
ನವದೆಹಲಿ: ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಹಿಟ್ಲರ್ ಆಡಳಿತಕ್ಕೆ ಹೋಲಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ತಿರುಗೇಟು ನೀಡಿದ್ದಾರೆ.
‘ನೀವಿದನ್ನು 42 ವರ್ಷಗಳಷ್ಟು ತಡವಾಗಿ ಹೇಳುತ್ತಿದ್ದೀರಿ. ಯಾರು ಹಿಟ್ಲರ್’ನಿಂದ ಪ್ರಭಾವಿತರಾಗಿದ್ದರು, ಯಾರು ತುರ್ತು ಪರಿಸ್ಥಿತಿಯನ್ನು ಹೇರಿದ್ದರು, ಯಾರು ಪ್ರಜಾತಂತ್ರವನ್ನು ಬುಡಮೇಲು ಮಾಡಿದ್ದರು ಎಂದು ಊಹಿಸಲು ಬಹುಮಾನದ ಅಗತ್ಯವಿಲ್ಲ, ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಭವಿಷ್ಯ ಮಂದವಾಗಿದೆಯೇ ಹೊರತು ದೇಶದಲ್ಲ. ದರೂ ನೀವೆಲ್ಲಾ ಮಾಡುತ್ತಿರುವುದಕ್ಕೆ ಧನ್ಯವಾದಗಳು ಎಂದು ವ್ಯಂಗ್ಯವಾಗಿ ಟವ್ಈಟಿಸಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ನಡೆದ ಡಾ. ಅಂಬೇಡ್ಕರ್ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಂಧಿ, ಮೋದಿ ಸರ್ಕಾರವು ನಾಝಿ ಆಡಳಿತದಂತೆ ‘ವಾಸ್ತವದ ಕತ್ತು ಹಿಸುಕುತ್ತಿದೆ’ ಎಂದು ಹೇಳಿದ್ದರು.
ಬಿಜೆಪಿಯು ದೇಶದಾದ್ಯಂತ ಸುಳ್ಳನ್ನು ಹರಡುತ್ತ, ದುರ್ಬಲ ವರ್ಗದವರನ್ನು ತುಳಿಯುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
ಅಧಿಕಾರ ಬಲದಿಂದ ಜನರನ್ನು ಅವಮಾನಿಸುವ, ಅವರ ದ್ವನಿಯನ್ನು, ಹಾಗೂ ಬಡವರನ್ನು ತುಳಿಯುವ ಸರ್ವಾಧಿಕಾರಕ್ಕೆ ದೇಶವನ್ನು ಬಿಜೆಪಿಯು ಕೊಂಡೊಯ್ಯಬಯಸುತ್ತದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.
ರೋಹಿತ್ ವೆಮುಲ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಅವರು ಹೇಳುತ್ತಾರೆ. ವಾಸ್ತವದಲ್ಲಿ ಅಸಮಾನತೆ ಅವಮಾನಗಳು ವೆಮುಲನನ್ನು ಕೊಂದಿವೆ. ದಲಿತನೆಂಬ ಕಾರಣಕ್ಕೆ ವೆಮುಲ ಜೀವ ತೆರಬೇಕಾಯಿತು ಎಂದು ರಾಹುಲ್ ಗಾಂಧಿ ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.