
ಬೆಂಗಳೂರು(ನ.08): ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ದೊಡ್ಡ ಅವಘಡವೇ ನಡೆದುಹೋಗಿದೆ. ಸಾಹಸ ದೃಶ್ಯ ಶೂಟಿಂಗ್ ವೇಳೆ 100 ಅಡಿ ಎತ್ತರದಲ್ಲಿದ್ದ ಹೆಲಿಕಾಪ್ಟರ್`ನಿಂದ ನೀರಿಗೆ ಜಿಗಿದ ಖಳನಾಯಕರಾದ ುದಯ್ ಮತ್ತು ಅನಿಲ್ ಸಾವಿಗೀಡಾಗಿದ್ದಾರೆ. ಇದುವರೆಗೂ ಅವರ ಶವ ಸಿಕ್ಕಿಲ್ಲ. ಶವಗಳ ಹುಡುಕಾಟ ಭರದಿಂದ ಸಾಗಿದೆ. ಅಂದಹಾಗೆ, ನಿನ್ನೆ ಮಧ್ಯಾಹ್ನ ಶುಟಿಂಗ್ ಸಂದರ್ಭದಿಂದ ಹಿಡಿದು ಇಂದು ಮಧ್ಯಾಹ್ನದವರೆಗೆ ನಡೆದ ಕಾರ್ಯಾಚರಣೆಯ ಕಾಲಾನುಕ್ರಮದ ವಿವರ ಇಲ್ಲಿದೆ.
- ನಿನ್ನೆ ಮಧ್ಯಾಹ್ನ 2.30 : ಸ್ಟಂಟ್ ಅನಾಹುತ. ಇಬ್ಬರು ಕಲಾವಿದರ ದುರ್ಮರಣ
- ನಿನ್ನೆ ಮಧ್ಯಾಹ್ನ 2.45 : ನೀರಿನಲ್ಲಿ ಮುಳುಗಿದವರ ರಕ್ಷಣಾ ಕಾರ್ಯಾಚರಣೆ
- ನಿನ್ನೆ ಮಧ್ಯಾಹ್ನ 3 ಗಂಟೆ : ನೀರಿನಲ್ಲಿ ಮುಳುಗಿದ್ದ ಕಲಾವಿದರ ನಿಧನ ಖಚಿತ
- ನಿನ್ನೆ ಮಧ್ಯಾಹ್ನ 3.30 : ಮೃತದೇಹ ಪತ್ತೆ ಕಾರ್ಯಾಚರಣೆ ಆರಂಭ
- ಮಧ್ಯರಾತ್ರಿ 12 ಗಂಟೆ :ಕತ್ತಲಿನ ಹಿನ್ನೆಲೆ ಕಾರ್ಯಾಚರಣೆ ಸ್ಥಗಿತ
- ಬೆಳಗ್ಗೆ 7 ಗಂಟೆ : ಅನಿಲ್, ಉದಯ್ ಮೃತದೇಹ ಶೋಧ ಆರಂಭ
- ಬೆಳಗ್ಗೆ 7.30 : ತಿಪ್ಪಗೊಂಡನಹಳ್ಳಿ ಡ್ಯಾಂನಲ್ಲಿ NDRF, SBRI ಜಂಟಿ ಕಾರ್ಯಾಚರಣೆ
- ಬೆಳಗ್ಗೆ 7.30 : ಸ್ವತಃ ಕಾರ್ಯಾಚರಣೆಗೆ ಇಳಿದ ದುನಿಯಾ ವಿಜಯ್
- ಬೆಳಗ್ಗೆ 7.30 : 25 ಸಿಬ್ಬಂದಿಯಿಂದ ಮೃತದೇಹ ಪತ್ತೆ ಕಾರ್ಯಾಚರಣೆ
- ಬೆಳಗ್ಗೆ 9 ಗಂಟೆ : ಘಟನಾ ಸ್ಥಳಕ್ಕೆ ಶಿವರಾಜ್ ಕುಮಾರ್ ಆಗಮನ
- ಬೆಳಗ್ಗೆ 9.30 : ವಾಕಿಟಾಕಿಯಲ್ಲಿ ಸ್ಥಳದ ಮಾಹಿತಿ ನೀಡಿದ ನಟ ಪ್ರೇಮ್
- ಬೆಳಗ್ಗೆ 10 ಗಂಟೆ : ಬೆಳಗಿನ ಉಪಾಹಾರಕ್ಕೆ ಕಾರ್ಯಾಚರಣೆ ಸ್ಥಗಿತ
- ಬೆಳಗ್ಗೆ 10.30 : ಮತ್ತೆ ಮೃತದೇಹ ಪತ್ತೆ ಕಾರ್ಯಾಚರಣೆ ಶುರು
- ಬೆಳಗ್ಗೆ 11 ಗಂಟೆ : ಮಂಜಣ್ಣ ಅವರ ರೋಬೋಗೆ ಬಟ್ಟೆಯ ತುಂಡು ಸಿಕ್ಕಿತು
- ಮಧ್ಯಾಹ್ನ 1 ಗಂಟೆ : ಮೃತ ನಟ ಉದಯ್ ಮನೆಗೆ ದುನಿಯಾ ವಿಜಿ ಪತ್ನಿ ನಾಗರತ್ನ ಭೇಟಿ
- ಮಧ್ಯಾಹ್ನ 1.30 : ನಟ ಉದಯ್ ಮನೆಗೆ ಸಾ.ರಾ. ಗೋವಿಂದು ಭೇಟಿ
- ಮಧ್ಯಾಹ್ನ 2 ಗಂಟೆ : ಊಟ ಮತ್ತು ವಿಶ್ರಾಂತಿಗಾಗಿ ಕಾರ್ಯಾಚರಣೆ ಮತ್ತೆ ಸ್ಥಗಿತ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.