ಪ್ಲಾಸ್ಟಿಕ್ ಪರ್ಯಾಯ 'ಚಾಲೆಂಜ್': ವಿಜೇತರಿಗೆ ಕೇಂದ್ರದಿಂದ 3 ಲಕ್ಷ ಬಹುಮಾನ!

By Web DeskFirst Published Oct 19, 2019, 11:24 AM IST
Highlights

ಪ್ಲಾಸ್ಟಿಕ್‌ಗೆ ಪರ್ಯಾಯ ಸೂಚಿಸಿ| ಕೇಂದ್ರ ಸರ್ಕಾರದಿಂದ 3 ಲಕ್ಷ ಬಹುಮಾನ ಗೆಲ್ಲಿ| ಸರ್ಕಾರದ ನೂತನ ಚಾಲೆಂಜ್

ನವದೆಹಲಿ[ಅ.19]: ಪರಿಸರಕ್ಕೆ ಮಾರಕವಾದ ಏಕ-ಬಳಕೆ ಪ್ಲಾಸ್ಟಿಕ್ (ಸಿಂಗಲ್ ಯೂಸ್ ಪ್ಲಾಸ್ಟಿಕ್) ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರ, ಈ ಪ್ಲಾಸ್ಟಿಕ್‌ಗೆ ಪರ್ಯಾಯ ಏನು ಎಂಬುದನ್ನು ಕಂಡು ಹಿಡಿಯುವಂತೆ ಸ್ಟಾರ್ಟಪ್ ಕಂಪನಿಗಳಿಗೆ ‘ಚಾಲೆಂಜ್’ ಮಾಡಿದೆ

ಪ್ಲಾಸ್ಟಿಕ್‌ಗೆ ಅತ್ಯುತ್ತಮ ಪರ್ಯಾಯ ವಿಧಾನ ಸೂಚಿಸುವ ಕಂಪನಿಗೆ 3 ಲಕ್ಷ ರು. ಬಹುಮಾನ ಹಾಗೂ ದ್ವಿತೀಯ ವಿಜೇತರಿಗೆ ೨ ಲಕ್ಷ ರು. ಬಹುಮಾನ ಮೊತ್ತ ಪ್ರಕಟಿಸಲಾಗಿದೆ.

ಪರ್ಯಾಯ ಉತ್ಪನ್ನ ಏನೆಂಬ ಮಾಹಿತಿ, ಈ ಉತ್ಪನ್ನ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬು ದಕ್ಕೆ ಸಾಕ್ಷ್ಯ ಹಾಗೂ ಈ ಉತ್ಪನ್ನವನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬ 3 ಮಾಹಿತಿ ಗಳನ್ನು ನಾವೀನ್ಯ (ಸ್ಟಾರ್ಟ ಪ್) ಕಂಪನಿಗಳು ನೀಡಬೇಕಾಗುತ್ತದೆ’ ಎಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಯ ಪ್ರಕಟಣೆ ಹೇಳಿದೆ.

ಬರುವ ಉತ್ತರಗಳನ್ನು ತಜ್ಞರು ಪರಿಶೀಲಿಸಿ ಉತ್ತಮ ಉತ್ತರಗಳನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡುತ್ತಾರೆ. ಬಳಿಕ ಅಕ್ಟೋಬರ್ 31ರಂದು ಪ್ರಶಸ್ತಿ ಘೋಷಿಸಲಾಗುತ್ತದೆ. ಪ್ಲಾಸ್ಟಿಕ್ ಚೀಲಗಳು, ಸ್ಟ್ರಾ, ಕಾಫಿ-ಟೀ ಕಪ್, ಸೋಡಾ ಹಾಗೂ ನೀರಿನ ಬಾಟಲಿಗಳು ಏಕ-ಬಳಕೆ ಪ್ಲಾಸ್ಟಿಕ್ ಆಗಿದ್ದು, ಪರಿಸರಕ್ಕೆ ಮಾರಕವಾಗಿವೆ. 2022ರ ಒಳಗೆ ಇವುಗಳ ಸಂಪೂರ್ಣ ನಿರ್ಮೂಲನೆಗೆ ಕೇಂದ್ರ ಸರ್ಕಾರ ಪಣ ತೊಟ್ಟಿದೆ. ಈಗಾಗಲೇ ಬೆಂಗಳೂರು ಸೇರಿ ಹಲವು ಕಡೆ ಇವುಗಳ ನಿಷೇಧ ಜಾರಿಯಾಗಿದೆ.

click me!