ಗೌರಿ ಲಂಕೇಶ್, ಎಂಎಂ ಕಲ್ಬುರ್ಗಿ, ಪನ್ಸಾರೆ, ದಾಬೋಲ್ಕರ್ - ನಾಲ್ಕೂ ಹತ್ಯೆಗಳಲ್ಲಿ ಏನೇನಿದೆ ಸಾಮ್ಯತೆ?

Published : Sep 06, 2017, 11:17 AM ISTUpdated : Apr 11, 2018, 01:08 PM IST
ಗೌರಿ ಲಂಕೇಶ್, ಎಂಎಂ ಕಲ್ಬುರ್ಗಿ, ಪನ್ಸಾರೆ, ದಾಬೋಲ್ಕರ್ - ನಾಲ್ಕೂ ಹತ್ಯೆಗಳಲ್ಲಿ ಏನೇನಿದೆ ಸಾಮ್ಯತೆ?

ಸಾರಾಂಶ

1) ಮೌಢ್ಯತೆಯ ವಿರುದ್ಧ ನಾಲ್ವರೂ ಧ್ವನಿಯೆತ್ತಿದ್ದವರು 2) ಸಂಘಪರಿವಾರ ಸಿದ್ಧಾಂತಗಳಿಗೆ ವಿರೋಧಿಗಳಾಗಿದ್ದರು 3) ಅಲ್ಪಸಂಖ್ಯಾತರ ಪರ ಧ್ವನಿಯೆತ್ತಿದ್ದರು 4) ಹಿಂದೂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು 5) ನಾಲ್ಕೂ ಹತ್ಯೆಗಳಲ್ಲಿ ಹಂತಕರು ಬಳಸಿರುವ ತಂತ್ರಗಳು ಒಂದೇ

ಬೆಂಗಳೂರು(ಸೆ. 06): ಗೌರಿ ಲಂಕೇಶ್ ಹತ್ಯೆ ದೇಶದಲ್ಲಿ ಮತ್ತೊಮ್ಮೆ ಅಸಹಿಷ್ಣುತೆಯ ವಾದಕ್ಕೆ ಎಡೆ ಮಾಡಿಕೊಟ್ಟಿದೆ. ಪ್ರಗತಿಪರ ಚಿಂತಕರು ಹಾಗೂ ವಿಚಾರವಾದಿಗಳ ಸರಣಿ ಹತ್ಯೆಗಳ ಪಟ್ಟಿಗೆ ಈಗ ಗೌರಿ ಲಂಕೇಶ್ ಸೇರ್ಪಡೆಯಾಗಿದ್ದಾರೆ. ಮಹಾರಾಷ್ಟ್ರದ ಪ್ರಗತಿಪರ ಚಿಂತಕರೆನಿಸಿದ್ದ ನರೇಂದ್ರ ಧಾಬೋಲ್ಕರ್ ಮತ್ತು ಗೋವಿಂದ ಪನ್ಸಾರೆಯವರ ಹತ್ಯೆ ಪ್ರಕರಣಗಳು ದೊಡ್ಡ ಸದ್ದು ಮಾಡಿದ್ದವು. ಅದಾದ ಬಳಿಕ ಕರ್ನಾಟಕದ ವಿಚಾರವಾದಿ ಹಾಗೂ ಸಂಶೋಧಕ ಎಂಎಂ ಕಲಬುರ್ಗಿಯವರನ್ನು ಗುಂಡಿಟ್ಟು ಕೊಲ್ಲಲಾಯಿತು. ಈ ಕೃತ್ಯ ಎಸಗಿದ ಹಂತಕರ ಸುಳಿವು ಇನ್ನೂ ಸಿಕ್ಕಿಲ್ಲ. ಆಗಲೇ ಗೌರಿ ಲಂಕೇಶ್ ಹತ್ಯೆಯಾಗಿದೆ. ಬ್ಯಾಲಿಸ್ಟಿಕ್ ತಜ್ಞ ರವೀಂದ್ರ ಅವರು ಎಂಎಂ ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ ಪ್ರಕರಣಗಳಲ್ಲಿರುವ ಸಾಮ್ಯತೆಯನ್ನು ಪತ್ತೆ ಮಾಡಿದ್ದಾರೆ. ನಿನ್ನೆ ರಾತ್ರಿ ಈ ಕುರಿತು ರವೀಂದ್ರ ಅವರು ಪೊಲೀಸರಿಗೆ ಮೌಖಿಕ ವರದಿ ನೀಡಿದ್ದಾರೆ.

