ಕಸದ ವಾಹನದಲ್ಲಿ ಪತ್ರಕರ್ತನ ಮೃತದೇಹ: ವರದಿ ಕೇಳಿದ ಮುಖ್ಯಮಂತ್ರಿ

By Suvarna Web DeskFirst Published Jan 15, 2018, 5:13 PM IST
Highlights
  • ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದ ಖಾಸಗಿ ಸುದ್ದಿವಾಹಿನಿಯ ವರದಿಗಾರ ಮೌನೇಶ್ ಪೋತರಾಜ
  • ಕಸ ಸಾಗಿಸುವ ವಾಹನದಲ್ಲಿ ಮೃತದೇಹ ಸಾಗಿಸಿದ ಪೊಲೀಸರು

ಬೆಂಗಳೂರು: ಅಪಘಾತದಲ್ಲಿ ಮೃತಪಟ್ಟ ಪತ್ರಕರ್ತನ ಮೃತದೇಹವನ್ನು ಪೊಲೀಸರು ಕಸ ಸಾಗಿಸುವ ವಾಹನದಲ್ಲಿ  ಕೊಂಡೊಯ್ದ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಪೊಲೀಸ್ ಅಧಿಕಾರಿಯಿಂದ ವರದಿಯನ್ನು ಕೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ,  ಪೊಲೀಸರ ಕ್ರಮದ ಬಗ್ಗೆ ತಿಳಿದು ನೋವಾಯಿತು. ಈ ಬಗ್ಗೆ ಉತ್ತರ ವಲಯ ಎಡಿಜಿಪಿ ಮತ್ತು ರಸ್ತೆ ಸುರಕ್ಷತಾ ಆಯುಕ್ತರಿಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದೇನೆ ಹಾಗೂ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.

I am pained to read this. I have asked ADGP & Commissioner of Traffic & Road Safety to get a report into this incidence from the IGP of the Northern range & take action. https://t.co/CyqfyyYFZs

— Siddaramaiah (@siddaramaiah)

ಖಾಸಗಿ ಸುದ್ದಿವಾಹಿನಿಯ ಶಿರಸಿ ವರದಿಗಾರ ಮೌನೇಶ್ ಪೋತರಾಜ(28) ಮೊನ್ನೆ ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.  ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಗುಂಡೂರು ಬಳಿ ಈ ಅವಘಡ ಸಂಭವಿಸಿದೆ.

ಅವರ ಮೃತದೇಹವನ್ನು ಪೊಲೀಸರು ಆ್ಯ0ಬುಲೆನ್ಸ್ ಬದಲಾಗಿ ಕಸ ಸಾಗಿಸುವ ವಾಹನದಲ್ಲಿ ಕೊಂಡೊಯ್ದಿದ್ದರು.ಪೊಲೀಸರ ಕ್ರಮಕ್ಕೆ ಸಾರ್ವಜನಿಕ ಹಾಗೂ ಮಾಧ್ಯಮ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

click me!