ ತಾನು ಕೂಡಾ ಓರ್ವ ಫೇಮಸ್ ರ್ಯಾಪರ್ ಆಗಬೇಕೆಂಬ ಕನಸು ಕಂಡಿದ್ದಾನೆ.