ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ಎಚ್ಚರ!: ಫೇಸ್ಬುಕ್ ಚಟಕ್ಕೆ ಬಿದ್ದು ಹೆತ್ತವರ ಮರ್ಯಾದೆ ತೆಗೆದ ಕುಲಪುತ್ರ

Published : May 26, 2017, 11:50 AM ISTUpdated : Apr 11, 2018, 12:40 PM IST
ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ಎಚ್ಚರ!: ಫೇಸ್ಬುಕ್ ಚಟಕ್ಕೆ ಬಿದ್ದು ಹೆತ್ತವರ ಮರ್ಯಾದೆ ತೆಗೆದ ಕುಲಪುತ್ರ

ಸಾರಾಂಶ

ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಪೋಷಕರೇ ಎಚ್ಚರ. ಯಾಕೆಂದರೆ ಬೆಂಗಳೂರಿನಲ್ಲಿ ವಿಚಿತ್ರ ಪ್ರಕರಣವೊಂದು ಬಯಲಾಗಿದೆ. ಫೇಸ್​'ಬುಕ್​ ಚಟಕ್ಕೆ ಬಿದ್ದ ಮಗ ತನ್ನ ತಂದೆ-ತಾಯಿ ಮರ್ಯಾದೆ ಹರಾಜು ಹಾಕಿದ್ದಾನೆ.

ಬೆಂಗಳೂರು(ಮೇ.26): ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಪೋಷಕರೇ ಎಚ್ಚರ. ಯಾಕೆಂದರೆ ಬೆಂಗಳೂರಿನಲ್ಲಿ ವಿಚಿತ್ರ ಪ್ರಕರಣವೊಂದು ಬಯಲಾಗಿದೆ. ಫೇಸ್​'ಬುಕ್​ ಚಟಕ್ಕೆ ಬಿದ್ದ ಮಗ ತನ್ನ ತಂದೆ-ತಾಯಿ ಮರ್ಯಾದೆ ಹರಾಜು ಹಾಕಿದ್ದಾನೆ.

13 ವರ್ಷದ ಮಗ ಫೇಸ್ಬುಕ್​'ನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿದ್ದಾನೆ. ಅಷ್ಟರಲ್ಲೇ ಆತನ ಫೇಸ್ಬುಕ್ ಅಕೌಂಟ್'​ಗೆ ತೇಜಲ್ ಪಟೇಲ್ ಎನ್ನುವ ವ್ಯಕ್ತಿಯ ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಹಿಂದೂ ಮುಂದೂ ನೋಡದೇ ಬಾಲಕ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿಕೊಂಡಿದ್ದಾನೆ. ನಂತರ ತೇಜಲ್ ಪಟೇಲ್, ಬಾಲಕನಿಗೆ ನಿರಂತರವಾಗಿ ಅಶ್ಲೀಲ ಫೋಟೋ, ವಿಡಿಯೋ ಕಳಿಸುತ್ತಿದ್ದು, ಬಳಿಕ ನಿಮ್ಮ ಅಪ್ಪ-ಅಮ್ಮನ ಸರಸ ಸಲ್ಲಾಪದ ವಿಡಿಯೋ ಕಳಿಸು ಅಂತ ಬಾಲಕನಿಗೆ ಹೇಳಿದ್ದಾನೆ. ಮುಂದೆ ಪರಿಣಾಮ ಏನಾಗಬಹುದು ಎಂದು ಯೋಚಿಸದ ಬಾಲಕ ಮೊಬೈಲ್'​ನಲ್ಲಿ ತನ್ನ ಪೋಷಕರ ಏಕಾಂತದ ವಿಡಿಯೋ ಕಳಿಸಿದ್ದಾನೆ.

ಆ ವಿಡಿಯೋ ಇಟ್ಟುಕೊಂಡ ಖತರ್ನಾಕ್ ತೇಜಸ್, ಬಾಲಕನ ಅಪ್ಪನಿಗೆ ಕರೆ ಮಾಡಿ ಹಣದ ಬೇಡಿಕೆ ಇಟ್ಟಿದ್ದಾನೆ. ಇದೀಗ ಬಾಲಕನ ಪೋಷಕರು ಇದೇ ತಿಂಗಳ 20ರಂದು ಸಿಐಡಿಗೆ ದೂರು ನೀಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈ ಹೌಸಿಂಗ್ ಕಾಂಪ್ಲೆಕ್ಸ್‌ನಲ್ಲಿ ಅಗ್ನಿ ದುರಂತ, ನಿರ್ದೇಶಕ ಸಂದೀಪ್ ಸಿಂಗ್ ಸೇರಿ 40 ಮಂದಿ ರಕ್ಷಣೆ
ಹೊಸ ವರ್ಷಕ್ಕೆ ಎಲೆಕ್ಟ್ರಾನಿಕ್ ಸಿಟಿ ಹೈ ಅಲರ್ಟ್; ಮಹಿಳೆಯರ ಸುರಕ್ಷತೆಗೆ 'ರಾಣಿ ಚೆನ್ನಮ್ಮ ಪಡೆ ಸಜ್ಜು, ಪಬ್-ಬಾರ್‌ಗಳಿಗೆ ಪೊಲೀಸರ ಬಿಗಿ ರೂಲ್ಸ್!