
ಜೋಧ್'ಪುರ(ಸೆ.06): ಬ್ಲೂವೇಲ್ ಚಾಲೆಂಜ್'ನ ಕಡೆಯ ಆಟ ಆಡಲು ಇಷ್ಟವಿಲ್ಲದೇ ಹೋದರೂ, ತನ್ನ ತಾಯಿ ಮತ್ತು ಕುಟುಂಬ ಸದಸ್ಯರಿಗೆ ಆಟದ ನಿರ್ವಾಹಕರು ಹಾನಿ ಉಂಟು ಮಾಡಬಹುದೆಂಬ ಭೀತಿಯಿಂದಾಗಿ ಬಾಲಕಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ರಾಜಸ್ಥಾನದ ಜೋಧ್'ಪುರದಲ್ಲಿ ಸೋಮವಾರ ನಡೆದಿದೆ. ಅದೃಷ್ಟವಶಾತ್ ಕೆರೆಯ ಸಮೀಪದಲ್ಲೇ ಇದ್ದ ಕೆಲ ವಾಹನ ಚಾಲಕರು, ಆಕೆಯ ಈ ಕೃತ್ಯವನ್ನು ಗಮನಿಸಿ ಮುಳುಗುತ್ತಿದ್ದ ಆಕೆಯನ್ನು ಬಚಾವ್ ಮಾಡಿದ್ದಾರೆ.
ಬಿಎಸ್‌ಎಫ್ ಯೋಧರೊಬ್ಬರ ಪುತ್ರಿಯಾಗಿರುವ 17ರ ಬಾಲಕಿ ಕೆಲ ದಿನಗಳ ಹಿಂದೆ ಮೊಬೈಲ್'ನಲ್ಲಿ ಬ್ಲೂವೇಲ್ ಗೇಮ್ ಡೌನ್ ಲೋಡ್ ಮಾಡಿಕೊಂಡಿದ್ದಳು. ಆಟದ ಎಲ್ಲಾ ಹಂತಗಳನ್ನು ಪೂರೈಸಿದ ಆಕೆಗೆ ಕಡೆಯ ಹಂತವಾಗಿ ಆತ್ಮಹತ್ಯೆಯ ಚಾಲೆಂಜ್ ನೀಡಲಾಗಿತ್ತು. ಆದರೆ ಆಕೆಗೆ ಸಾಯಲು ಇಷ್ಟವಿರಲಿಲ್ಲ. ಆದರೆ ಕಡೆಯ ಚಾಲೆಂಜ್ ಆಡದೇ ಹೋದಲ್ಲಿ ಆಟದ ನಿರ್ವಾಹಕರು ತಮ್ಮ ಕುಟುಂಬಕ್ಕೆ ತೊಂದರೆ ಮಾಡಬಹುದೆಂದು ಹೆದರಿದ ಬಾಲಕಿ ಕಯ್ಲಾನಾ ಕೆರೆಗೆ ಹಾರಲು ಸೋಮವಾರ ರಾತ್ರಿ 10 ಗಂಟೆ ವೇಳೆಗೆ ಮನೆಯಿಂದ ತೆರಳಿದ್ದಾಳೆ. ಈ ನಡುವೆ ಮನೆಯಲ್ಲಿ ಬಾಲಕಿ ಕಾಣಿಸಿದ ಗಾಬರಿಗೊಂಡ ಪೋಷಕರು ಠಾಣೆಯಲ್ಲಿ ದೂರು ನೀಡಿದ್ದಾರೆ.
ಮತ್ತೊಂದೆಡೆ ಬಾಲಕಿ ಕೆರೆಯ ಬಳಿ ತೆರಳಿ ರಾತ್ರಿ 11 ಗಂಟೆ ವೇಳೆಗೆ ನೀರಿಗೆ ಧುಮುಕಿದ್ದಾಳೆ. ಆದರೆ ಸಮೀಪದಲ್ಲೇ ಇದ್ದ ಕೆಲ ವಾಹನ ಚಾಲಕರು ಇದನ್ನು ಗಮನಿಸಿ ತಾವೂ ನೀರಿಗೆ ಧುಮುಕಿ ಆಕೆಯನ್ನು ರಕ್ಷಿಸಿದ್ದಾರೆ. ಆದರೆ ರಕ್ಷಿಸಿದ ಬಳಿಕವೂ ಅವರಿಂದ ತಪ್ಪಿಸಿಕೊಂಡ ಬಾಲಕಿ ಮತ್ತೊಮ್ಮೆ ಕೆರೆಗೆ ಹಾರಿದ್ದಾಳೆ. ಆದರೆ ಚಾಲಕರ ತಂಡ ಮತ್ತೆ ನೀರಿಗೆ ಹಾರಿಗೆ ಆಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.