
ಬಾಗಲಕೋಟೆ (ಜ.19): ಹುನಗುಂದ ತಾಲೂಕಿನ ಹೊಸೂರಿನ ನೇತ್ರಾವತಿ ಎಂ.ಚವಾಣ್ ಗೆ ಮರಣೋತ್ತರವಾಗಿ ಗೀತಾ ಚೋಪ್ರಾ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಘೋಷಿಸಲಾಗಿದೆ. ಇಂಡಿಯನ್ ಕೌನ್ಸಿಲ್ ಬಾರ್ ಚೈಲ್ಡ್ ವೆಲ್'ಕೇರ್ ಈ ಪ್ರಶಸ್ತಿ ಪ್ರಕಟಿಸಿದ್ದು ಜ.24 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ದೇಶದ ವಿವಿ ರಾಜ್ಯಗಳ ಒಟ್ಟು 18 ಮಕ್ಕಳು ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದು ಮೂವರಿಗೆ ಮರಣೋತ್ತರವಾಗಿ ಪ್ರಶಸ್ತಿ ಘೋಷಿಸಲಾಗಿದೆ. 2017 ರ ಮೇ 13 ರಂದು ಕಲ್ಲಿನ ಕ್ವಾರಿಯ ಸಮೀಪದಲ್ಲಿದ್ದ ಕೆರೆಯಲ್ಲಿ ಬಟ್ಟೆ ಒಗೆಯುತ್ತಿದ್ದ ಸಂದರ್ಭದಲ್ಲಿ ಮುತ್ತು ಮತ್ತು ಗಣೇಶ್ ಎಂಬ ಇಬ್ಬರು ಬಾಲಕರು ನೀರಿನಲ್ಲಿ ಮುಳುಗುತ್ತಿದ್ದರು. ತಕ್ಷಣವೇ ಅವರ ರಕ್ಷಣೆಗೆ ಧಾವಿಸಿದ ನೇತ್ರಾವತಿ ಮುತ್ತು ಅನ್ನು ದಡಕ್ಕೆ ಎಳೆದುಕೊಂಡು ಬರಲು ಸಫಲರಾದರು. ಆ ಬಳಿಕ ಗಣೇಶ್'ನ ರಕ್ಷಣೆಗೆ ನೇತ್ರಾವತಿ ಧಾವಿಸಿದಳು. ಆದರೆ ಗಣೇಶ್'ನ ರಕ್ಷಣೆ ವೇಳೆ ಇಬ್ಬರು ಕೂಡ ಪ್ರಾಣ ತೆತ್ತರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.