ಲೋಕಸಭಾ ಎಲೆಕ್ಷನ್ 2019: ರಾಹುಲ್ ಗಾಂಧಿ ಸೋಲಿಸಲು ಬಿಜೆಪಿ ಮಾಸ್ಟರ್​​ ಪ್ಲ್ಯಾನ್

Published : Nov 05, 2018, 02:28 PM ISTUpdated : Nov 05, 2018, 03:02 PM IST
ಲೋಕಸಭಾ ಎಲೆಕ್ಷನ್ 2019: ರಾಹುಲ್ ಗಾಂಧಿ ಸೋಲಿಸಲು ಬಿಜೆಪಿ ಮಾಸ್ಟರ್​​ ಪ್ಲ್ಯಾನ್

ಸಾರಾಂಶ

ಪ್ರಧಾನಿ ಅಭ್ಯರ್ಥಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನ 2019ರ ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಅದೇನದು ಬಿಜೆಪಿಯ ಪ್ಲ್ಯಾನ್ ಇಲ್ಲಿದೆ ನೋಡಿ.

ಅಮೇಥಿ (ಉತ್ತರ ಪ್ರದೇಶ] [ನ.06]: 2019ರ ಲೋಕಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು, ಮತದಾರರನ್ನು ತನ್ನತ್ತ ಸೆಳೆಯಲು ನಾನಾ ಪ್ಲ್ಯಾನ್ ಗಳನ್ನ ಮಾಡಿದೆ. 

ಇದಕ್ಕೆ ಪೂರಕವೆಂಬಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣಾ ಕ್ಷೇತ್ರವಾಗಿರೋ ಅಮೇಥಿಯಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಕೇಂದ್ರ ಸಚಿವೆ ಸ್ಮೃತಿ ಇರಾನಿ ಮುಂದಾಗಿದ್ದಾರೆ. 

ದೀಪಾವಳಿ ಉಡುಗೋರೆಯಾಗಿ ಅಮೇಥಿ ಕ್ಷೇತ್ರದಲ್ಲಿ 10,000 ಸಾವಿರ ಸೀರೆಗಳನ್ನು ನೀಡಿದ್ದಾರೆ. ಸೀರೆಗಳನ್ನು ಬಿಜೆಪಿ ಅಮೇಥಿ ಜಿಲ್ಲೆಯ ಮಹಿಳಾ ಕಾರ್ಯಕರ್ತರು ಪಡೆದುಕೊಂಡಿದ್ದು, ದೀಪಾವಳಿ ಉಡುಗೊರೆಯಾಗಿ ಹಂಚಲು ತೀರ್ಮಾನಿಸಿದ್ದಾರೆ. 

ಈ ಭಾರಿ ರಾಹುಲ್ ಗಾಂಧಿಯನ್ನು ಸೋಲಿಸಲೇಕು ಎಂದು ಪಣ ತೊಟ್ಟಿರುವ ಬಿಜೆಪಿ, ಅಮೇಥಿ ಮತದಾರರ ನಿರಂತರ ಸಂಪರ್ಕದಲ್ಲಿದ್ದಾರೆ. ಸೀರೆ ಹಂಚಿಕೆ ವಿಚಾರವನ್ನು ಕೇಂದ್ರ ಸಚಿವರು ಇದು 'ಡಡೀಸ್ ಲವ್' ಇದ್ದ ಹಾಗೆ ಅಂತ ವಿವರಿಸಿದ್ದಾರೆ. 

ಇನ್ನೂ 2019ರ ಲೋಕಸಾಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರ ಗೆಲುವಿನ ಅಂತರವನ್ನು ಕಡಿಮೆ ಮಾಡಲು ಬಿಜೆಪಿ ಕಾಂಗ್ರೆಸ್ ಪಾಕೆಟ್ ಬ್ಯೂರೊದಿಂದ ಇರಾನಿ ಅವರನ್ನು ಮೈದಾನಕ್ಕೆ ಕರೆತಂದಿದೆ. 2014ರ ಚುನಾವಣೆ ಸಂದರ್ಭದಲ್ಲಿಯೂ ಇರಾನಿ ಸಿರೆಗಳನ್ನು ಕಳುಹಿಸಿಕೊಟ್ಟಿದ್ದರು.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು