ಸಿಕ್ಸ್‌ ಪ್ಯಾಕ್ ತಂದ ಸಾವು

Published : Nov 08, 2016, 03:56 AM ISTUpdated : Apr 11, 2018, 12:57 PM IST
ಸಿಕ್ಸ್‌ ಪ್ಯಾಕ್ ತಂದ ಸಾವು

ಸಾರಾಂಶ

ಯುವನಟ ಉದಯ್ ‘ಜಯಮ್ಮನ ಮಗ’ ಚಿತ್ರದ ಮೂಲಕ ಹೆಸರು ಮಾಡಿದ್ದರು. ‘ಬಹದ್ದೂರ್’ ಚಿತ್ರದಲ್ಲೂ ಗಮನ ಸೆಳೆಯುವಂಥ ನಟನೆ ತೋರಿದ್ದರು. ಅನಿಲ್ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಸ್ಟಂಟ್ ಮಾಡಿದ್ದರೂ, ‘ಮಾಸ್ಟರ್ ಪೀಸ್’, ‘ಜಾಕ್ಸನ್’, ‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ’’ ಇವರಿಗೆ ಹೆಸರು ತಂದುಕೊಟ್ಟಿದ್ದವು. ‘ಮಾಸ್ತಿಗುಡಿ’ಯಲ್ಲಿ ಮುಖ್ಯ ಖಳನಾಯಕನಾಗಿದ್ದ ಅನಿಲ್‌ಗೆ ಈ ಚಿತ್ರ ಬಹುದೊಡ್ಡ ವೇದಿಕೆಯೇ ಆಗಿತ್ತು. ಆದರೆ, ಈ ಉದಯೋನ್ಮುಖ ಖಳನಟರ ಅತೀ ಉತ್ಸಾಹವೋ, ಚಿತ್ರದ ಸಾಹಸ ನಿರ್ದೇಶಕರ ನಿರ್ಲಕ್ಷ್ಯವೋ, ಇದೀಗ ಇವರನ್ನು ಸಾವಿನ ಮನೆಗೆ ತಳ್ಳಿದೆ.

ಬೆಂಗಳೂರು(ನ.08): ‘ಮಾಸ್ತಿಗುಡಿ’ಯ ಚಿತ್ರೀಕರಣದ ವೇಳೆ ದುರಂತವಾಗಿ ಸಾವನ್ನಪ್ಪಿದ ಅನಿಲ್ ಹಾಗೂ ಉದಯ್ ಈಗಷ್ಟೆ ಸಿನಿರಂಗಕ್ಕೆ ಕಾಲಿಟ್ಟವರು. ಕಟ್ಟುಮಸ್ತಾದ ದೇಹದಿಂದಲೇ ತೆರೆಮೇಲೆ ಖಳನಟರಾಗಿ ಮಿಂಚುವ ಕನಸು ಕಂಡಿದ್ದವರು. ಈಗ ಖಡಕ್ ನಟನೆಯೇ ಅವರ ಪ್ರಾಣವನ್ನು ಕಸಿದಿದೆ.

ಯುವನಟ ಉದಯ್ ‘ಜಯಮ್ಮನ ಮಗ’ ಚಿತ್ರದ ಮೂಲಕ ಹೆಸರು ಮಾಡಿದ್ದರು. ‘ಬಹದ್ದೂರ್’ ಚಿತ್ರದಲ್ಲೂ ಗಮನ ಸೆಳೆಯುವಂಥ ನಟನೆ ತೋರಿದ್ದರು. ಅನಿಲ್ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಸ್ಟಂಟ್ ಮಾಡಿದ್ದರೂ, ‘ಮಾಸ್ಟರ್ ಪೀಸ್’, ‘ಜಾಕ್ಸನ್’, ‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ’’ ಇವರಿಗೆ ಹೆಸರು ತಂದುಕೊಟ್ಟಿದ್ದವು. ‘ಮಾಸ್ತಿಗುಡಿ’ಯಲ್ಲಿ ಮುಖ್ಯ ಖಳನಾಯಕನಾಗಿದ್ದ ಅನಿಲ್‌ಗೆ ಈ ಚಿತ್ರ ಬಹುದೊಡ್ಡ ವೇದಿಕೆಯೇ ಆಗಿತ್ತು. ಆದರೆ, ಈ ಉದಯೋನ್ಮುಖ ಖಳನಟರ ಅತೀ ಉತ್ಸಾಹವೋ, ಚಿತ್ರದ ಸಾಹಸ ನಿರ್ದೇಶಕರ ನಿರ್ಲಕ್ಷ್ಯವೋ, ಇದೀಗ ಇವರನ್ನು ಸಾವಿನ ಮನೆಗೆ ತಳ್ಳಿದೆ.

