
ಕೂಡಲಸಂಗಮ(ಜ.15): ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸೂಕ್ಷ್ಮವಾಗಿ ಹಿರಿಯ ಸಾಹಿತಿ ಚಂಪಾ ಇಂಗಿತ ವ್ಯಕ್ತಪಡಿಸಿದ್ದಾರೆ.
ಕೂಡಲ ಸಂಗಮದಲ್ಲಿ ಇಂದು ಉದಯವಾದ ಹೊಸ ಪಕ್ಷಕ್ಕೆ ಚಾಲನೆ ನೀಡಿದ ಹಿರಿಯ ಸಾಹಿತಿ ಚಂದ್ರಶೇಖರ್ ಪಾಟೀಲ್ ವಿಚಾರ ಹೇಳಿದ್ದಾರೆ. ರಾಜಕೀಯ ನಿರ್ಧಾರ ಕೈಗೊಳ್ಳುವ ವಿಚಾರ ಮುಂದೆ ಬಂದೇ ಬರುತ್ತದೆ.
ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುತ್ತೇವೆ. ನಾನು ಚುನಾವಣೆ ಸ್ಪರ್ಧೆ ಮಾಡುವುದು ವೈಯಕ್ತಿಕ ವಿಚಾರವಲ್ಲ ಪಕ್ಷ ನಿರ್ಧರಿಸಿದಂತೆ ನಿರ್ಧಾರ ಮಾಡುವುದಾಗಿ ಹೇಳಿದ್ದಾರೆ.
ರಾಷ್ಟ್ರೀಯ ಪಕ್ಷಗಳ ಜಟಾಪಟಿ ಮಧ್ಯೆ ನಮ್ಮ ನೆಲ, ಜಲ, ಶಿಕ್ಷಣ ಬೇಕಾದರೆ ಆಂಧ್ರ, ತಮಿಳುನಾಡು ಮಾದರಿಯಂತೆ ಪ್ರಾದೇಶಿಕ ಪಕ್ಷ ಅನಿವಾರ್ಯ ಎಂದು ಹೇಳಿದ್ದಾರೆ.
ಮಹದಾಯಿ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವಂತಹ ಪಕ್ಷ. ಹೊಸ ಜನ ಸಾಮಾನ್ಯರ ಪಕ್ಷ ಬಂದಿರುವುದು ಸ್ವಾಗತಾರ್ಹ. ಬೇರೆ ಬೇರೆ ಪಕ್ಷದಿಂದ ಹತಾಶೆಗೊಂಡು ಬಂದವರ ಪಕ್ಷವಲ್ಲ. ರೈತರೆಲ್ಲರೂ ಈ ಹೊಸ ಪಕ್ಷದೊಂದಿಗೆ ಮುನ್ನಡೆಯುತ್ತಾರೆ ಎಂದು ಈ ವೇಳೆ ಚಂಪಾ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.