‘30ಕ್ಕೂ ಹೆಚ್ಚು ಶಾಸಕರು ಬಿಜೆಪಿಗೆ’

By Web DeskFirst Published May 25, 2019, 10:33 AM IST
Highlights

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಪಡೆದುಕೊಂಡಿದ್ದು, ಇದೀಗ 30 ಶಾಸಕರು ಬಿಜೆಪಿಗೆ ಬರಲು ಸಜ್ಜಾಗಿದ್ದಾರೆ ಎನ್ನಲಾಗಿದೆ. 

ದಾವ​ಣ​ಗೆರೆ: ಲೋಕ​ಸಭೆ ಚುನಾ​ವಣೆ ಫಲಿ​ತಾಂಶ ಹೊರ ಬೀಳು​ತ್ತಿ​ದ್ದಂತೆಯೇ ಮೈತ್ರಿ ಛಿದ್ರ​ಗೊಂಡಿದೆ. ಕಾಂಗ್ರೆ​ಸ್‌ ಹಾಗೂ ಜೆಡಿ​ಎಸ್‌ ಪಕ್ಷ​ಗಳ 30ಕ್ಕೂ ಹೆಚ್ಚು ಶಾಸ​ಕರು ಬಿಜೆ​ಪಿಗೆ ಇಂದೋ ನಾಳೆಯೋ ಬರ​ಲಿ​ದ್ದು 2 ದಿನದಲ್ಲೇ ಮೈತ್ರಿ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಮಾಜಿ ಸಚಿವ ಮುರು​ಗೇಶ ನಿರಾಣಿ ತಿಳಿ​ಸಿ​ದ್ದಾರೆ. 

ನಗ​ರ​ದಲ್ಲಿ ಶುಕ್ರ​ವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಲೋಕ​ಸಭೆ ಚುನಾ​ವಣೆ ಫಲಿತಾಂಶ ಹೊರ ಬೀಳು​ತ್ತಲೇ ಮೈತ್ರಿ ಸರ್ಕಾ​ರವೂ ಪತ​ನ​ವಾ​ಗ​ಲಿ​ಯೆಂದು ಹೇಳಿ​ದ್ದೆವು. ಈಗ ಹಾಗೆಯೇ ಆಗಲಿದೆ. ಕಾಂಗ್ರೆಸ್‌, ಜೆಡಿ​ಎಸ್‌ ಪಕ್ಷ​ಗಳ ಶಾಸ​ಕರು ಈಗಾ​ಗಲೇ ನಮ್ಮ ಪಕ್ಷದ ಜೊತೆಗೆ ನಿರಂತರ ಸಂಪ​ರ್ಕ​ದ​ಲ್ಲಿ​ದ್ದಾರೆ. ಮೈತ್ರಿ ಪಕ್ಷ​ಗ​ಳಿಂದ ಯಾರು ಯಾರು ಬರು​ತ್ತಾ​ರೆಂಬು​ದನ್ನು ಕಾದು ನೋಡಿ ಎಂದು ಹೇಳಿದರು. 

ದೇಶದ ಜನತೆ ನರೇಂದ್ರ ಮೋದಿಗೆ ಮತ್ತೊಮ್ಮೆ ಆಶೀ​ರ್ವಾದ ಮಾಡಿ​ದ್ದಾರೆ. ಅದ​ರಲ್ಲೂ ರಾಜ್ಯ​ದಲ್ಲಿ 25 ಪ್ಲಸ್‌ 1 ಒಟ್ಟು 26 ಸ್ಥಾನ​ಗ​ಳಲ್ಲಿ ಗೆಲ್ಲಿ​ಸಿ​ದ್ದಾರೆ ಎನ್ನುವ ಮೂಲಕ ಮಂಡ್ಯದ ಪಕ್ಷೇತರ ಸಂಸದೆ ಸುಮ​ಲತಾ ಅಂಬ​ರೀಷ್‌ ಬಿಜೆಪಿ ಸೇರಬಹು​ದೆಂಬ ಸುಳಿ​ವನ್ನು ಸೂಕ್ಷ್ಮ​ವಾಗಿ ಬಿಡಿ​ಸಿ​ಟ್ಟರು.

click me!