9 ಮಂದಿ ಪರ್ವತಾರೋಹಿಗಳು ನೇಪಾಳದಲ್ಲಿ ಹಿಮಸಮಾಧಿ

By Web DeskFirst Published Oct 14, 2018, 7:51 AM IST
Highlights

ಪಶ್ಚಿಮ ನೇಪಾಳದಲ್ಲಿರುವ ಗುರ್ಜಾ ಪರ್ವತ 7193 ಮೀಟರ್‌ ಎತ್ತರವಿದೆ. ಈ ಪರ್ವತವನ್ನು ಏರುವ ಉದ್ದೇಶದಿಂದ 3500 ಮೀಟರ್‌ ಎತ್ತರದ ಬೇಸ್‌ ಕ್ಯಾಂಪ್‌ ತಲುಪಿದ್ದ ಪರ್ವತಾರೋಹಿಗಳು ಸೂಕ್ತ ವಾತಾವರಣಕ್ಕಾಗಿ ಶುಕ್ರವಾರ ಕಾಯುತ್ತಿದ್ದರು. ಆ ಸಂದರ್ಭದಲ್ಲಿ ಭಾರಿ ಪ್ರಮಾಣದ ಹಿಮ ಏಕಾಏಕಿ ಕುಸಿಯಿತು. ಭೂಕುಸಿತವೂ ಉಂಟಾಯಿತು. ಹೀಗಾಗಿ ಪರ್ವತಾರೋಹಿಗಳು ಹಿಮ ಸಮಾಧಿಯಾದರು. ರಕ್ಷಣಾ ತಂಡಗಳು ಮೃತರ ದೇಹವನ್ನು ಪತ್ತೆ ಮಾಡಿವೆ.

ಕಠ್ಮಂಡು(ಅ.14): ಭಾರಿ ಪ್ರಮಾಣದ ಹಿಮ ಕುಸಿತ ಉಂಟಾಗಿದ್ದರಿಂದ ನೇಪಾಳದ ಗುರ್ಜಾ ಪರ್ವತವನ್ನು ಏರುತ್ತಿದ್ದ 9 ಮಂದಿ ಪರ್ವತಾರೋಹಿಗಳು ಹಿಮ ಸಮಾಧಿಯಾದ ಘಟನೆ ಶುಕ್ರವಾರ ಸಂಭವಿಸಿದೆ. ಮೃತರಲ್ಲಿ ಐದು ಮಂದಿ ದಕ್ಷಿಣ ಕೊರಿಯಾ ಪ್ರಜೆಗಳು. ಉಳಿದವರು ಅವರ ಸಹಾಯಕ್ಕೆ ನಿಯೋಜನೆಗೊಂಡಿದ್ದ ನೇಪಾಳದ ಸಿಬ್ಬಂದಿ.

ಪಶ್ಚಿಮ ನೇಪಾಳದಲ್ಲಿರುವ ಗುರ್ಜಾ ಪರ್ವತ 7193 ಮೀಟರ್‌ ಎತ್ತರವಿದೆ. ಈ ಪರ್ವತವನ್ನು ಏರುವ ಉದ್ದೇಶದಿಂದ 3500 ಮೀಟರ್‌ ಎತ್ತರದ ಬೇಸ್‌ ಕ್ಯಾಂಪ್‌ ತಲುಪಿದ್ದ ಪರ್ವತಾರೋಹಿಗಳು ಸೂಕ್ತ ವಾತಾವರಣಕ್ಕಾಗಿ ಶುಕ್ರವಾರ ಕಾಯುತ್ತಿದ್ದರು. ಆ ಸಂದರ್ಭದಲ್ಲಿ ಭಾರಿ ಪ್ರಮಾಣದ ಹಿಮ ಏಕಾಏಕಿ ಕುಸಿಯಿತು. ಭೂಕುಸಿತವೂ ಉಂಟಾಯಿತು. ಹೀಗಾಗಿ ಪರ್ವತಾರೋಹಿಗಳು ಹಿಮ ಸಮಾಧಿಯಾದರು. ರಕ್ಷಣಾ ತಂಡಗಳು ಮೃತರ ದೇಹವನ್ನು ಪತ್ತೆ ಮಾಡಿವೆ.

ಈ ಪರ್ವತಾರೋಹಿಗಳ ತಂಡಕ್ಕೆ ದಕ್ಷಿಣ ಕೊರಿಯಾದ ಕಿಮ್‌ ಚಾಂಗ್‌ ಹೊ ಅವರು ನಾಯಕರಾಗಿದ್ದರು. ಹೆಚ್ಚುವರಿ ಆಮ್ಲಜನಕದ ಸಹಾಯವಿಲ್ಲದೆ 8 ಸಾವಿರ ಮೀಟರ್‌ಗೂ ಅಧಿಕ ಎತ್ತರ ಹೊಂದಿರುವ ಪರ್ವತಗಳನ್ನು 14 ಬಾರಿ ಏರಿದ ದಕ್ಷಿಣ ಕೊರಿಯಾದ ಮೊದಲ ಪರ್ವತಾರೋಹಿ ಅವರಾಗಿದ್ದಾರೆ.

click me!