ನಲ್ಲಿಯಿಂದ ಸೋರುವ ನೀರು ಪ್ಲಿಂಕ್ ಪ್ಲಿಂಕ್ ಎನ್ನುತ್ತೆ ಏಕೆ..?

Published : Jun 25, 2018, 11:30 AM IST
ನಲ್ಲಿಯಿಂದ ಸೋರುವ ನೀರು ಪ್ಲಿಂಕ್ ಪ್ಲಿಂಕ್ ಎನ್ನುತ್ತೆ ಏಕೆ..?

ಸಾರಾಂಶ

ಸರಿಯಾಗಿ ಬಂದ್ ಮಾಡದ ಕೊಳಾಯಿಯಲ್ಲಿ ನೀರು ಸೋರುತ್ತಿರುತ್ತದೆ. ಅದು ನಲ್ಲಿಯ ಕೆಳಗಿರುವ ಪಾತ್ರೆ ಅಥವಾ ಬಕೆಟ್ ನೀರಿನ ಮೇಲೆ ಬಿದ್ದು ಒಂದು ವಿಚಿತ್ರ ಶಬ್ದ ಮಾಡುತ್ತದೆ. ಅದರ ಕಿರಿಕಿರಿ ಸಹಿಸಲಾಗದೆ ಎದ್ದು ಹೋಗಿ ಸರಿಯಾಗಿ ನಲ್ಲಿಯನ್ನೇನೋ ಬಂದ್ ಮಾಡಿ ಬರುತ್ತೀರಿ. 

ನವದೆಹಲಿ: ಸರಿಯಾಗಿ ಬಂದ್ ಮಾಡದ ಕೊಳಾಯಿಯಲ್ಲಿ ನೀರು ಸೋರುತ್ತಿರುತ್ತದೆ. ಅದು ನಲ್ಲಿಯ ಕೆಳಗಿರುವ ಪಾತ್ರೆ ಅಥವಾ ಬಕೆಟ್ ನೀರಿನ ಮೇಲೆ ಬಿದ್ದು ಒಂದು ವಿಚಿತ್ರ ಶಬ್ದ ಮಾಡುತ್ತದೆ. ಅದರ ಕಿರಿಕಿರಿ ಸಹಿಸಲಾಗದೆ ಎದ್ದು ಹೋಗಿ ಸರಿಯಾಗಿ ನಲ್ಲಿಯನ್ನೇನೋ ಬಂದ್ ಮಾಡಿ ಬರುತ್ತೀರಿ. 

ಆದರೆ ಕಿರಿಕಿರಿ ಉಂಟು ಮಾಡಿದ ಶಬ್ದದ ಮೂಲ ಯಾವುದೆಂದು ಯೋಚಿಸಿದ್ದೀರಾ? ದೀರ್ಘ ಕಾಲದಿಂದ ರಹಸ್ಯವಾಗಿದ್ದ ಈ ವಿಷಯವನ್ನು ಕೊನೆಗೂ ಪತ್ತೆ ಹಚ್ಚಿರುವುದಾಗಿ ಎಂಜಿನಿಯರ್‌ಗಳ ತಂಡವೊಂದು ಹೇಳಿಕೊಂಡಿದೆ. ನಲ್ಲಿಯಿಂದ ನೀರಿನ ಹನಿ ಅದರ ಕೆಳಭಾಗದಲ್ಲಿರುವ ನೀರಿನ ಮೇಲೆ ಬಿದ್ದಾಗ ಪ್ಲಿಂಕ್, ಪ್ಲಿಂಕ್, ಪ್ಲಿಂಕ್ ಎಂಬ ಶಬ್ದ ಬರುತ್ತದೆ. ಇದು ನೀರು ಬಿದ್ದ ರಭಸಕ್ಕೆ ಅಥವಾ ಬಿದ್ದ ಪರಿಣಾಮದಿಂದ ಬರುವ ಶಬ್ದವಲ್ಲ. 

ಬದಲಿಗೆ ನೀರಿನೊಳಗಿನ ಗಾಳಿ ಗುಳ್ಳೆಯ ಶಬ್ದ ಎಂದು ಕೇಂಬ್ರಿಜ್ ವಿವಿ ಎಂಜಿನಿಯರ್‌ಗಳು ಕಂಡುಕೊಂಡಿದ್ದಾರೆ. ಹೈಸ್ಪೀಡ್ ಕ್ಯಾಮೆರಾ  ಹಾಗೂ ಧ್ವನಿ ಗ್ರಹಿಸುವ ತಂತ್ರಗಳನ್ನು ಬಳಸಿ ಈ ಸಂಶೋಧನೆಯನ್ನು ಮಾಡಲಾಗಿದೆ. ಈ ಬಗ್ಗೆ 20ನೇ ಶತಮಾನದ ಆರಂಭದಿಂದಲೂ ಸಂಶೋಧನೆ ನಡೆಯುತ್ತಿತ್ತು.

 

(ಸಾಂದರ್ಬಿಕ ಚಿತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!