
ಸವಣೂರು: ‘ಚುನಾವಣೆಯಲ್ಲಿ ನನಗೆ ನನ್ನ ಹಾಗೂ ನನ್ನ ಧರ್ಮಪತ್ನಿ ಮತ ಬಿದ್ದರು ಸಾಕು ನಾನು ನಾಮಪತ್ರ ಸಲ್ಲಿಸುವದು ನಿಶ್ಚಿತ. 19ರಂದು ಶಿಗ್ಗಾಂವಿ-ಸವಣೂರ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವೆ’ ಎಂದು ಪರಿಷತ್ ಸದಸ್ಯ, ಬಿಜೆಪಿ ಬಂಡಾಯ ಅಭ್ಯರ್ಥಿ ಸೋಮಣ್ಣ ಬೇವಿನಮರದ ಹೇಳಿದರು.
ತಾಲೂಕಿನ ಶ್ರೀಕ್ಷೇತ್ರ ಕಾರಡಗಿಯಲ್ಲಿ ಮಾತನಾಡಿದ ಅವರು, ಬಿಎಸ್‌ವೈ ಅವರು ಬೊಮ್ಮಾಯಿ ಅವರ ಹೆಸರು ಸೂಚಿಸಿದ ದಿನದಿಂದ(ಡಿ.25) ನಾನು ಮತ ಪ್ರಚಾರವನ್ನು ಆರಂಭಿಸಿದ್ದೇನೆ. ಇಂದು ಶ್ರೀ ಕ್ಷೇತ್ರಕ್ಕೆ ಪೂಜೆಯನ್ನು ಸಲ್ಲಿಸಲು ಬಂದಿದ್ದೆ. ಬೆಂಬಲಿಗರ ಒತ್ತಾಯದ ಮೇರಿಗೆ ಸಭೆಯನ್ನು ಕೈಗೊಳ್ಳಲಾಗುತ್ತಿದೆ. ನಾನು ಚುನಾವಣೆಯಿಂದ ಹಿಂದೇ ಸರಿಯುವ ಮಾತೇ ಇಲ್ಲ ಎಂದರು.
ಜನರ ನಾಡಿ ಮಿಡಿತವನ್ನು ಅರ್ಥಮಾಡಿಕೊಂಡಿದ್ದೇನೆ. ಅನ್ಯಾಯದ ವಿರುದ್ಧ ಹೋರಾಡುವ ಮೂಲಕ ಸ್ವಾಭಿಮಾನದಿಂದ ಚುನಾವಣೆಯನ್ನು ಎದುರಿಸುವ ಮೂಲಕ ಗೆಲವು ಪಡೆಯುವದು ನಿಶ್ಚಿತವಾಗಿದೆ. ಕ್ಷೇತ್ರದ ಜನತೆ ನ್ಯಾಯದ ಪರವಾಗಿದ್ದಾರೆ. ನನಗೆ ಆಗಿರುವ ಅನ್ಯಾಯವನ್ನು ಅರ್ಥೈಯಿಸಿಕೊಂಡಿದ್ದಾರೆ. ಕಳೇದ ಎರಡು ಚುನಾವಣೆಯಲ್ಲಿ ಬೊಮ್ಮಾಯಿ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದು ಹಣ ಪಡೆದು ಅಲ್ಲ, ಬಿಎಸ್‌ವೈ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಎಂಬುವದು ಸರ್ವರಿಗೂ ಗೊತ್ತಿದೆ.
ಬಿಜೆಪಿ ಉನ್ನತ ನಾಯಕರಿಗೂ ಸಹ ಗೊತ್ತಿದೆ. ಯಾರೇ ಏನೋ ಹೇಳಿದರು ಸಹ ಶ್ರೀ ವೀರಭದ್ರೇಶ್ವರನ ಅಂಗಳದಲ್ಲಿ ನಿಂತು ಹೇಳುತ್ತಿದ್ದೇನೆ ಇದು ಸುಳ್ಳು ಅಲ್ಲ ಎಂದರು.
ಬಿಜೆಪಿ ವಿರುದ್ದ ಬಂಡಾಯ ಎದ್ದ ಒಕ್ಕೂಟ ಸದಸ್ಯರಲ್ಲಿ ಕೇವಲ ಇಬ್ಬರು ಮಾತ್ರ(ಸೋಮಣ್ಣ ಬೇವಿನಮರದ ಹಾಗೂ ಶಶಿಧರ ಯಲಿಗಾರ) ಸಭೆಯಲ್ಲಿ ಪಾಲ್ಗೊಂಡಿದ್ದರು.
ಮಾಜಿ ಶಾಸಕ ರಾಜಶೇಖರ ಸಿಂಧೂರ ಹಾಗೂ ಶ್ರೀಕಾಂತ ದುಂಡಿಗೌಡ್ರ ಸಭೆಗೆ ಗೈರ ಹಾಜರಿದ್ದರು. ಆದರೆ, ಸಿಂಧೂರ ಸಹೋದರರಾದ ಬಸವರಾಜ ಸಿಂಧೂರ, ವಿರುಪಾಕ್ಷಪ್ಪ ಸಿಂಧೂರ, ಜೈರಾಜ್ ಸಿಂಧೂರ, ಮುಖಂಡರಾದ ಚಂದ್ರಣ್ಣ ಗುದಗಿ, ಫಕ್ಕಿರಪ್ಪ ಹರಿಜನ ಹಾಗೂ ಇತರರು ಪಾಲ್ಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.