
ಬೆಂಗಳೂರು : ಬಜೆಟ್ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಇಂದಿನ ಅಧಿವೇಶನದಲ್ಲಿ ಉತ್ತರ ನೀಡಿದ್ದಾರೆ. ತಮ್ಮ ಅಧಿಕಾರವಧಿಯ ಕೊನೆಯ ದಿನ ಸಿಎಂ ಭಾಷಣ ಮಾಡಿದ್ದು, ನಾನು ಸಿಎಂ ಆಗಿ 6 ಬಜೆಟ್ ಮಂಡಿಸಿದ್ದೇನೆ. ಹಣಕಾಸು ಮಂತ್ರಿಯಾಗಿ ಒಟ್ಟು 13 ಬಜೆಟ್ ಮಂಡಿಸಿದ್ದೇನೆ ಎಂದು ಹೇಳಿದ್ದಾರೆ.
ದೇವರಾಜ್ ಅರಸರ ಬಳಿಕ 5 ವರ್ಷ ಆಡಳಿತಾವಧಿ ಪೂರೈಸಿದ್ದೇನೆ. 5 ವರ್ಷ ಜನರ ಆಶಿರ್ವಾದ ನನಗೆ ಸಿಕ್ಕಿದೆ. ಯಶಸ್ವಿಯಾಗಿ ಅಧಿಕಾರ ನಡೆಸಿ ಸುಭದ್ರ ಆಡಳಿತವನ್ನು ನೀಡಿದ್ದೇನೆ. ಪ್ರತಿಪಕ್ಷಗಳು ಟೀಕೆಗಳನ್ನ ಮಾಡಿವೆ. ಸಲಹೆಗಳನ್ನು ನೀಡಿವೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಬಹುತೇಕರು ಗೈರು
ವಿಧಾನಸಭೆಯಲ್ಲಿ ಬಹುತೇಕ ಸಚಿವರು ಗೈರಾಗಿದ್ದು, ಅವರ ಪರ ಕಾಗದ ಪತ್ರಗಳನ್ನ ಮಂಡಿಸಿದ ಸಿಎಂಗೆ ಬಿಜೆಪಿಯಿಂದ ಟಾಂಗ್ ನೀಡಲಾಯ್ತು. ಅಧಿಕಾರ ವಹಿಸಿಕೊಂಡಾಗ ಸಿಂಗಲ್ ಕ್ಯಾಬಿನೆಟ್ ಆಗಿತ್ತು. ಸರ್ಕಾರದ ಕೊನೆಯ ಅಧಿವೇಶನದ ದಿನವೂ ಸಿಂಗಲ್ ಕ್ಯಾಬಿನೆಟ್ ಆಗಿದೆ ಎಂದು ಸುರೇಶ್ ಕುಮಾರ್ ಸಿಎಂಗೆ ಕಾಲೆಳೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.