ಪರಿಜ್ಞಾನವೇ ಇಲ್ಲದವರು ರಾಜ್ಯವಾಳುತ್ತಿದ್ದಾರೆ : ಭೈರಪ್ಪ ಗರಂ

By Web DeskFirst Published Jan 3, 2019, 10:46 AM IST
Highlights

ಪರಿಜ್ಞಾನವೇ ಇಲ್ಲದವರು ರಾಜ್ಯವಾಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಾಹಿತಿ ಎಸ್‌.ಎಲ್‌.ಭೈರಪ್ಪ, ಸರ್ಕಾರಿ ಶಾಲೆಯಲ್ಲಿ ಇಂಗ್ಲೀಷ್ ಮೀಡಿಯಂ ಆರಂಭಿಸುವ ಸಂಬಂಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಮೈಸೂರು :  ವಿದ್ಯೆಯ ಪರಿಜ್ಞಾನವೇ ಇಲ್ಲದವರು ರಾಜ್ಯವಾಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಾಹಿತಿ ಎಸ್‌.ಎಲ್‌.ಭೈರಪ್ಪ, ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸಲು ಹೊರಟಿರುವವರು ‘ಸ್ಟುಪಿಡ್‌’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ನಿವಾಸದಲ್ಲಿ ಸಾಹಿತಿ ಸಿಪಿಕೆ ಅವರ ಪುಸ್ತಕ ಬಿಡುಗಡೆ ಮಾಡಿದ ಅವರು, ರಾಜ್ಯ ಸರ್ಕಾರ ಸಾವಿರ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಜಾರಿಗೊಳಿಸಲು ಮುಂದಾಗಿರುವುದಕ್ಕೆ ಪ್ರತಿಕ್ರಿಯಿಸಿದರು. ಖಾಸಗಿಯವರು ಇಂಗ್ಲಿಷ್‌ ಮೀಡಿಯಂ ಬ್ಯುಸಿನೆಸ್‌ ಮಾಡಿಕೊಂಡರೆ, ಅವರ ಲಹರಿಗೆ ಇವರು ಸಿಲುಕಿಕೊಂಡಿದ್ದಾರೆ ಎಂದರು.

ಸಮಾಜದಲ್ಲಿರುವಂತಹ, ಮನೆಯಲ್ಲಿರುವಂತಹ ಭಾಷೆ ಮೂಲಕ ಒಂದು ಮಟ್ಟಕ್ಕೆ ಹೋಗಬೇಕು. ಆ ಮೇಲೆ ಬೇರೆ ಭಾಷೆ ಕಲಿಯುವುದು. ಆರಂಭದಲ್ಲೇ ಇಂಗ್ಲಿಷ್‌ ಮಾಧ್ಯಮ ಮಾಡುತ್ತೇನೆ ಎಂದರೆ ಅದಕ್ಕೆ ಏನರ್ಥ ಎಂದು ಪ್ರಶ್ನಿಸಿದರು.

ವಿಶ್ವವಿದ್ಯಾನಿಲಯದಲ್ಲಿ, ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರನ್ನು ಸಂಬಳಕ್ಕೋಸ್ಕರ ನೇಮಕ ಮಾಡಿಕೊಳ್ಳಬಾರದು. ವಿದ್ಯಾಭ್ಯಾಸ ಏನೆಂಬ ಪರಿಜ್ಞಾನವಿರುವ ಶಿಕ್ಷಕರನ್ನು ನೇಮಿಸಬೇಕು. ಎಲ್ಲರಿಗೂ ಮೇಷ್ಟರಾಗುವ ಯೋಗ್ಯತೆ ಇರುವುದಿಲ್ಲ. ಜಾಸ್ತಿ ಸಂಬಳಕ್ಕೆ ಬರುವವನು ಶಿಕ್ಷಕನಾಗುವುದಿಲ್ಲ. ನಿವೃತ್ತಿಯ ನಂತರವೂ ವಿದ್ಯೆಯಿಂದ ಸಂಪಾದನೆ ಮಾಡುವವನು ಶಿಕ್ಷಕನಾಗುತ್ತಾನೆ. ಆತ ಒಳ್ಳೆಯ ಶಿಕ್ಷಕನೂ ಆಗುತ್ತಾನೆ ಎಂದರು.

click me!