ಗೌಡ್ರು ಬೇಡ ಅಂದ್ರು, ರಾಹುಲ್‌ಗೂ ಇಷ್ಟವಿಲ್ಲ; ಸಂಪುಟ ವಿಸ್ತರಣೆ ಮಾಡಿಸಿದ್ದು ಯಾರು?

By Web DeskFirst Published Dec 25, 2018, 10:46 AM IST
Highlights

ದೇವೇಗೌಡ್ರು ಸಚಿವ ಸಂಪುಟ ವಿಸ್ತರಣೆ ’ಈಗ ಬೇಡ’ ಅಂದಿದ್ದರು | ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಸಂಪುಟ ವಿಸ್ತರಣೆ ಇಷ್ಟವೇ ಇಲ್ಲ | ವಿಸ್ತರಣೆ ಹಿಂದಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ  

ಬೆಂಗಳೂರು (ಡಿ.25): ಹಾಗೆ ನೋಡಿದರೆ ದಿಲ್ಲಿ ಕಾಂಗ್ರೆಸ್ ನಾಯಕರಿಗೆ ಸಂಪುಟ ಪುನಾರಚನೆಯ ಬಗ್ಗೆ ಅಷ್ಟೇನೂ ಆಸಕ್ತಿ ಇರಲಿಲ್ಲ.ದೇವೇಗೌಡರು ಕೂಡ ಬಂಡಾಯದ ಗುಮ್ಮ ತೋರಿಸಿ ವಿನಾಕಾರಣ ‘ಈಗ ಬೇಡ’ ಎಂದು ದಿಲ್ಲಿ ಕಾಂಗ್ರೆಸ್ ನಾಯಕರಿಗೆ ಹೇಳಿದ್ದರು.

‘ಮಾಸ್ಟರ್‌ಪ್ಲ್ಯಾನ್‌ ಮಾಡುವವರು ಮಾಡ್ತಾನೆ ಇರ್ತಾರೆ’ ಸಿದ್ದು ಬಗ್ಗೆ ಸಿಎಂ ಹೀಗಂದಿದ್ಯಾಕೆ!

ಖರ್ಗೆ ಮತ್ತು ಡಿ ಕೆ ಶಿವಕುಮಾರ್ ಅವರಿಗೂ ಅಷ್ಟೊಂದು ಉತ್ಸಾಹ ಇರಲಿಲ್ಲ. ಆದರೆ ಸಂಪುಟ ವಿಸ್ತರಣೆ ಆಗಲೇಬೇಕು ಎಂಬ ಉತ್ಸಾಹ ಇದ್ದದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ. ತಮ್ಮ ಪ್ರಭಾವದಿಂದ ರಾಜ್ಯ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಮತ್ತು ದಿನೇಶ್ ಗುಂಡೂರಾವ್‌ರನ್ನು ಎಸ್ ಅನ್ನಿಸಿದ ಸಿದ್ದು, ಪರಮೇಶ್ವರ್ ಅವರನ್ನು ಕೂಡ ಲೆಕ್ಕಕ್ಕೆ ತೆಗೆದುಕೊಂಡಂತೆ ಕಾಣಲಿಲ್ಲ.

ಎಚ್‌ಡಿಕೆ ಕ್ಯಾಬಿನೆಟ್‌ಗೆ 8 ಹೊಸ ಸಚಿವರ ಸೇರ್ಪಡೆ ಬೆನ್ನಲ್ಲೇ ಖ್ಯಾತೆ ಶುರು

ಮೊದಲ ಬಾರಿ ಇರಬೇಕೇನೋ ವೇಣುಗೋಪಾಲ್, ಸಿದ್ದು, ದಿನೇಶ್ ಮತ್ತು ಪರಮೇಶ್ವರ್ ಎರಡು ಗಂಟೆ ಕುಳಿತುಕೊಂಡು ತಯಾರು ಮಾಡಿದ ಪಟ್ಟಿಗೆ ರಾಹುಲ್ ಗಾಂಧಿ ಯಥಾವತ್ ಅಸ್ತು ಎಂದಿದ್ದು. ಖರ್ಗೆ, ಡಿಕೆಶಿ, ಮೊಯ್ಲಿ ಮತ್ತು ಹರಿಪ್ರಸಾದ್‌ರನ್ನು ಯಾರೂ ಅಭಿಪ್ರಾಯ ಕೂಡ ಕೇಳಲಿಲ್ಲ, ವಿವರಣೆಯನ್ನೂ ನೀಡಲಿಲ್ಲ. ಹೊಸದಾಗಿ ಅಧಿಕಾರಕ್ಕೆ ಬಂದ ರಾಜ್ಯಗಳಲ್ಲಿ ಸಂಪುಟ ವಿಸ್ತರಣೆಯಲ್ಲಿ ಬ್ಯುಸಿ ಇದ್ದ ರಾಹುಲ್ ಗಾಂಧಿ, ಬಿ ಸಿ ಪಾಟೀಲ್ ಬದಲಿಗೆ ಎಂ ಬಿ ಪಾಟೀಲ್
ಹೆಸರು ಸೇರಿಸಿದ್ದು ಬಿಟ್ಟರೆ ಕರ್ನಾಟಕದ ವಿಸ್ತರಣೆ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ.

ಕಾಂಚಾಣದ ಯೋಜನೆ

ಲೋಕಸಭಾ ಚುನಾವಣೆಯಲ್ಲಿ ಎರಡೆರಡು ಕ್ಷೇತ್ರದ ಹಣಕಾಸು ಮತ್ತು ರಾಜಕೀಯ ವ್ಯವಹಾರಗಳನ್ನು ನೋಡಿಕೊಳ್ಳುವ ದೊಡ್ಡ ಕುಳಗಳನ್ನು ಜಾತಿ ಸಮೀಕರಣದ ಜೊತೆಗೆ ಬೆರೆಸಿ ಹೊಸ ಸಚಿವರ ಹೆಸರು ಅಂತಿಮಗೊಳಿಸಲಾಗಿದೆ. ರಮೇಶ್ ಜಾರಕಿಹೊಳಿಗಿಂತ ಸತೀಶ್ ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರ ನೋಡಿಕೊಳ್ಳಬಲ್ಲರು ಎಂದು ಲೆಕ್ಕ ಹಾಕಿದ್ದರೆ, ಎಂ ಬಿ ಪಾಟೀಲ್ ವಿಜಯಪುರ ಮತ್ತು ಬಾಗಲಕೋಟೆ ಕ್ಷೇತ್ರ ನೋಡಿಕೊಳ್ಳಬಲ್ಲರು.

ಇನ್ನು ಸಾವಿರ ಕೋಟಿ ಬೆಲೆಬಾಳುವ ಎಂಟಿಬಿ ನಾಗರಾಜ್‌ಗೂ ಕೂಡ ಲೋಕಸಭಾ ಟಾರ್ಗೆಟ್ ನೀಡಿಯೇ ಸಚಿವರನ್ನಾಗಿ ಮಾಡಲಾಗಿದೆ. ರಹೀಮ್ ಖಾನ್‌ರನ್ನು ಖರ್ಗೆ ಸಾಹೇಬರಿಗೆ ಮುಸ್ಲಿಂ ಕವರ್ ನೀಡಲು ಆಯ್ಕೆ ಮಾಡಲಾಗಿದೆ. ಅವರು  ಕೂಡ ಬೀದರ್ ಮಟ್ಟಿಗೆ ಗಟ್ಟಿ ಕುಳವೇ.

click me!