
ನವದೆಹಲ;ಇ[ಸೆ.15]: 80ಕ್ಕೂ ಹೆಚ್ಚು ಕೇಸಿನಲ್ಲಿ ಸಿಕ್ಕಿಹಾಕಿಕೊಂಡಿರುವ ಉತ್ತರಪ್ರದೇಶದ ಎಸ್‌ಪಿ ನಾಯಕ ಆಜಂ ಖಾನ್ ಅವರನ್ನು ಭೇಟಿ ಮಾಡಲು ಅವರದ್ದೇ ಪಕ್ಷದ ನಾಯಕ ಫಿರೋಜ್ ನವವರನಂತೆ ವೇಷ ಧರಿಸಿ ಬಂದ ಘಠನೆ ನಡೆದಿದೆ.
ಹಲವು ಎಸ್‌ಪಿ ನಾಯಕರು ಆಜಂಖಾನ್‌ಗೆ ಬೆಂಬಲ ಸೂಚಿಸಲು ಆಗಮಿಸುತ್ತಿರುವ ಕಾರಣ ರಾಂಪುರದಲ್ಲಿ ಆಜಂ ಮನೆ ಮುಂದೆ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.
ಎಮ್ಮೆ ಬಳಿಕ ಆಜಂ ಖಾನ್ ವಿರುದ್ಧ ಮೇಕೆ ಕಳ್ಳತನದ ಆರೋಪ!
ಎಸ್‌ಪಿ ನಾಯಕರನ್ನು ಮನೆ ಬಳಿಗೆ ಸುಳಿಯಬಿಡುತ್ತಿಲ್ಲ. ಈ ವಿಷಯದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಎಸ್‌ಪಿ ನಾಯಕ ಪಿರೋಜ್‌ಖಾನ್ ಮದುವೆಗೆ ಸಿದ್ಧನಾಗಿ ಹೊರಟ ವರನಂತೆ ಮುಖಕ್ಕೆ ಹೂವಿನ ಹಾರ ಮುಚ್ಚಿಕೊಂಡು ಆಜಂ ಮನೆಯತ್ತ ಹೊರಟ್ಟಿದ್ದರು.
ಆದರೆ ಫಿರೋಜ್ ಬಣ್ಣ ಬಯಲು ಮಾಡಿದ ಪೊಲೀಸರು ಅವರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.