ಬಲಿ 1:
ನರೇಂದ್ರ ದಾಬೋಲ್ಕರ್ (69):

ಹತ್ಯೆಯಾಗಿದ್ದು: ಆಗಸ್ಟ್ 20, 2013 - ಪುಣೆ, ಮಹಾರಾಷ್ಟ್ರದಲ್ಲಿ
7.65ಎಂಎಂ ಕಂಟ್ರಿಮೇಡ್ ಪಿಸ್ತೂಲ್ ಬಳಕೆ. ನಾಲ್ಕು ಬುಲೆಟ್​

ಬಲಿ 2:
ಗೋವಿಂದ ಪನ್ಸಾರೆ (81) -

ಹತ್ಯೆಯಾಗಿದ್ದು: ಫೆಬ್ರವರಿ 16, 2015 - ಮಹಾರಾಷ್ಟ್ರ, ಪುಣೆ,
7.65 ಎಂಎಂ ಕಂಟ್ರಿಮೇಡ್ ಪಿಸ್ತೂಲ್. 5 ಬುಲೆಟ್

ಬಲಿ 3:
ಡಾ. ಎಂ.ಎಂ.ಕಲ್ಬುರ್ಗಿ (77) -

ಹತ್ಯೆಯಾಗಿದ್ದು: ಆಗಸ್ಟ್ 30, 2015 - ಕರ್ನಾಟಕದ ಕಲಬುರ್ಗಿ
7.65 ಎಂಎಂ ಕಂಟ್ರಿಮೇಡ್ ಪಿಸ್ತೂಲ್.  2 ಬುಲೆಟ್

ಬಲಿ 4:
ಗೌರಿ ಲಂಕೇಶ್ (55) -
ಹತ್ಯೆಯಾಗಿದ್ದು ಸೆಪ್ಟೆಂಬರ್ 5, 2017 - ಬೆಂಗಳೂರು
0.35 ಎಂಎಂ ಕಂಟ್ರಿಮೇಡ್ ಪಿಸ್ತೂಲ್,  7 ಬುಲೆಟ್

ಅದೇ ಹೋಲಿಕೆ.. ಅದೇ ಕಾರಣ..?
1) ಮೌಢ್ಯತೆಯ ವಿರುದ್ಧ ನಾಲ್ವರೂ ಧ್ವನಿಯೆತ್ತಿದ್ದವರು
2) ಸಂಘಪರಿವಾರ ಸಿದ್ಧಾಂತಗಳಿಗೆ ವಿರೋಧಿಗಳಾಗಿದ್ದರು
3) ಅಲ್ಪಸಂಖ್ಯಾತರ ಪರ ಧ್ವನಿಯೆತ್ತಿದ್ದರು
4) ಹಿಂದೂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು
5) ನಾಲ್ಕೂ ಹತ್ಯೆಗಳಲ್ಲಿ ಹಂತಕರು ಬಳಸಿರುವ ತಂತ್ರಗಳು ಒಂದೇ
6) ದುಷ್ಕರ್ಮಿಗಳು ಬೈಕ್'​ನಲ್ಲಿಯೇ ಬಂದು ಹತ್ಯೆ ಮಾಡಿ ಹೋಗಿದ್ದಾರೆ
7) ನಾಲ್ಕೂ ಹತ್ಯೆಗಳಲ್ಲಿ ಕಂಟ್ರಿಮೇಡ್ ಪಿಸ್ತೂಲ್'ಗಳನ್ನೇ ಬಳಸಿದ್ದಾರೆ.
8) ಕಲಬುರ್ಗಿ ಮತ್ತು ಲಂಕೇಶ್ ಹತ್ಯೆಗಳಲ್ಲಿ .22 ಕ್ಯಾಲಿಬರ್ ಗುಂಡುಗಳ ಬಳಕೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Mandya News: ಸಾಲಬಾಧೆಯಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮ*ಹತ್ಯೆ; ತಾಯಿಗೆ ಹೃದಯಾಘಾತ
Lakkundi: ನಾಲ್ಕನೇ ದಿನದ ಉತ್ಖನನ ಕಾರ್ಯಕ್ಕೆ ಎದುರಾಯ್ತು ಮತ್ತೊಂದು ವಿಘ್ನ; ಆಯುಧ ಮಾದರಿಯ ಕಲ್ಲು ಪತ್ತೆ