ಬಾಲ್ಯ ವಿವಾಹದಿಂದ ಲವ್ ಜಿಹಾದ್ ತಡೆಯಲು ಸಾಧ್ಯ : ಬಿಜೆಪಿ ಮುಖಂಡ

First Published May 6, 2018, 1:41 PM IST
Highlights

ಮಧ್ಯ ಪ್ರದೇಶದ ಬಿಜೆಪಿ ಮುಖಂಡ ಗೋಪಾಲ್ ಪರ್ಮಾರ್ ಲವ್ ಜಿಹಾದ್ ಬಗ್ಗೆ ಹೇಳಿಕೆಯೊಂದನ್ನು ನೀಡುವ ಮೂಲಕ ವಿವಾದಕ್ಕೆ ಈಡಾಗಿದ್ದಾರೆ. ಹುಡುಗಿಯರು ತಡವಾಗಿ ವಿವಾಹವಾಗುವುದೇ ಲವ್ ಜಿಹಾದ್ ಗೆ ಕಾರಣ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.  

ಭೋಪಾಲ್ : ಮಧ್ಯ ಪ್ರದೇಶದ ಬಿಜೆಪಿ ಮುಖಂಡ ಗೋಪಾಲ್ ಪರ್ಮಾರ್ ಲವ್ ಜಿಹಾದ್ ಬಗ್ಗೆ ಹೇಳಿಕೆಯೊಂದನ್ನು ನೀಡುವ ಮೂಲಕ ವಿವಾದಕ್ಕೆ ಈಡಾಗಿದ್ದಾರೆ. 

ಹುಡುಗಿಯರು ತಡವಾಗಿ ವಿವಾಹವಾಗುವುದೇ ಲವ್ ಜಿಹಾದ್ ಗೆ ಕಾರಣ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.  ಹಿಂದು ಮಹಿಳೆ ಮತ್ತು ಮುಸ್ಲಿಂ ಪುರುಷನ ನಡುವಿನ ಸಂಬಂಧಕ್ಕೆ ಕಾರಣವೇ ಮದುವೆಯನ್ನು ತಡಮಾಡುವುದಾಗಿದೆ ಎಂದಿದ್ದಾರೆ.  

ಆದರೆ ಚಿಕ್ಕ ವಯಸ್ಸಿನಲ್ಲಿ  ವಿವಾಹವಾಗುವುದರಿಂದ ಇಂತಹ ಸಮಸ್ಯೆಯನ್ನು ತಪ್ಪಿಸಬಹುದು ಎಂದು ಹೇಳಿದ್ದಾರೆ.  ಕುಟುಂಬ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯನ್ನು  ನಿಶ್ಚಯಿಸುವುದರಿಂದ ಲವ್ ಜಿಹಾದ್ ತಡೆಯುವುದಲ್ಲದೇ ಸಂಬಂಧ ಕೊನೆಯವರೆಗೂ ಉಳಿಯುತ್ತದೆ ಎಂದು ಹೇಳಿದ್ದಾರೆ. 

18 ವರ್ಷವಾಗುತ್ತಲೇ ಅನೇಕ ಹುಡಗಿಯರು ಮನೆಯಿಂದ ಓಡಿಹೋಗುತ್ತಾರೆ. ಇಂತವರನ್ನು, ಶಾಲಾ ಹುಡುಗಿಯರನ್ನು ಲವ್ ಜಿಹಾದ್ ಗೆ ಬೀಳಿಸಲು ಕೆಲ ಪುರುಷರು ಕಾಯುತ್ತಿರುತ್ತಾರೆ ಎಂದು ಇದೀಗ ಭಾರೀ ವಿವಾದಕ್ಕೆಡೆ ಮಾಡಿದ್ದಾರೆ.

click me!