ಪೊಲೀಸ್ ಆಫಿಸರ್ ಡಿ. ರೂಪಾಗೆ ಸುಬ್ರಮಣಿಯನ್ ಸ್ವಾಮಿ ಸ್ಫೂರ್ತಿಯಂತೆ

Published : May 06, 2018, 02:20 PM IST
ಪೊಲೀಸ್ ಆಫಿಸರ್ ಡಿ. ರೂಪಾಗೆ ಸುಬ್ರಮಣಿಯನ್ ಸ್ವಾಮಿ ಸ್ಫೂರ್ತಿಯಂತೆ

ಸಾರಾಂಶ

ಫೈರ್  ಬ್ರಾಂಡ್ ಫೊಲೀಸ್ ಆಫಿಸರ್ ಎಂದೇ ಪ್ರಖ್ಯಾತರಾದ ಡಿ. ರೂಪಾ ಮೌದ್ಗಿಲ್ ಇದೀಗ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ತಮಗೆ ನಿಜವಾದ ಸ್ಫೂರ್ತಿ ಎಂದು ಹೊಗಳಿದ್ದಾರೆ. 

ಬೆಂಗಳೂರು : ಫೈರ್  ಬ್ರಾಂಡ್ ಫೊಲೀಸ್ ಆಫಿಸರ್ ಎಂದೇ ಪ್ರಖ್ಯಾತರಾದ ಡಿ. ರೂಪಾ ಮೌದ್ಗಿಲ್ ಇದೀಗ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ತಮಗೆ ನಿಜವಾದ ಸ್ಫೂರ್ತಿ ಎಂದು ಹೊಗಳಿದ್ದಾರೆ. 

ನಿಮ್ಮ ದೂರಿನಿಂದ ಇಂದು ಮಹಿಳೆಯೋರ್ವರು ಬೆಂಗಳೂರು ಜೈಲು ಸೇರುವಂತಾಯ್ತು. ನಿಜವಾಗಲು ತಮಗೆ ನೀವು ಸ್ಫೂರ್ತಿ ಎಂದು ಸುಬ್ರಮಣಿಯನ್ ಸ್ವಾಮಿ ಅವರೊಂದಿಗಿನ ಸೆಲ್ಫಿ ಫೊಟೊವನ್ನು ಟ್ವೀಟ್ ಮಾಡಿದ್ದಾರೆ. 

ಭ್ರಷ್ಟಾಚಾರ ಮತ್ತು ಕಪ್ಪು ಹಣದ ಬಗೆಗಿನ ಹೋರಾಟವು  ನಿಮ್ಮ ಶತ್ರುಗಳಿಗೂ ಕೂಡ ಸ್ಫೂರ್ತಿಯೇ ಎಂದು ಇನ್ನೊಂದು ಟ್ವೀಟ್ ನಲ್ಲಿ ರೂಪಾ ಅವರು ಹೇಳಿಕೊಂಡಿದ್ದಾರೆ. ಇದಕ್ಕೆ ಅನೇಕ ಟ್ವಿಟರ್ ಬಳಕೆ ದಾರರು ಪ್ರತಿಕ್ರಿಯೆ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಬಂದೀಖಾನೆ ಡಿಜಿಪಿ ಹುದ್ದೆಯಲ್ಲಿದ್ದ ಡಿ. ರೂಪಾ ಅವರು  ಪರಪ್ಪನ ಅಗ್ರಹಾರದಲ್ಲಿರುವ ವಾಸ್ತವತೆಯನ್ನು ಬಹಿರಂಗಗೊಳಿಸಿದ್ದರು. ಶಶಿಕಲಾಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎನ್ನುವ ವಿಚಾರವನ್ನು ಬೆಳಕಿಗೆ ತಂದಿದ್ದರು.   ಈ ವಿಚಾರ ದೇಶದಾದ್ಯಂತ ಸಂಚಲನ ಮೂಡಿಸಿತ್ತು.

 

The versatile person without whose complaint, probably, the lady(who enjoyed perks and privileges in Bengaluru prison as exposed by me) wouldn't have landed in prison in the first place. Sir, u inspire! .@Swamy39 pic.twitter.com/aahRlHUu1w

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