ಕ್ಲೈಮ್ಯಾಕ್ಸ್ ಚಿತ್ರೀಕರಣ

ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣ ಸೋಮವಾರ ಮಧ್ಯಾಹ್ನ 2.48ಕ್ಕೆ ಶುರುವಾಗಿತ್ತು. ಕೆಲವೇ ನಿಮಿಷಗಳಲ್ಲಿ ಈ ದುರಂತವೂ ಸಂಭವಿಸಿದೆ. ಚಿತ್ರದಲ್ಲಿ ಅರಣ್ಯ ಪ್ರದೇಶವನ್ನು ನಾಶ ಮಾಡುವ ಅನಿಲ್ ಹಾಗೂ ಉದಯ್ ಅವರ ವಿರುದ್ಧ ನಾಯಕ ಹೋರಾಡುವ ದೃಶ್ಯ ಅದಾಗಿತ್ತು. ನಾಯಕನಿಂದ ತಪ್ಪಿಸಿಕೊಳ್ಳುವ ಇಬ್ಬರು ಖಳನಟರು ಹೆಲಿಕಾಪ್ಟರ್ ಏರಿ ಸಾಹಸ ಪ್ರದರ್ಶಿಸುತ್ತಾರೆ. ಹೆಲಿಕಾಪ್ಟರ್‌ನಲ್ಲೂ ಹೋರಾಟ ನಡೆದು, ನಾಯಕನಿಗಿಂತ ಮುಂಚೆ ಉದಯ್ ಹಾಗೂ ಅನಿಲ್ ನೀರಿಗೆ ಹಾರುತ್ತಾರೆ. ನಂತರ ಅಂಡರ್ ವಾಟರ್‌ನಲ್ಲೂ  ಟ್ ನಡೆಯುತ್ತದೆ. ಇಷ್ಟು ಸಾಹಸ ದೃಶ್ಯಗಳು ಸಾಹಸ ನಿರ್ದೇಶಕ ರವಿವರ್ಮರ ನಿರ್ದೇಶನದಂತೆ ಸಾಗಿತ್ತು.

ಸಿಕ್ಸ್‌ಪ್ಯಾಕ್ ಶಾಪವಾಯಿತೇ?

ಸುಮಾರು 30 ರಿಂದ 60 ಅಡಿ ಇರುವ ಜಲಾಶಯಕ್ಕೆ 100 ಅಡಿ ಎತ್ತರದಿಂದ ಹಾರುವ ವಿಜಯ್ ಒಬ್ಬರೇ ಏರ್ ಜಾಕೆಟ್ ಧರಿಸಿದ್ದರು. ಆದರೆ, ಉದಯ್ ಹಾಗೂ ಅನಿಲ್ ಯಾವುದೇ ರಕ್ಷಣಾ ಕವಚ ಧರಿಸಿರಲಿಲ್ಲ. ಅದಕ್ಕೆ ಕಾರಣ, ಸಿಕ್ಸ್‌ಪ್ಯಾಕ್! ಈ ಇಬ್ಬರಿಗೂ ಸಿಕ್ಸ್‌ಪ್ಯಾಕ್ ಇತ್ತು. ಅದು ತೆರೆಮೇಲೆ ಕಾಣಬೇಕೆನ್ನುವ ಕಾರಣಕ್ಕೆ ಇವರು ಜಾಕೆಟ್ ಧರಿಸಿರಲಿಲ್ಲ. ಒಂದು ವೇಳೆ ಧರಿಸಿದ್ದಿದ್ದರೆ ಇಬ್ಬರು ಖಳನಟರ ಪ್ರಾಣವನ್ನು ತಿಪ್ಪಗೊಂಡನಹಳ್ಳಿ ಕೆರೆ ನುಂಗುತ್ತಿರಲಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇಂದ್ರ ಸಚಿವರನ್ನು ಟಾರ್ಗೆಟ್ ಮಾಡಿದ ಪಾಕಿಸ್ತಾನದ ಐಎಸ್‌ಐ: ಕೇಂದ್ರ ಗೃಹ ಇಲಾಖೆಯಿಂದ ಭದ್ರತೆ ಹೆಚ್ಚಳ
ಆಸ್ಟ್ರೇಲಿಯಾದ ಸಿಡ್ನಿ ಬೋಂಡಿ ಬೀಚ್‌ನಲ್ಲಿ ಯಹೂದಿಗಳ ಮೇಲೆ ಉಗ್ರರ ಗುಂಡಿನ ದಾಳಿ: 12 ಸಾವು