ಅಪ್ಪನ ಮನೆ ತನ್ನ ಆಜನ್ಮ ಸಿದ್ಧ ಹಕ್ಕು ಎಂದುಕೊಂಡ ಮಕ್ಕಳಿಗೆ ಕೋರ್ಟ್ ಶಾಕ್

Published : Nov 30, 2016, 02:25 AM ISTUpdated : Apr 11, 2018, 12:36 PM IST
ಅಪ್ಪನ ಮನೆ ತನ್ನ ಆಜನ್ಮ ಸಿದ್ಧ ಹಕ್ಕು ಎಂದುಕೊಂಡ ಮಕ್ಕಳಿಗೆ ಕೋರ್ಟ್ ಶಾಕ್

ಸಾರಾಂಶ

ಅಪ್ಪ- ಅಮ್ಮ  ಆಸ್ತಿ ಮಾಡಿಟ್ಟಿದ್ದಾರೆ ನಾವು ಆರಾಮಾಗೆ ಇರಬಹುದು ಅನ್ನೋ ಐಡಿಯಾ ಮಕ್ಕಳಲ್ಲಿದ್ದರೆ, ಇನ್ಮುಂದೆ ಅಂತಾ ಆಲೋಚನೆಗಳನ್ನು ಮಕ್ಕಳು ಮಾಡದೇ ಇರೋದು  ಒಳ್ಳೋದು. ಏಕೆಂದರೆ ಅಪ್ಪ -ಅಮ್ಮನ ಆಸ್ತಿಯಲ್ಲಿ ಎಂಜಾಯ್​ ಆಗಿ ಇರಬಹುದು ಎಂಬ ಮಕ್ಕಳಿಗೆ ದೆಹಲಿ ಹೈಕೋರ್ಟ್​ ಶಾಕ್​ ನೀಡಿದೆ.

ನವದೆಹಲಿ(ನ. 30): ತಂದೆ, ತಾಯಿಯ ಒಪ್ಪಿಗೆ ಇಲ್ಲದೇ ಅವರ ಮನೆಯಲ್ಲಿರಲು ಮಕ್ಕಳಿಗೆ ಹಕ್ಕಿಲ್ಲ ಎಂದು ದೆಹಲಿ ಹೈಕೋರ್ಟ್​ ನಿನ್ನೆ ಮಂಗಳವಾರ ಮಹತ್ವದ ತೀರ್ಪು ಹೊರಡಿಸಿದೆ. ಇದು ಅಚ್ಚರಿ ಅನ್ನಿಸಿದ್ರೂ ಸತ್ಯ.  ತಂದೆ-ತಾಯಿ ಸಂಪಾದಿಸಿದ ಮನೆಯಲ್ಲಿ ಮಕ್ಕಳು ವಾಸಿಸಲು ಯಾವುದೇ ಕಾನೂನಾತ್ಮಕ ಹಕ್ಕಿಲ್ಲವೆಂದು ದೆಹಲಿ ಹೈಕೋರ್ಟ್​​ ಮಹತ್ವದ ತೀರ್ಪುವೊಂದು ನೀಡಿದೆ. ಮಗ ವಿವಾಹಿತನಿರಲಿ, ಅವಿವಾಹಿತನಿರಲಿ ತಂದೆ-ತಾಯಿ ಒಪ್ಪಿಗೆ ಇದ್ದಲ್ಲಿ ಮಾತ್ರ ಅವರ ಜೊತೆ ಮನೆಯಲ್ಲಿ ವಾಸಿಸಲು ಅವಕಾಶ ಇದೆ ಎಂದು ಹೈಕೋರ್ಟ್​​ ತೀರ್ಪು ನೀಡಿ ಆದೇಶ ಹೊರಡಿಸಿದೆ.

ಇಷ್ಟೇ ಅಲ್ಲ, ವಯಸ್ಸಾಗಿರುವ ಅಪ್ಪ-ಅಮ್ಮನಿಗೆ ಮಕ್ಕಳು ಕಿರುಕುಳ ನೀಡದಂತೆ ನೋಡಿಕೊಳ್ಳಬೇಕು. ಅವರ ಆರೈಕೆ ಮಾಡಬೇಕು. ಹಾಗಂತ ಜೀವನ ಪೂರ್ತಿ ಪೋಷಕರಿಗೆ ಹೊರೆಯಾಗಬಾರದು ಎಂದು ಕೂಡ ಹೈಕೋರ್ಟ್ ಆದೇಶಿಸಿದೆ.

ದೆಹಲಿಯಲ್ಲಿ ಒಬ್ಬ ಪೋಷಕರನ್ನು ಮನೆ ಖಾಲಿ ಮಾಡಿಸಲು ಮಗನೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರತಿಭಾ ರಾಣಿ. ಮನೆಯು ಪೋಷಕರ ಸ್ವಯಾರ್ಜಿತ ಆಸ್ತಿಯಾಗಿದ್ದರೆ, ವಿವಾಹಿತ ಅಥವಾ ಅವಿವಾಹಿತ ಮಗ ಕೇವಲ ಅನುಕಂಪದ ಮೇಲೆ ಮಾತ್ರ ಅವರೊಂದಿಗೆ ವಾಸಿಸಬಹುದು. ಅದೂ ಪೋಷಕರ ಒಪ್ಪಿಗೆ ಇದ್ದರೆ ಮಾತ್ರ. ಇಲ್ಲ ಎಂದರೆ ಮಕ್ಕಳು ಮನೆಯಿಂದ ಖಾಲಿ ಮಾಡಬೇಕೆಂದು ಆದೇಶ ನೀಡಿದ್ದಾರೆ.

ಒಟ್ಟಿನಲ್ಲಿ ಪೋಷಕರು ಸಂಪಾದಿಸಿದ ಆಸ್ತಿಯಲ್ಲಿ ಎಂಜಾಯ್​​ ಮಾಡುವ ಮಕ್ಕಳಿಗೆ ದೆಹಲಿ ಹೈಕೋರ್ಟ್ ಶಾಕ್​ ನೀಡಿದೆ. ಪೋಷಕರ ಮೇಲೆ ಅವಲಂಬನೆ ಆಗದೇ ಸ್ವಂತ ಕಾಲಿನ ಮೇಲೆ ನಿಲ್ಲುವ ಜವಾಬ್ದಾರಿಯನ್ನ ಕೋರ್ಟ್​ ಕಾನೂನಿನ ಮೂಲಕ ಹೇಳ ಹೊರಟಿರುವುದು ನಾಗರೀಕ ಸಮಾಜದ ಬದಲಾವಣೆಗೆ ಹೊಸದೊಂದು ಅಧ್ಯಾಯವೇ ಎನ್ನಬಹುದು.

- ಜೆ.ಎಸ್​. ಪೂಜಾರ್​, ನ್ಯೂಸ್​​ ಬ್ಯೂರೋ, ಸುವರ್ಣನ್ಯೂಸ್​​

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು