ಅತಿಥಿ ಉಪನ್ಯಾಸಕರಲ್ಲೂ ನಕಲಿ ಪಿಎಚ್'ಡಿ ಪದವೀಧರರು

Published : Nov 25, 2017, 12:08 PM ISTUpdated : Apr 11, 2018, 01:02 PM IST
ಅತಿಥಿ ಉಪನ್ಯಾಸಕರಲ್ಲೂ ನಕಲಿ ಪಿಎಚ್'ಡಿ ಪದವೀಧರರು

ಸಾರಾಂಶ

ರಾಜ್ಯಾದ್ಯಂತ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಸುಮಾರು 7500 ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ 1500ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ನಕಲಿ ಪಿಎಚ್‌'ಡಿ ಪ್ರಮಾಣ ಪತ್ರದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೊಪ್ಪಳ(ನ.25): ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾದ ವೇಳೆ ಸಿಕ್ಕಿ ಬಿದ್ದ ನಕಲಿ ಪಿಎಚ್‌'ಡಿ ಪದವೀಧರರ ವಿರುದ್ಧ ಕಾಲೇಜು ಶಿಕ್ಷಣ ಇಲಾಖೆ ಈಗಾಗಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ. ಆದರೆ, ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವವರಲ್ಲಿಯೂ ಅನೇಕರು ನಕಲಿ ಪಿಎಚ್‌'ಡಿ ಪದವೀಧರರಿದ್ದಾರೆ. ಅವರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಎನ್ನುವ ಪ್ರಶ್ನೆ ಎದ್ದಿದೆ.

42 ನಕಲಿ ಪಿಎಚ್‌'ಡಿ ಪದವೀಧರರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವ ಮೂಲಕ ಕಾಲೇಜು ಶಿಕ್ಷಣ ಇಲಾಖೆ ದಿಟ್ಟ ಕ್ರಮ ಕೈಗೊಂಡಿದೆ. ಇಂಥದ್ದೆ ಕ್ರಮವನ್ನು ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವವರ ವಿರುದ್ಧವೂ ಕೈಗೊಳ್ಳಲು ಮುಂದಾಗಬೇಕಾಗಿದೆ ಎನ್ನುವುದು ಅರ್ಹಅಭ್ಯರ್ಥಿಗಳ ಆಗ್ರಹವಾಗಿದೆ.

1500ಕ್ಕೂ ಅಧಿಕ: ರಾಜ್ಯಾದ್ಯಂತ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಸುಮಾರು 7500 ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ 1500ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ನಕಲಿ ಪಿಎಚ್‌'ಡಿ ಪ್ರಮಾಣ ಪತ್ರದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೆಲ್ಲವೂ ಗೊತ್ತಿದ್ದರೂ ಕಾಲೇಜು ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಇಂಥ ನಕಲಿ ಪಿಎಚ್‌'ಡಿ ಪದವಿ ಹೊಂದಿದವರು ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡುತ್ತಾರೆ. ಇವರಿಗೆ ಯಾವ ನೈತಿಕತೆ ಇದೆ ಎನ್ನುವುದು ವಿದ್ಯಾರ್ಥಿಗಳ ಪ್ರಶ್ನೆ.

ಏನಿದು ನಕಲಿ ಪಿಎಚ್‌'ಡಿ?: ಪಿಎಚ್‌'ಡಿ ಪದವಿ ಪಡೆಯುವುದು ಅಷ್ಟು ಸುಲಭ ಸಾಧ್ಯವಿಲ್ಲ. ಹೀಗಾಗಿ, ಇದಕ್ಕಾಗಿ ಬಹುತೇಕರು ಅಡ್ಡ ಹಾದಿ ಹಿಡಿಯುತ್ತಾರೆ. ಸಿಎಂಜೆ, ಬುಂದೇಲ್‌'ಖಂಡ ಜಾನ್ಸಿ, ಮಗದ ಹಾಗೂ ವಿವೇಕಾನಂದ ಎನ್ನುವ ವಿವಿಯಗಳಿಂದ ಪಿಎಚ್‌'ಡಿ ಪದವಿಗಳನ್ನು ಪಡೆದಿದ್ದಾರೆ. ದೂರ ಶಿಕ್ಷಣದ ಮೂಲಕವೇ ಇವರಿಗೆ ಪಿಎಚ್‌'ಡಿ ಪ್ರಮಾಣ ಪತ್ರ ನೀಡುತ್ತಾರೆ.

