ವಿಶ್ವಾಸಮತಕ್ಕೆ ಗೈರಾಗಿದ್ದ ಕೈ ಶಾಸಕನಿಗೆ ಬಿಗ್ ರಿಲೀಫ್, ಕೇಸು ಖುಲಾಸೆ

By Web Desk  |  First Published Jul 24, 2019, 6:54 PM IST

ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಹೆಸರು ಕೇಳಿ ಬಂದಿದ್ದ ಶಾಸಕರೊಬ್ಬರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಶಾಸಕರನ್ನು ಜನಪ್ರತಿನಿಧಿನಗಳ ನ್ಯಾಯಾಲಯ ಆರೋಪ ಮುಕ್ತಗೊಳಿಸಿದೆ.


ಬೆಂಗಳೂರು[ಜು. 24]  ಬಳ್ಳಾರಿಯ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹೆಸರು ಕೇಳಿ ಬಂದಿದ್ದ ಶಾಸಕರಿಗೆ ಬಿಗ್ ರಿಲೀಫ್ ಸಿಕ್ಕಿದೆ.  ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ  ಅವರನ್ನು ಆರೋಪದಿಂದ ನ್ಯಾಯಾಲಯ ಖುಲಾಸೆ ಮಾಡಿದೆ.

ಕಾಂಗ್ರೆಸ್ ಪಕ್ಷದಿಂದ  ನಾಗೇಂದ್ರ ಶಾಸಕರಾಗಿ 2018ರಲ್ಲಿ ಆರಿಸಿ ಬಂದಿದ್ದರು. ಬದಲಾದ ರಾಜಕೀಯ ವಾತಾವರಣದಲ್ಲಿ ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆ ಮಾಡುವ ಸಂದರ್ಭ ನಾಗೆಂದ್ರ ಗೈರಾಗಿದ್ದರು. 

Tap to resize

Latest Videos

ಗಣಿ ಹಗರಣದಲ್ಲಿ ಲೋಕಾಯುಕ್ತ ಸಂತೋಷ್ ಹೆಗ್ಡೆ ನೀಡಿದ್ದ ವರದಿ

ಹೃದಯ ಸಂಬಂಧಿ ಕಾಯಿಲೆಯಿಂದ ನಾಗೇಂದ್ರ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿತ್ತು. ಇನ್ನೊಂದು ಕಡೆ ವಿಶ್ವಾಸ ಮತದಿಂದ ತಪ್ಪಿಸಿಕೊಳ್ಳಲು ಸದನಕ್ಕೆ ಉದ್ದೇಶಪೂರ್ವಕವಾಗಿ ಗೈರಾಗಿದ್ದು   ಬಿಜೆಪಿ ಪರವಾಗಿ ನಿಂತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

click me!