ಸನ್ನಿ ಲಿಯೋನ್ ಕಾಂಡೋಮ್ ಅವಾಂತರ

Published : Sep 19, 2017, 06:02 PM ISTUpdated : Apr 11, 2018, 01:12 PM IST
ಸನ್ನಿ ಲಿಯೋನ್ ಕಾಂಡೋಮ್ ಅವಾಂತರ

ಸಾರಾಂಶ

ಖ್ಯಾತ ನಟಿ ಪೋರ್ನ್​ ಸ್ಟಾರ್ ಸನ್ನಿ ಲಿಯೋನ್ ಜಾಹಿರಾತು ಅವಾಂತರ ಸೃಷ್ಟಿಸಿದ್ದಾರೆ. ನವರಾತ್ರಿ ಹಬ್ಬದೊಂದಿಗೆ ನಿಮ್ಮ  ಸಂತೋಷವನ್ನ ಆಚರಿಸಿ ಎಂದು ದಾಂಡಿಯ ನೃತ್ಯ ಇರುವ ಕಾಡೊಂಮ್ ಜಾಹಿರಾತನ್ನ ಸನ್ನಿ ಲಿಯೋನ್ ನೀಡಿದ್ದಾರೆ.

ಅಹ್ಮದಾಬಾದ್( ಸೆ.19): ಖ್ಯಾತ ನಟಿ ಪೋರ್ನ್​ ಸ್ಟಾರ್ ಸನ್ನಿ ಲಿಯೋನ್ ಜಾಹಿರಾತು ಅವಾಂತರ ಸೃಷ್ಟಿಸಿದ್ದಾರೆ. ನವರಾತ್ರಿ ಹಬ್ಬದೊಂದಿಗೆ ನಿಮ್ಮ  ಸಂತೋಷವನ್ನ ಆಚರಿಸಿ ಎಂದು ದಾಂಡಿಯ ನೃತ್ಯ ಇರುವ ಕಾಡೊಂಮ್ ಜಾಹಿರಾತನ್ನ ಸನ್ನಿ ಲಿಯೋನ್ ನೀಡಿದ್ದಾರೆ.

ಈ ಜಾಹಿರಾತಿನಲ್ಲಿ ಹಿಂದುಗಳ ಪವಿತ್ರವಾದ ನವರಾತ್ರಿ  ಹಬ್ಬವನ್ನ  ಅಪಹಾಸ್ಯ ಮಾಡಲಾಗಿದೆ. ಧಾರ್ಮಿಕ ಆಚರಣೆಗೆ ಹಾಗೂ ಸಂಸ್ಕೃತಿಗೆ  ಧಕ್ಕೆ ತಂದಿದೆ ಎಂದು ರಾಜಸ್ಥಾನ ಮತ್ತು ಗುಜರಾತಿನಲ್ಲಿ ಸನ್ನಿ ಲಿಯೋನ್ ನೀಡಿರುವ ಜಾಹಿರಾತನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಹಣದ ಆಸೆಗಾಗಿ ಭಾರತೀಯ ಸಾಂಸ್ಕೃತಿಕ ಮೌಲ್ಯವನ್ನು ಹಾಳು ಮಾಡುತ್ತಿದ್ದಾರೆ. ದಾಂಡಿಯ ನೃತ್ಯವನ್ನ ಕೂಡಾ  ಜಾಹಿರಾತಿನಲ್ಲಿ ಅವಮಾನ ಮಾಡಲಾಗಿದೆ ಎಂದು ಅನೇಕರು ಸನ್ನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಆಟವಾಡಿ' ಅದರ ಜೊತೆಗೆ ನವರಾತ್ರಿಯನ್ನು ಪ್ರೀತಿಸಿ ಎಂದು ಕಾಂಡೋಮ್ ಜಾಹಿರಾತಿನಲ್ಲಿ ಹೇಳಲಾಗುತ್ತದೆ. ಇದನ್ನು ಖಂಡಿಸಿ ಅಖಿಲ ಭಾರತ ಮಾರಾಟಗಾರರ ಸಂಘ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್'ಗೆ ಪತ್ರ ಬರೆದಿದ್ದು ಜಾಹಿರಾತು ಫಲಕಗಳನ್ನು ಕೂಡಲೇ ತೆಗೆಸಿ. ಇದರ ತಯಾರಕರು ಹಾಗೂ ರಾಯಭಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ
ಮಲ್ಲಿಕಾರ್ಜುನ ಖರ್ಗೆ ಹಠಾವೋ ಪ್ರಿಯಾಂಕಾ ಗಾಂಧಿ ಲಾವೋ, ಕಾಂಗ್ರೆಸ್ ಅಧ್ಯಕ್ಷ ಬದಲಾವಣೆಗೆ ಹೋರಾಟ