
ಬೆಂಗಳೂರು (ಸೆ.19): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ತನಿಖೆ ನಡೆಸುತ್ತಿರುವ ಎಸ್ಐಟಿ ಮಾಜಿ ಡಾನ್ಗಳಿಗೆ ಶಾಕ್ ಕೊಟ್ಟಿದೆ. ಗೌರಿ ಮೂಲಕ ಕಾಡಿನಿಂದ ಹೊರ ಬಂದು ಜೈಲಿನಲ್ಲಿರುವ ಮಾಜಿ ನಕ್ಸಲರನ್ನು ಪ್ರಶ್ನಸಿದ್ದು, ಮಾಹಿತಿ ಕಲೆ ಹಾಕಿದೆ. ಗೌರಿ ಹಂತಕರ ಮಹತ್ವದ ಸುಳಿವು ಸಿಕ್ಕಿದೆ ಎನ್ನುತ್ತಿವೆ ಎನ್ನುತ್ತಿವೆ ಎಸ್ಐಟಿ ಮೂಲಗಳು.
ಪತ್ರಕರ್ತೆ ಗೌರಿ ಲಂಕೇಶ್ ಹಂತಕರ ಬೆನ್ನು ಬಿದ್ದಿರೋ ವಿಶೇಷ ತನಿಖಾ ತಂಡ ಹಾಲಿ ಹಾಗೂ ಮಾಜಿ ಡಾನ್ಗಳಿಗೆ ಶಾಕ್ ನೀಡಿದೆ. ಗೌರಿ ಹತ್ಯೆ ಸಂಬಂಧ ಬೆಂಗಳೂರಿನ ಡಾನ್ಗಳ ಕೈವಾಡ ಅಥಾವ ಅವರಿಗೆ ಮಾಹಿತಿ ಇದೆಯಾ ಎಂಬ ಕುರಿತು ವಿಚಾರಣೆಗೆ ನಡೆಸಲಾಗುತ್ತಿದೆ. ನಿನ್ನೆ ರೌಡಿ ಮುಲಾಮ ವಿಚಾರಣೆ ನಡೆಸಿದ್ದ ಅಧಿಕಾರಿಗಳು ಇಂದು ಅಗ್ನಿ ಶ್ರೀಧರ್ ಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಶ್ರೀಧರ್ ಮತ್ತವರ ಸಹಚರರ ಹೇಳಿಕೆ ಪಡೆದುಕೊಂಡಿದ್ದಾರೆ.
ಗೌರಿ ಲಂಕೇಶ್ ಮೂಲಕ ಕಾಡಿನಿಂದ ನಾಡಿಗೆ ಬಂದು ಜೈಲು ಪಾಲಾಗಿರೋ ಕನ್ಯಾಕುಮಾರ್ ಹಾಗೂ ಶಿವು ದಂಪತಿ ವಿಚಾರಣೆ ಕೂಡ ನಡೆಸಲಾಗಿದೆ. ಶರಣಾಗತಿ ವೇಳೆ ನಕ್ಸಲ್ ಪ್ಯಾಕೇಸ್ ಕೊಡಿಸುವುದಾಗಿ ಗೌರಿ ಲಂಕೇಶ್ ಭರವಸೆ ನೀಡಿ ಮಾತು ತಪ್ಪಿದ್ದರು. ಈ ದ್ವೇಷದ ಹಿನ್ನೆಲೆ ಹತ್ಯೆಗೆ ಸಂಚು ರೂಪಿಸಿರಬಹುದಾ ಎಂಬ ಶಂಕೆ ಮೇಲೆ ವಿಚಾರಣೆ ನಡೆಸಿದ್ದು, ನನಗೆನೂ ಗೊತ್ತಿಲ್ಲ ಎಂದು ಕನ್ಯಾಕುಮಾರಿ ಹಾಗೂ ಶಿವು ಹೇಳಿದ್ದಾರೆ. ಹೀಗಾಗಿ ಪ್ರಕರಣಕ್ಕೆ ಯಾವುದೇ ಪ್ರಮುಖ ಸುಳಿವು ಸಿಕ್ಕಿಲ್ಲ ಎನ್ನುತ್ತಿವೆ ಎಸ್ಐಟಿ ಮೂಲಗಳು.
10ಕ್ಕೂ ಹೆಚ್ಚು ದೃಷ್ಟಿ ಕೋನಗಳಲ್ಲಿ ತನಿಖೆ ನಡೆಸುತ್ತಿರುವ ಎಸ್ಐಟಿಗೆ ಹಂತಕರ ಸುಳಿವು ಸಿಕ್ಕಿದೆ ಎನ್ನಲಾಗಿದೆ. ತನಿಖೆ ಚುರುಕುಗೊಂಡಿದ್ದು, ಹಂತಕ ನಮ್ಮಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ ವಿಶೇಷ ತಂಡದಲ್ಲಿರುವ ಅಧಿಕಾರಿಗಳು.
ಮುತ್ತಪ್ಪ ರೈ ವಿಚಾರಣೆ
ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಮುತ್ತಪ್ಪ ರೈಯನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗಿದೆ. ಗೌರಿ ಲಂಕೇಶ್ ವಿರುದ್ಧ ಮಾನನಷ್ಟ ಮೋಕ್ಕದಮ್ಮೆ ಕೇಸ್ ದಾಖಲಿಸಿದ್ದರು ಮುತ್ತಪ್ಪ ರೈ. ಈ ಹಿನ್ನಲೆಯಲ್ಲಿ ಮುತ್ತಪ್ಪ ರೈ ಹೇಳಿಕೆಯನ್ನ ಎಸ್ಐಟಿ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ನನಗೂ ಗೌರಿ ಹತ್ಯೆಗೂ ಯಾವುದೇ ಸಂಬಂಧವಿಲ್ಲವೆಂದು ಮುತ್ತಪ್ಪ ರೈ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.