
ಉಡುಪಿ (ಮಾ. 26): ಕೃಷ್ಣಮಠಕ್ಕೆ ಖ್ಯಾತ ಗಾಯಕ ಮೆಹಬೂಬ್ ಸಾಬ್ ಭೇಟಿ ನೀಡಿದ್ದಾರೆ. ತಂದೆ-ತಾಯಿಯ ಜೊತೆಗೆ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ವಿಶೇಷ ಪೂಜೆ ನೆರವೇರಿಸಿದ ನಂತರ ಪಲಿಮಾರು ಸ್ವಾಮೀಜಿಯಿಂದ ವಿಶೇಷ ಪ್ರಸಾದ ಸ್ವೀಕರಿಸಿದರು. ಈ ವೇಳೆ ರಹಸ್ಯವೊಂದನ್ನು ಮೆಹಬೂಬ್ ಸಾಬ್ ಬಿಚ್ಚಿಟ್ಟಿದ್ದಾರೆ. ರಿಯಾಲಿಟಿ ಶೋ ನಡೆಯುವಾಗಲೇ ಸ್ಟುಡಿಯೋಗೇ ಬಂದಿದ್ದ ಮೇರು ನಟರೊಬ್ಬರು ಮೆಹಬೂಬ್ಗೆ 50 ಸಾವಿರ ರೂಪಾಯಿ ಕೊಟ್ಟು ಹೋಗಿದ್ರಂತೆ. ನಾನು ಹಣ ಕೊಟ್ಟೆ ಅಂತ ಹೇಳ್ಬೇಡಿ ಅನ್ನೋ ಕಂಡೀಶನ್ ಬೇರೆ ಹಾಕಿದ್ರಂತೆ. ಇದೀಗ ಆ ರಹಸ್ಯ ಬಯಲಾಗಿದೆ. ಮೆಹಬೂಬ್ ಗೆ ಹಣ ಕೊಟ್ಟ ಆ ನಟ ಯಾರು ಅಂತ ಗೊತ್ತಾಗಿದೆ. ಅದು ಬೇರೆ ಯಾರೂ ಅಲ್ಲ, ರೆಬಲ್ ಸ್ಟಾರ್ ಅಂಬರೀಷ್. ಮೆಹಬೂಬ್ ಗಾಯನ ಮೆಚ್ಚಿಕೊಂಡು ಬೆನ್ನು ತಟ್ಟಿ ಹೋದವರು ಅಂಬರೀಷ್ ಅಂತ ಗೊತ್ತಾದ ಮೇಲೆ ಮೆಹಬೂಬ್ ಮನಸ್ಸು ಕೇಳುತ್ತಿಲ್ಲ. ಒಮ್ಮೆಯಾದರೂ ಅಂಬರೀಷ್’ರನ್ನು ಭೇಟಿಯಾಗಬೇಕು ಅನ್ನೋ ಆಸೆಯಂತೆ. ಉಡುಪಿಗೆ ಬಂದಾಗ ತನ್ನ ಈ ಆಸೆಯನ್ನು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ ಮೆಹಬೂಬ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.