
ಬೆಂಗಳೂರು (ಫೆ.25): ಬಾಲಿವುಡ್ ಮೋಹಕ ತಾರೆ ಶ್ರೀದೇವಿ ಇನ್ನು ನೆನೆಪು ಮಾತ್ರ. 80-90 ರ ದಶಕದಲ್ಲಿ ಬಾಲಿವುಡ್’ನ ಆಳಿದ ನಟಿ ಇವರು.
ಶ್ರೀದೇವಿ ಮೂಲತಃ ತಮಿಳುನಾಡಿನ ಶಿವಕಾಶಿಯವರು. ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಇವರು ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬಾಲಿವುಡ್’ನಲ್ಲಿ ದೊಡ್ಡ ಹೆಸರು ಮಾಡಿದ ದಕ್ಷಣ ಭಾರತದ ನಟಿಯಿವರು. ಬಾಲಿವುಡ್’ನ ಆಳಿದ ಇತರೇ ಸೌತ್ ಇಂಡಿಯನ್ ನಟಿಗಳಿವರು
ರೇಖಾ
ಚಿರ ಯೌವ್ವನೆ ರೇಖಾ ತಮಿಳುನಾಡಿನವರು. ಖ್ಯಾತ ತಮಿಳು ನಟ ಜೆಮಿನಿ ಗಣೇಶನ್ ಪುತ್ರಿ. ಬಾಲಿವುಡ್’ನಲ್ಲಿ ದೊಡ್ಡ ಹೆಸರು ಮಾಡಿದ ಮಹಾನ್ ಕಲಾವಿದೆಯಿವರು. 180 ಚಿತ್ರಗಳಲ್ಲಿ ನಟಿಸಿದ್ದಾರೆ.
ವಹೀದಾ ರೆಹಮಾನ್
ಬಾಲಿವುಡ್’ನ ಪ್ರತಿಭಾನ್ವಿತ ನಟಿಯರಲ್ಲಿ ವಹೀದಾ ರೆಹಮಾನ್ ಹೆಸರು ಮುಂಚೂಣಿಯಲ್ಲಿದೆ. ಇವರು ಮೂಲತಃ ತಮಿಳುನಾಡಿನವರು. ಬೆಳೆದದ್ದೆಲ್ಲಾ ಹೖದರಾಬಾದ್’ನಲ್ಲಿ.
ಜಯಪ್ರದ
ಮೋಹಕ ಚೆಲುವೆ ಜಯಪ್ರದಾ ಆಂಧ್ರ ಪ್ರದೇಶ ಮೂಲದವರು. 80-90 ರ ದಶಕದಲ್ಲಿ ಹುಡುಗರ ಹಾರ್ಟಿಗೆ ಲಗ್ಗೆ ಇಟ್ಟ ಮೋಹಕ ಚೆಲುವೆ ಜಯಪ್ರದ.
ವೈಜಯಂತಿ ಮಾಲಾ
ಇವರು ತಮಿಳುನಾಡು ಮೂಲದವರು. 13 ನೇ ವಯಸ್ಸಿನಲ್ಲಿ ಬಾಲಿವುಡ್ ಪ್ರವೇಶಿಸಿದರು. 1950 ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದವರು ವೈಜಯಂತಿ ಮಾಲಾ
ಹೇಮಾ ಮಾಲಿನಿ
ಡ್ರೀಮ್ ಗರ್ಲ್ ಹೇಮಾ ಮಾಲಿನಿ ತಮಿಳುನಾಡಿನ ಅಮ್ಮನ್ ಕುಡಿಯಲ್ಲಿ ಜನಿಸಿದರು. 1963 ರಲ್ಲಿ ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ಆ ನಂತರ ಹಿಂತಿರುಗಿ ನೋಡಲೇ ಇಲ್ಲ. ಬಾಲಿವುಡ್’ನಲ್ಲಿ ಖ್ಯಾತ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಐಶ್ವರ್ಯ ರೈ
ಮೂಲತಃ ಕರ್ನಾಟಕದವರು. ದೇವ್’ದಾಸ್, ಹಮ್ ದಿಲ್ ದೇ ಚುಕೆ ಸನಮ್ , ಮೊಹಬ್ಬತೇ, ತಾಲ್ ಚಿತ್ರದ ಮೂಲಕ ಬಾಲಿವುಡ್’ನಲ್ಲಿ ಮಿಂಚಿದವರು.
ವಿದ್ಯಾ ಬಾಲನ್
ಎಲ್ಲಾ ರೀತಿಯ ಪಾತ್ರಗಳಿಂದ ಜನರ ಮನಸ್ಸನ್ನು ಗೆದ್ದವರು ವಿದ್ಯಾ ಬಾಲನ್. ಇವರೂ ಕೂಡಾ ದಕ್ಷಿಣ ಬಾರತದವರು.
ದೀಪಿಕಾ ಪಡುಕೋಣೆ
ಬಾಲಿವುಡ್’ನ ಬಹುಬೇಡಿಕೆಯ ನಟಿ ದೀಪಿಕಾ ಕೂಡಾ ದಕ್ಷಿಣ ಭರತದ ನಟಿ. ಕೊಂಕಣಿ ಕುಟುಂಬಕ್ಕೆ ಸೇರಿದ ಇವರು ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ.
ಶಿಲ್ಪಾ ಶೆಟ್ಟಿ
ತಳಕು ಬಳಕಿನ ಚೆಲುವೆ ಶಿಲ್ಪಾ ಶೆಟ್ಟಿ ಮಂಗಳೂರು ಮೂಲದವರು. ತಮ್ಮ ಸೌಂದರ್ಯ, ನಟನೆ ಮೂಲಕ ಬಾಲಿವುಡ್’ನಲ್ಲಿ ಹೆಸರು ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.