ಪೋಷಕರಿಗೆ ಹೆದರಿ ಅತ್ಯಾಚಾರದ ಸುಳ್ಳು ಕತೆ ಕಟ್ಟಿದ ಅಪ್ರಾಪ್ತೆ!

Published : Oct 07, 2016, 03:12 AM ISTUpdated : Apr 11, 2018, 12:54 PM IST
ಪೋಷಕರಿಗೆ ಹೆದರಿ ಅತ್ಯಾಚಾರದ ಸುಳ್ಳು ಕತೆ ಕಟ್ಟಿದ ಅಪ್ರಾಪ್ತೆ!

ಸಾರಾಂಶ

ಅತ್ಯಾಚಾರದ ಕಟ್ಟುಕತೆ ಕಟ್ಟಿದ ಅಪ್ರಾಪ್ತೆ | ಪೋಷಕರ ನಿಂದನೆಗೆ ಹೆದರಿ ಬಾಲಕಿಯಿಂದ ಸುಳ್ಳು

ಬೆಂಗಳೂರು (ಅ.07): ಪೋಷಕರು ಬೇರೊಬ್ಬರೊಂದಿಗೆ ವಿವಾಹ ಮಾಡುತ್ತಾರೆಂದು ಆತಂಕ​ಗೊಂಡು ಪ್ರಿಯಕರನೊಂದಿಗೆ ಪರಾರಿ​ಯಾ​ಗಿದ್ದ ಅಪ್ರಾಪ್ತೆ ಬಳಿಕ ಸಮಸ್ಯೆ​ಯಿಂದ ಪಾರಾಗಲು ತನ್ನನ್ನು ಅಪ​​ಹ​ರಿಸಿ​ದ್ದಾಗ್ಯೂ, ತನ್ನ ಮೇಲೆ ಅತ್ಯಾಚಾರ ನಡೆದಿರುವುದಾಗಿಯೂ ಸುಳ್ಳು ಹೇಳಿ ಕೊನೆಗೆ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾಳೆ. 

ಪೋಷಕರ ದೂರಿ​ನ ಹಿನ್ನೆಲೆಯಲ್ಲಿ ಪೊಲೀಸರು ಗುಡ್ಡದ​ಹಳ್ಳಿಯ ಫರ್ಖಾನ್‌ ಅಹ್ಮದ್‌ (18) ಹಾಗೂ ಆತನ ಸ್ನೇಹಿತ ಸಂದೀಪ್‌ (18) ಎಂಬಾತನ ಅಪಹರಣದ ಆರೋಪ­ ದಡಿ ಬಂಧಿಸಿದ್ದು, ಜೈಲಿಗೆ ಕಳುಹಿಸಿದ್ದಾರೆ.
ಫರ್ಖಾನ್‌ ಹಾಗೂ ಬಾಲಕಿ ಚಾಮ​ರಾಜಪೇಟೆಯ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದು, ಪರಸ್ಪರ ಪ್ರೀತಿ­ಸು­ತ್ತಿದ್ದರು. ಫರ್ಖಾನ್‌ ಅನ್ಯ ಧರ್ಮೀ­ಯನೆಂಬ ಕಾರಣಕ್ಕೆ ಬಾಲಕಿ ಮನೆ­ಯವರು ಮದುವೆಗೆ ನಿರಾಕರಿಸಿದ್ದರು.

ಇದ​ರಿಂದ ಗೊಂದಲಕ್ಕೀಡಾದ ಬಾಲಕಿ, ಮನೆಯಿಂದ ಪರಾರಿಯಾಗಿದ್ದಳು. ಈ ಸಂಬಂಧ ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಬಾಲಕಿ ತಾಯಿಗೆ ಆರೋಗ್ಯ ಹದಗೆಟ್ಟಿದೆ ಎಂದು ಪೊಲೀಸರು ಕಳುಹಿಸಿದ ಸಂದೇಶ ಓದಿದ ನಂತರ ಮನೆಗೆ ಬಂದ ಬಾಲಕಿ, ಪೋಷಕರಿಂದ ತಪ್ಪಿಸಿಕೊಳ್ಳಲು ಸುಳ್ಳಿನ ಕತೆ ಕಟ್ಟಿದ್ದಾಳೆ.

ಹೆಚ್ಚಿನ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

30-Year-Old Debt: 30 ವರ್ಷಗಳ ಹಳೆಯ ಸಾಲ ತೀರಿಸಲು 1200 ಕಿ.ಮೀ. ಪ್ರಯಾಣ! ಕೊಟ್ಟ ಮಾತು ಉಳಿಸಿಕೊಂಡ ಸ್ನೇಹಿತ
Gaur Gopal Das Quote: ಪ್ರತಿ ದಿನವೂ ಒಂದೇ ರೀತಿ ಇರಲ್ಲ; ಕೆಟ್ಟ ದಿನಗಳ ದಾಟಿ ಮುನ್ನಡೆಯೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್