ಕುಮಾರಸ್ವಾಮಿ ಕೊಡುವ ಇನ್ನೊಂದು ಭರ್ಜರಿ ಮನ್ನಾ ಯಾವುದು?

By Web DeskFirst Published Jul 16, 2018, 4:58 PM IST
Highlights

ಮೊದಲು ಬೆಳೆ ಸಾಲ ಮನ್ನಾ ಮಾಡಿ ಒತ್ತಡ ಬಂದ ನಂತರ ಸಹಕಾರಿ ಸಂಘಗಳ ಚಾಲ್ತಿ ಸಾಲ ಮನ್ನಾ ಮಾಡಿದ್ದ ಕುಮಾರಸ್ವಾಮಿ ರೈತರಿಗೆ ಮತ್ತೊಂದು ಭರ್ಜರಿ ಕೊಡುಗೆ ನೀಡಲಿದ್ದಾರೆಯೇ? ವಾಣಿಜ್ಯ ಬ್ಯಾಂಕ್ ಗಳಲ್ಲಿರುವ ಒಂದು ಲಕ್ಷದ ವರೆಗಿನ ಚಾಲ್ತಿ ಸಾಲವೂ ಮನ್ನಾ ಆಗಲಿದೆಯೇ?

ಬೆಂಗಳೂರು(ಜು.16) ವಾಣಿಜ್ಯ ಬ್ಯಾಂಕುಗಳಲ್ಲಿ ಚಾಲ್ತಿಯಲ್ಲಿರುವ ರೈತರ ಸಾಲ ಸಹ ಮನ್ನಾ ಸಾಧ್ಯತೆ ಹೆಚ್ಚಾಗಿದೆ. ಒಂದು ಲಕ್ಷದ ವರೆಗೆ ಸಾಲಮನ್ನಾ ಮಾಡಲು ಸಿಎಂ ಚಿಂತನೆ ನಡೆಸಿದ್ದು ಸಹಕಾರಿ ವಲಯದ ಚಾಲ್ತಿ ಸಾಲಮನ್ನಾ ಮಾಡಿದ ರೀತಿಯೇ ವಾಣಿಜ್ಯ ಬ್ಯಾಂಕುಗಳ ರೈತರ ಸಾಲಮನ್ನಾ ಮಾಡಲು ಸಿಎಂ ಮೇಲೆ ಒತ್ತಡ ಬಂದ ಕಾರಣ ರೈತರಿಗೆ ಲಾಭ ಸಿಗಲಿದೆ.

ಮೊದಲು ಘೋಷಣೆ ಮಾಡಿದ್ದ25 ಸಾವಿರ ರೂಪಾಯಿ ಪ್ರೋತ್ಸಾಹ ಧನ ಹಿಂದಕ್ಕೆ ಪಡೆದಿದ್ದ ಸಿಎಂ ಸಹಕಾರಿ ಸಂಘದ ಸಾಲ ಮನ್ನಾಕ್ಕೆ ಒಪ್ಪಿಗೆ ನೀಡಿದ್ದರು. ಆದರೆ ಇದಾದ ಮೇಲೆ ಸಹ ವಾಣಿಜ್ಯ ಬ್ಯಾಂಕ್ ಗಳಲ್ಲಿ ಸಾಲ ಹೊಂದಿದ್ದ ರೈತರಿಗೆ ಆಗಿರುವ ಅಸಮಾಧಾನ ಕಡಿಮೆ ಮಾಡಲು ಸಿಎಂ ಹೊಸ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.

ರೈತರಲ್ಲಿ ಉಂಟಾಗಿರುವ ಅಸಮಾಧಾನ ಕಡಿಮೆ ಮಾಡುವುದಕ್ಕೆ ಮೊದಲ ಆದ್ಯನೆ ನೀಡಬೇಕಿದೆ ಎಂಬುದನ್ನು ಮನಗಂಡಿರುವ ಸಿಎಂ ಏನಾದರೂ ಆಗಲಿ, ಹಣಕಾಸು ಸ್ಥಿತಿಯ ಮೇಲೆ ಇನ್ನಷ್ಟು ಹೆಚ್ಚಿನ ಒತ್ತಡ ಬಿದ್ಗರೂ ಪರವಾಗಿಲ್ಲ ವಾಣಿಜ್ಯ ಬ್ಯಾಂಕ್ ರೈತರಿಗೂ ಸಾಲ ಮನ್ನಾದ ಲಾಭ ಸಿಗಲಿ ಎಂಬ ಧೋರಣೆಯನ್ನು ಹೊಂದಿದ್ದಾರೆ ಎಂಬ ಮಾಹಿತಿ ಸುವರ್ಣ ನ್ಯೂಸ್ .ಕಾಂಗೆ ಲಭ್ಯವಾಗಿದೆ.

click me!