
ಬೆಂಗಳೂರು (ಜೂ. 25): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಹಂತಕರು ಕರ್ನಾಟಕ ಪೊಲೀಸರನ್ನು ನಿರ್ಲಕ್ಷಿಸಿದ್ದೇ ಎಸ್ ಐಟಿ ಗೆ ವರದಾನವಾಯಿತು. ಆರೋಪಿಗಳನ್ನ ಪತ್ತೆ ಹಚ್ಚಲು ಪೊಲೀಸರಿಂದ ಸಾಧ್ಯವಿಲ್ಲ ಎಂದು ಹಂತಕರು ಊಹಿಸಿದ್ದರು. ಇದೇ ಕಾರಣಕ್ಕೆ ಭಗವಾನ್ ಹತ್ಯೆಗೆ ಮುಂದಾಗಿದ್ದರು.
ಮಹಾರಾಷ್ಟ್ರದಲ್ಲಿ ಇಬ್ಬರು ವಿಚಾರವಾದಿಗಳ ಹತ್ಯೆಯಾಗಿತ್ತು. ಅಲ್ಲಿನ ಸರ್ಕಾರ ಎಸ್ಐಟಿ ಮತ್ತು ಸಿಬಿಐ ತನಿಖೆಗೆ ಅದೇಶಿಸಿತ್ತು. ಸಿಬಿಐ ತನಿಖೆ ಮಾಡಿದ್ರೂ ಹಂತಕರನ್ನ ಪತ್ತೆ ಹಚ್ಚುವಲ್ಲಿ ವಿಫಲವಾಗಿತ್ತು. ಸಿಬಿಐನಿಂದ ಆಗದ್ದು ರಾಜ್ಯ ಪೊಲೀಸರಿಂದ ಏನ್ ಅಗುತ್ತೆ ಎಂದು ಹಂತಕರು ಶಂಕಿಸಿದ್ದರು. ಆದರೆ ಅವರ ಊಹೆ ತಲೆಕೆಳಗಾಗಿದೆ.
ಎಸ್ಐಟಿ ತನಿಖೆಯನ್ನ ನೆಗ್ಲೆಟ್ ಮಾಡಿ ಪ್ರೊ ಕೆ ಎಸ್ ಭಗವಾನ್ ಹತ್ಯೆಗೆ ಹಂತಕರು ಸ್ಕೇಚ್ ಹಾಕಿದ್ದರು. ಭಗವಾನ್ ಹತ್ಯೆಗೆ ಪಿಸ್ತೂಲ್ ಸಾಗಾಟ ಮಾಡುವ ವೇಳೆ ನವೀನ್ ಕುಮಾರ್ ಸಿಕ್ಕಿಬಿದ್ದ. ನವೀನ್ ಬಂಧನದ ಬಳಿಕ ಇಡೀ ಹಂತಕರ ಟೀಂ ಎಸ್ಐಟಿ ಬಲೆಗೆ ಬಿತ್ತು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.