
ಬೆಂಗಳೂರು(ನ.03): ಮಾಸ್ತಿಗುಡಿ ಚಿತ್ರತಂಡ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಇಬ್ಬರು ಖಳನಟರನ್ನ ಬಲಿಕೊಟ್ಟಿದೆ. ಒಂದು ಧಾರಾವಾಹಿಯಲ್ಲೇ ಎಷ್ಟೆಲ್ಲ ರಕ್ಷಣಾ ಕ್ರಮಗಳನ್ನ ಕೈಗೊಂಡಿರುತ್ತಾರೆ. ಆದರೆ, ಕೋಟಿ ಕೋಟಿ ಬಜೆಟ್`ನ ಸಿನಿಮಾ ಶೂಟಿಂಗ್`ನಲ್ಲಿ ನಿರ್ಲಕ್ಷ್ಯ ವಹಿಸಿದ್ದು ಏಕೆ..? ಎಂಬ ಪ್ರಶ್ನೆ ಎದ್ದಿದೆ. ಬೆಂಗಳೂರಿನ ಕಗ್ಗಲಿಪುರದಲಲ್ಇ ಮೀನಾಕ್ಷಿ ಮದುವೆ ಧಾರಾವಾಹಿಗಾಗಿ ಒಂದು ಆತ್ಮಹತ್ಯೆ ದೃಶ್ಯ ಚಿತ್ರೀಕರಣ ನಡೆದಿತ್ತು. ನಿರ್ದೇಶಕ ಪ್ರೀತಂಶೆಟ್ಟಿ ಸಂಪೂರ್ಣ ಮುಂಜಾಗ್ರತಾಕ್ರಮವಹಿಸಿ ಈ ದೃಶ್ಯ ಚಿತ್ರೀಕರಿಸಿದ್ದರು. 50 ಅಡಿ ಆಳದ ಕೆರೆಗೆ ಧುಮುಕಿದ ನಟಿಯ ಹಿಂದೆ ಇಬ್ಬರು ಈಜುಗಾರರು ಮತ್ತು ರಕ್ಷಣೆಗೆ ಬೋಟ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಮಾಸ್ತಿಗುಡಿ ತಂಡದಲ್ಲಿ ಇದ್ಯಾವುದೂ ಇರಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.