ಭಾರತೀಯ ಸೇನೆಯನ್ನು ದೊಡ್ಡ ಅಪಾಯದಿಂದ ಪಾರು ಮಾಡಿದ ಇಬ್ಬರು ಯೋಧರ ಪತ್ನಿಯರು!

Published : Nov 30, 2016, 06:00 AM ISTUpdated : Apr 11, 2018, 12:56 PM IST
ಭಾರತೀಯ ಸೇನೆಯನ್ನು ದೊಡ್ಡ ಅಪಾಯದಿಂದ ಪಾರು ಮಾಡಿದ ಇಬ್ಬರು ಯೋಧರ ಪತ್ನಿಯರು!

ಸಾರಾಂಶ

ಸೈನಿಕರ ವಸತಿ ಪ್ರದೇಶಕ್ಕೆ ನುಗ್ಗಿದ ಮೂವರು ಶಸ್ತ್ರಸಜ್ಜಿತ ಉಗ್ರರು ಅಧಿಕಾರಿಗಳ ಕುಟುಂಬ ಮತ್ತು ಸೈನಿಕರು ವಾಸವಿದ್ದ ಕಟ್ಟಡಗಳನ್ನು ವಶಕ್ಕೆ ಪಡೆಯಲು ತೀವ್ರ ಯತ್ನ ನಡೆಸಿದ್ದರು. ಆದರೆ, ಅದೇ ಕಟ್ಟಡದಲ್ಲಿ ಆರು ಮತ್ತು 18 ತಿಂಗಳ ಎರಡು ಹಸುಗೂಸುಗಳೊಂದಿಗೆ ವಾಸವಿದ್ದ ಇಬ್ಬರು ಅಧಿಕಾರಿಗಳ ಪತ್ನಿಯರು, ಮನೆಯಲ್ಲಿದ್ದ ಸಲಕರಣೆಗಳನ್ನೇ ಬಳಸಿ ಉಗ್ರರು ಕಟ್ಟಡ ಪ್ರವೇಶಿಸದಂತೆ ತಡೆದರು.

ನವದೆಹಲಿ(ನ.30): ನಗ್ರೋಟಾದಲ್ಲಿ ಉಗ್ರ ದಾಳಿಯ ವೇಳೆ ಇಬ್ಬರು ಯೋಧರ ಪತ್ನಿಯರು ತೋರಿಸಿದ ಸಾಹಸ, ಭಾರತೀಯ ಸೇನೆಯನ್ನು ದೊಡ್ಡ ಅಪಾಯದಿಂದ ಪಾರು ಮಾಡಿದೆ.

ಸೈನಿಕರ ವಸತಿ ಪ್ರದೇಶಕ್ಕೆ ನುಗ್ಗಿದ ಮೂವರು ಶಸ್ತ್ರಸಜ್ಜಿತ ಉಗ್ರರು ಅಧಿಕಾರಿಗಳ ಕುಟುಂಬ ಮತ್ತು ಸೈನಿಕರು ವಾಸವಿದ್ದ ಕಟ್ಟಡಗಳನ್ನು ವಶಕ್ಕೆ ಪಡೆಯಲು ತೀವ್ರ ಯತ್ನ ನಡೆಸಿದ್ದರು. ಆದರೆ, ಅದೇ ಕಟ್ಟಡದಲ್ಲಿ ಆರು ಮತ್ತು 18 ತಿಂಗಳ ಎರಡು ಹಸುಗೂಸುಗಳೊಂದಿಗೆ ವಾಸವಿದ್ದ ಇಬ್ಬರು ಅಧಿಕಾರಿಗಳ ಪತ್ನಿಯರು, ಮನೆಯಲ್ಲಿದ್ದ ಸಲಕರಣೆಗಳನ್ನೇ ಬಳಸಿ ಉಗ್ರರು ಕಟ್ಟಡ ಪ್ರವೇಶಿಸದಂತೆ ತಡೆದರು.

ಆತ್ಮಹತ್ಯಾ ಜಾಕೆಟ್‌, ಗ್ರೆನೇಡ್‌ ಹಾಗೂ ಸ್ವಯಂಚಾಲಿತ ರೈಫಲ್‌'ಗಳಿಂದ ಸಜ್ಜಿತರಾಗಿದ್ದ ಉಗ್ರರಿಗೆ ಮಹಿಳೆಯರಿಬ್ಬರ ದಾಳಿಯನ್ನು ಎದುರಿಸಿ ನಿಲ್ಲವುದೇ ಕಷ್ಟವಾಯಿತು. ಅವರು ಕಟ್ಟಡ ಪ್ರವೇಶಿಸಲಾಗದೇ ಹಿಂದಕ್ಕೆ ಸರಿದರು. ಸೈನಿಕರ ಕ್ವಾಟ್ರಸ್‌ ಪ್ರವೇಶಿಸಲಾಗದೇ ಹಿಮ್ಮೆಟ್ಟಿದ ಉಗ್ರರನ್ನು ಆಗಲೇ ಎಚ್ಚರಗೊಂಡಿದ್ದ ಯೋಧರು ಸುತ್ತುವರಿದರು.

ಉಗ್ರರೊಂದಿಗಿನ ಕಾಳಗದಲ್ಲಿ ಮೂವರು ಯೋಧರು ಹುತಾತ್ಮರಾದರೂ, ಮಹಿಳೆಯರ ಸಾಹಸ ಸಂಭವಿಸಬಹುದಾಗಿದ್ದ ಭಾರಿ ದುರಂತವನ್ನು ತಪ್ಪಿಸಿದೆ. ಮಹಿಳೆಯರು ಹೋರಾಡಿದ ಕಟ್ಟಡದಲ್ಲಿ ಎರಡು ಹಸುಗೂಸುಗಳಲ್ಲದೇ 12ಕ್ಕೂ ಅಧಿಕ ಯೋಧರು ತಂಗಿದ್ದರು. ಇವರೆಲ್ಲರೂ ಉಗ್ರರಿಗೆ ಒತ್ತೆಸೆರೆ ಸಿಕ್ಕಿದ್ದರೆ ದೊಡ್ಡ ಅನಾಹುತ ಖಚಿತವಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೈಸೂರು ಅರಮನೆ ದ್ವಾರದ ಬಳಿ ನೈಟ್ರೋಜನ್ ಸಿಲಿಂಡರ್ ಸ್ಫೋಟ; ಓರ್ವ ಸಾವು, ನಾಲ್ವರಿಗೆ ಗಾಯ
ಬೆಂಗಳೂರನ್ನು ರಾಷ್ಟ್ರ ರಾಜಧಾನಿ ಎಂದು ಘೋಷಿಸಿ, ಕಾರಣ ಬಿಚ್ಚಿಟ್ಟ ದೆಹಲಿ ಯುವತಿ