
ಅಲ್ಲಿ ಮಾನವರ ಸಿಟ್ಟು ನೆತ್ತಿಗೇರಿತ್ತು. 300ಕ್ಕೂ ಅಧಿಕ ಮೊಸಳೆಗಳನ್ನು ಸಾಯಿಸಿದ್ದರು. ಸಾಯಿಸಿದ್ದು ಮಾತ್ರವಲ್ಲದೇ ಸತ್ತರ ಮೇಲೆಯೂ ಅವುಗಳ ಮೇಲೆ ದಾಳಿ ಮಾಡುತ್ತಿದ್ದರು. ಇಷ್ಟಾದರೂ ಅವರ ಕೋಪ ತಣ್ಣಗಾಗಿರಲಿಲ್ಲ.ಹಾಗಾದರೆ ಏನಿದು ಘಟನೆ?
ಇಂಡೋನೇಷಿಯಾದ ಹಳ್ಳಿಯೊಂದರ ಜನ ಕೈಗೆ ಸಿಕ್ಕ ಆಯುಧಗಳನ್ನೆಲ್ಲ ಬಳಕೆ ಮಾಡಿಕೊಂಡಿದ್ದರು. ಅವರ ಊರಿನ ಮನುಷ್ಯನೊಬ್ಬನ ಸಾವಿಗೆ ಯಾವುದೋ ಒಂದು ಮೊಸಳೆ ಕಾರಣವಾಗಿತ್ತು. ಇದಕ್ಕೆ ಪ್ರತಿಕಾರ ತೀರಿಸಲು ಇಡೀ ಹಳ್ಳಿಗರೆ ಯುದ್ಧಕ್ಕೆ ಇಳಿದಿದ್ದರು.
ಕೃಷಿ ಕೆಲಸ ಮಾಡಲು ಹೊಲಕ್ಕೆ ತೆರಳಿದ್ದ ವ್ಯಕ್ತಿಯೊಬ್ಬನನ್ನು ಮೊಸಳೆ ತಿಂದು ಹಾಕಿತ್ತು. ಚಿತ್ರಗಳನ್ನು ನೋಡಿದರೆ ಇವರು ಎಂಥಾ ಮನುಷ್ಯರಪ್ಪಾ? ಎಂದು ಒಂದು ಕ್ಷಣ ನಿಮಗೆ ಅನ್ನಿಸದೆ ಇರದು.ಇಂಡೋನೇಷಿಯಾದ ಪಶ್ಚಿಮ ಪಪುವಾದಲ್ಲಿ ಈ ಮೊಸಳೆಗಳ ಸಾಮೂಹಿಕ ಹತ್ಯೆ ನಡೆದಿದೆ. ಮೊಸಳೆ ದಾಳಿಗೆ ವ್ಯಕ್ತಿ ಬಲಿಯಾದ ನಂತರ ಆತನ ಅಂತ್ಯ ಕ್ರಿಯೆ ನೆರವೇರಿಸಲಾಗಿದೆ. ಅಂತ್ಯಕ್ರಿಯೆ ನಂತರ ರೊಚ್ಚಿಗೆದ್ದ ಜನ ಮೊಸಳೆಗಳ ಮಾರಣಹೋಮ ಮಾಡಿದ್ದಾರೆ. ಪೊಲೀಸರು ಈ ಘಟನೆ ನೋಡುತ್ತಿದ್ದರೂ ರೊಚ್ಚಿಗೆದ್ದ ಜನರ ಎದುರು ನಿಲ್ಲಲು ಸಾಧ್ಯವಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.