
ಮುದ್ದಿನಿಂದ ಸಾಕಿದ ಮಗ, ದೊಡ್ಡವನಾಗಿ ಉದ್ಯೋಗಕ್ಕೆ ಸೇರಿ ತನ್ನ ಪ್ರೀತಿಯ ಅಪ್ಪನಿಗೆ ಉಡುಗೊರೆ ನೀಡುತ್ತಾನೆಂದಾದರೆ ಆ ಕ್ಷಣ ಪ್ರತಿಯೊಬ್ಬರನ್ನೂ ಭಾವುಕರನ್ನಾಗಿಸುತ್ತದೆ. ಅಪ್ಪನ ಕಣ್ತುಂಬಿ ಬರುವುದಲ್ಲಿ ಅನುಮಾನವಿಲ್ಲ. ಜೀವಮಾನವಿಡೀ ದುಡಿದ ಹಣವನ್ನು ಮಕ್ಕಳಿಗಾಗಿ ವ್ಯಯಿಸಿ, ಅವರು ದೊಡ್ಡವರಾಗಿ ತನ್ನ ಕನಸನ್ನು ಸಾಕಾರಗೊಳಿಸದರೆ ಅದಕ್ಕಿಂತ ದೊಡ್ಡ ಖುಷಿ ಬೇರೆ ಸಿಗುವುದಿಲ್ಲ. ಹೌದು ಹೆತ್ತವರು ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ನೀಡುವ ಸಲುವಾಗಿ, ಅವರು ಉನ್ನತ ಸ್ಥಾನಕ್ಕೇರಬೇಕೆಂಬ ನಿಟ್ಟಿನಲ್ಲಿ ತಮ್ಮ ಇಚ್ಛೆಗಳನ್ನು ಮರೆತು ಬಿಡುತ್ತಾರೆ.
ಸದ್ಯ ಮಲೇಷ್ಯಾದ ಕಲುವಾಂಗ್ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಇದಕ್ಕೆ ಉತ್ತಮ ಉದಾಹರಣೆಯಂತಿದೆ. ಇಲ್ಲೊಬ್ಬ ಮಗ ತನ್ನ ತಂದೆಗೆ ನ್ಯೂ ಇಯರ್ ಸಂದರ್ಭದಲ್ಲಿ ಹೊಸ ಕಾರನ್ನು ಉಡುಗೊರೆಯಾಗಿ ನೀಡಿದ್ದಾನೆ. ಈ ಸಂದರ್ಭದಲ್ಲಿ ವಿಡಿಯೋ ಚಿತ್ರೀಕರಿಸಲಾಗಿದ್ದು, ತಂದೆಯ ಮುಖದಲ್ಲಿ ಕಂಡು ಬಂದ ಭಾವನೆ ಎ್ಲಲರನ್ನೂ ಭಾವುಕರನ್ನಾಗಿಸುತ್ತದೆ.
ಮೊದಲಿಗೆ ತಂದೆಗೆ ಏನಾಗುತ್ತಿದೆ ಎಂದು ಅರ್ಥವೇ ಆಗುವುದಿಲ್ಲ. ಆದರೆ ಯವಾಗ ಮಗ ತನ್ನ ಬಳಿ ಬಂದು ಕಾರಿನ ಕೀ ನೀಡುತ್ತಾನೋ ಆ ವೇಳೆ, ಭಾವುಕರಾಗಿ ಅತ್ತು ಬಿಡುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