
ಐನ್‌ಸೆಫ್ರಾ (ಅಲ್ಜೀರಿಯಾ) (ಜ.10): ವಿಶ್ವದಲ್ಲೇ ಅತ್ಯಧಿಕ ತಾಪಮಾನ ಹೊಂದಿರುವ ದಕ್ಷಿಣ ಆಫ್ರಿಕಾದ ಸಹಾರಾ ಮರುಭೂಮಿಯಲ್ಲಿ, ಕಳೆದ 40 ವರ್ಷಗಳಲ್ಲಿ 3 ನೇ ಬಾರಿ ಹಿಮಪಾತವಾಗಿದೆ.
ಮರುಭೂಮಿಯ ಹೆಬ್ಬಾಗಿಲು ಎಂದೇ ಖ್ಯಾತವಾದ ಅಲ್ಜೀರಿಯಾದ ನಗರ ಐನ್‌ಸೆಫ್ರಾದಲ್ಲಿ ಭಾನುವಾರ ಮುಂಜಾನೆ ಹಿಮಪಾತ ಆಗಿದೆ. ಸುಮಾರು 16 ಇಂಚುಗಳಷ್ಟು ದಪ್ಪ ಹಿಮ ಪದರ ಸೃಷ್ಟಿಯಾಗಿತ್ತು.ಆದರೆ ತಾಪಮಾನ ಹೆಚ್ಚುತ್ತಿದ್ದಂತೆ ಹಿಮಕರಗಿ ನೀರಾಯಿತು. ಐನ್‌ಸೆಫ್ರಾದಲ್ಲಿ ತಾಪಮಾನ ಮೈನಸ್ 10.2 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. 1979 ರಲ್ಲಿ ಒಂದು ಬಾರಿ ಹಿಮಪಾತವಾಗಿ, ಒಂದು ಗಂಟೆ ಸಂಚಾರಕ್ಕೆ ಅಡ್ಡಿಯಾಗಿತ್ತು. ಆ ನಂತರ ಎರಡು ವರ್ಷಗಳ ಹಿಂದೊಮ್ಮೆ ಮತ್ತು ಕಳೆದ ವರ್ಷವಷ್ಟೇ ಹಿಮಪಾತವಾಗಿತ್ತು. ಬೇಸಿಗೆಯಲ್ಲಿ ಸರಾಸರಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವ ಸಹಾರಾದಲ್ಲಿ, ಚಳಿಗಾಲದಲ್ಲಿ ಕನಿಷ್ಠ -10.2 ಡಿಗ್ರಿ ಸೆ. ತಾಪಮಾನ ದಾಖಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.