ದಕ್ಷಿಣ ಏಷ್ಯಾದಲ್ಲೆಲ್ಲ ಮೊಳಗಿದ ಕನ್ನಡದ ಕಾಯ್ಕಿಣಿ ಹೆಸರು

By Web DeskFirst Published Nov 21, 2018, 11:52 PM IST
Highlights

ಜಗತ್ತಿನ ಮಟ್ಟದಲ್ಲಿ ಕನ್ನಡದ ಸಾಹಿತ್ಯದ ಹಿರಿಮೆ ಮತ್ತಷ್ಟು ಹೆಚ್ಚಾಗಿದೆ. ಜಯಂತ್ ಕಾಯ್ಕಿಣಿ ಅವರ ಹೆಸರು ಕನ್ನಡತನವನ್ನು ಸಾರಿದೆ. ಅವರ ಪುಸ್ತಕವೊಂದು ದಕ್ಷಿಣ ಏಷ್ಯಾ ಸಾಹಿತ್ಯ ಲೋಕದ ಮೇರು ಕುರ್ಚಿಯಲ್ಲಿ ವಿರಾಜಮಾನವಾಗಿದೆ.

ಬೆಂಗಳೂರು[ನ.21] ದಕ್ಷಿಣ ಏಷ್ಯಾ ಸಾಹಿತ್ಯಕ್ಕಾಗಿನ 25 ಸಾವಿರ ಅಮೆರಿಕನ್ ಡಾಲರ್ ಮೊತ್ತದ ಪ್ರಶಸ್ತಿ ಡಿಎಸ್ ಸಿ ಬಹುಮಾನಕ್ಕಾಗಿ ನಡೆಯುತ್ತಿರುವ ಸಾಹಿತ್ಯ ಪ್ರಶಸ್ತಿ ಆಯ್ಕೆ ವೇಳೆ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಮುಂಬೈ ಕಥೆಗಳ ಇಂಗ್ಲಿಷ್ ಅನುವಾದ ‘ನೋ ಪ್ರಸೆಂಟ್ಸ್ ಪ್ಲೀಸ್’ ಕೃತಿ ಹೆಸರು ಉಲ್ಲೇಖವಾಗಿದೆ.

ಕವಿ, ಸಾಹಿತಿ ಜಯಂತ್ ಕಾಯ್ಕಿಣಿ ಅವರ ಮುಂಬೈ ಕಥೆಗಳ ಇಂಗ್ಲಿಷ್ ಅನುವಾದ ‘ನೋ ಪ್ರಸೆಂಟ್ಸ್ ಪ್ಲೀಸ್’ ಕೃತಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಡಿಎಸ್​ಸಿ ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು.

ಮುಂಬೈ ಬದುಕು ಆಧಾರಿತ ಕಾಯ್ಕಿಣಿಯವರ ಈ ಕೃತಿಯನ್ನು ತೇಜಸ್ವಿನಿ ನಿರಂಜನ್ ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದಾರೆ.  ಪ್ರಶಸ್ತಿಗೆ ಆಯ್ಕೆಯಾಗುವ ಕೃತಿಗಳು ದಕ್ಷಿಣ ಏಷ್ಯಾ ಮತ್ತು ಅಲ್ಲಿನ ಜನಜೀವನಕ್ಕೆ ಸಂಬಂಧಿಸಿ ಮಾತ್ರ ಇರತಕ್ಕದ್ದು. ಈ ಪ್ರಶಸ್ತಿಗೆ ಒಟ್ಟು 90 ಕೃತಿಗಳು ಪ್ರವೇಶ ಪಡೆದಿದ್ದವು. ಆ ಪೈಕಿ ಮೊದಲ ಸುತ್ತಿನಲ್ಲಿ ಕಾಯ್ಕಿಣಿ ಅವರ ಕೃತಿ ಸೇರಿ 16 ಕೃತಿಗಳು ಮಾತ್ರ ಕೊನೆಯ ಸುತ್ತಿಗೆ ಆಯ್ಕೆಯಾಗಿದ್ದವು.

 


 

click me!