ಸಂಬಳದ ವಾರ: ಬ್ಯಾಂಕ್`ಗೆ ಮುಗಿಬೀಳುವ ಜನರಿಗೆ ಕ್ಯಾಶ್ ಒದಗಿಸಲು ಆರ್`ಬಿಐ ಏನು ಮಾಡುತ್ತಿದೆ ಗೊತ್ತಾ..?

Published : Nov 29, 2016, 11:52 PM ISTUpdated : Apr 11, 2018, 12:55 PM IST
ಸಂಬಳದ ವಾರ: ಬ್ಯಾಂಕ್`ಗೆ ಮುಗಿಬೀಳುವ ಜನರಿಗೆ ಕ್ಯಾಶ್ ಒದಗಿಸಲು ಆರ್`ಬಿಐ ಏನು ಮಾಡುತ್ತಿದೆ ಗೊತ್ತಾ..?

ಸಾರಾಂಶ

ಬ್ಯಾಂಕ್`ಗಳಲ್ಲಿ ನಗದು ಕೊರತೆ ನೀಗಿಸಿ, ಸಂಬಳದಾರರಿಗೆ ಹಣ ಒದಗಿಸುವುದನ್ನ ಆರ್`ಬಿಐ ಮೊದಲ ಆದ್ಯತೆಯಾಗಿ ಪರಿಗಣಿಸಿದೆ.

ನವದೆಹಲಿ(ಸ.30): ನೋಟ್ ಬ್ಯಾನ್ ಆದೇಶ ಬಂದಾಗಿನಿಂದಿ ಹಣದ ಬಗ್ಗೆ ಜನರಲ್ಲಿ ಕೆಲ ಗೊಂದಲಗಳು ಇನ್ನೂ ಪರಿಹಾರವಾಗಿಲ್ಲ. ಡಿ.1 ಬಹುತೇಕ ನೌಕರರಿಗೆ ಸಂಬಳದ ದಿನವಾಗಿದ್ದು, ಜನ ತಮ್ಮ ದಿನನಿತ್ಯದ ಅವಶ್ಯಕತೆಗೆ ಸಂಬಳದ ಹಣ ಡ್ರಾ ಮಾಡಲು ಬ್ಯಾಂಕ್`ಗಳಿಗೆ ಬೀಳಲಿದ್ದಾರೆ. ಸದ್ಯ, ಬಹುತೇಕ ಬ್ಯಾಂಕ್ ಎಟಿಎಂಗಳಲ್ಲಿ ನೋ ಕ್ಯಾಶ್ ಎಂಬ ಬೋರ್ಡ್ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ ಮೊದಲ ವಾರದಲ್ಲಿ ಉಂಟಾಗಲಿರುವ ಸಮಸ್ಯೆ ತಡೆಯುವುದಕ್ಕೆ ಆರ್`ಬಿಐ ಈ ಕೆಲ ಕ್ರಮಗಳನ್ನ ಕೈಗೊಂಡಿದೆ.

- ಹಣದ ವೇಗದ ಹರಿವಿಗಾಗಿ ರಿಸರ್ವ್ ಬ್ಯಾಂಕಿನಿಂದ ದೇಶದ ವಿವಿಧೆಡೆಗೆ ಹಣ ರವಾನೆಗೆ ವಾಯುಪಡೆ ಹೆಲಿಕಾಪ್ಟರ್`ಗಳನ್ನ ಸಜ್ಜಾಗಿ ಇರಿಸಲಾಗಿದೆ. ಅಗತ್ಯಕ್ಕೆ ತಕ್ಕಂತೆ ಹೆಲಿಕಾಪ್ಟರ್`ಗಳ ಮೂಲಕ ನಾಳೆಯಿಮದ ಮೆಟ್ರೋ ನಗರಗಳ ಬ್ಯಾಂಕ್`ಗಳಿಗೆ ಹಣ ರವಾನೆಯಾಗುತ್ತೆ.

- ಸಾರ್ವಜನಿಕರ ಅನುಕೂಲಕ್ಕಾಗಿ ಹೆಚ್ಚುವರಿ ಕೌಂಟರ್`ಗಳನ್ನ ತೆರೆಯುವಂತೆ ರಿಸರ್ವ್ ಬ್ಯಾಂಕ್, ಬ್ಯಾಂಕ್`ಗಳಿಗೆ ಸೂಚಬೆ ನೀಡಿದೆ.

- ಇಲ್ಲಿಯವರೆಗೆ ಕೇವಲ 2000 ರೂಪಾಯಿ ನೋಟುಗಳನ್ನ ಕಂಡಿದ್ದ ಹಲವು ಬ್ಯಾಂಕ್`ಗಳಿಗೆ 500 ರೂಪಾಯಿಯ ನೋಟುಗಳನ್ನ ಹೆಚ್ಚು ರವಾನಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎರಡನೇ ವಿಶ್ವ ಆಯುರ್ವೇದ ಸಮ್ಮೇಳನ ಹಲವು ದಾಖಲೆಗಳಿಗೆ ಸಾಕ್ಷಿ: ಡಾ.ಗಿರಿಧರ ಕಜೆ
ದಾವಣಗೆರೆಯ ಶೈಕ್ಷಣಿಕ ಪುನರುಜ್ಜೀವನದ ಶಿಲ್ಪಿ ಶಾಮನೂರು