ಇದಕ್ಕಾಗಿ ಅಭ್ಯರ್ಥಿಗಳು ಯಾವುದೇ ಅಧ್ಯಯನ ನಡೆಸುವುದೇ ಇಲ್ಲ. ಆದರೂ ಪಿಎಚ್‌'ಡಿ ಪದವಿ ನೀಡಲಾಗುತ್ತದೆ. ಇದಕ್ಕಾಗಿ ಲಕ್ಷಾಂತರ ರುಪಾಯಿ ನೀಡಬೇಕು. ಐದು ವರ್ಷ ಕಷ್ಟಪಟ್ಟು ಓದಿದರೂ ಪಿಎಚ್‌'ಡಿ ಲಭ್ಯವಾಗುವುದು ಕಷ್ಟ. ಆದರೆ, ಇಲ್ಲಿ ಮಾತ್ರ 2-3 ತಿಂಗಳೊಳಗಾಗಿಯೇ ಪಿಎಚ್‌'ಡಿ ಪ್ರಮಾಣ ಪತ್ರ ನೀಡಲಾಗುತ್ತದೆ. ಅಬ್ಬಬ್ಬಾ ಎಂದರೆ ಆರು ತಿಂಗಳಲ್ಲಿಯೇ ನೀಡಲಾಗುತ್ತದೆ. ಇಂಥ ನಕಲಿ ಪಿಎಚ್‌'ಡಿ ಪ್ರಮಾಣ ಪತ್ರ ಸಲ್ಲಿಸಿದವರ ವಿರುದ್ಧ ಕ್ರಿಮಿನಲ್ ಕೇಸ್ ಜಡಿಯಲಾಗಿದೆ. ಇದೇ ನಕಲಿ ಪಿಎಚ್‌'ಡಿ ಪ್ರಮಾಣ ಪತ್ರ ಪಡೆದವರು ರಾಜ್ಯಾದ್ಯಂತ ಸರ್ಕಾರಿ ಕಾಲೇಜುಗಳಲ್ಲಿಯೇ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಖಾಸಗಿ ಕಾಲೇಜುಗಳಲ್ಲಿಯೂ ಇಂಥ ವರು ಅನೇಕರಿದ್ದು, ಕೆಲವರು ಕಾಯಂ ಸಹ ಆಗಿದ್ದಾರೆ.

ಸಮಗ್ರ ತನಿಖೆಗೆ ಆಗ್ರಹ:ಈ ಕುರಿತು ಸಮಗ್ರ ತನಿಖೆ ನಡೆಸಬೇಕು. ನಕಲಿ ಪಿಎಚ್‌'ಡಿ ಪದವಿ ಪಡೆದು ಉಪನ್ಯಾಸಕರಾಗಿ ನೇಮಕವಾಗಿರುವುದರಿಂದ ಅರ್ಹರು ಅವಕಾಶ ವಂಚಿತರಾಗಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎನ್ನುವ ಆಗ್ರಹವೂ ಕೇಳಿ ಬರುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಳಪತಿ ವಿಜಯ್-ರಜನಿಕಾಂತ್: ಈ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು? ಎಲ್ಲಾ ಆಸ್ತಿ ರಹಸ್ಯ ಬಯಲು!
14,19,06,98,900 ಲಾಟರಿ ಗೆದ್ದ ವಿಚಾರ ಯಾರಿಗೂ ಗೊತ್ತಾಗಬಾರದು ಅಂತ ಮುಖವಾಡ ಧರಿಸಿ ಲಾಟರಿ ಹಣ ಪಡೆದ ಯುವಕ