
ಬೀದರ್ : ಮನಸ್ಸು ಮಾಡಿದರೆ ಎರಡೇ ನಿಮಿಷದಲ್ಲಿ ಸರ್ಕಾರ ಉರುಳಿಸುವ ಸಾಮರ್ಥ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೆ ಎಂದು ಬಸವಕಲ್ಯಾಣದ ಶಾಸಕ ಬಿ.ನಾರಾಯಣ ಹೇಳಿದ್ದಾರೆ. ಕಾಂಗ್ರೆಸ್‌ನಲ್ಲಿ ತೀವ್ರ ಬಂಡಾಯ ಎದ್ದಿರುವ ಸಂದರ್ಭದಲ್ಲಿ ನಾರಾಯಣ ಅವರು ನೀಡಿರುವ ಈ ಹೇಳಿಕೆ ತೀರ್ವ ಕುತೂಹಲ ಮೂಡಿಸಿದೆ.
ಸಿದ್ದರಾಮಯ್ಯರನ್ನು ಇತ್ತೀಚೆಗೆ ಕಾಂಗ್ರೆಸ್ ಕಡೆಗಣಿಸುತ್ತಿದೆಯೇ ಎಂದು ಬೀದರ್‌ನಲ್ಲಿ ಶನಿವಾರ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ನಾರಾಯಣ,‘‘ಸಿದ್ದರಾಮಯ್ಯ ಅವರನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ.
ಸಿದ್ದರಾಮಯ್ಯ ಸಿದ್ದರಾಮಯ್ಯನೆ. ಅವರು ಮನಸ್ಸು ಮಾಡಿದರೆ ಎರಡು ನಿಮಿಷದಲ್ಲಿ ಸರ್ಕಾರ ಉರುಳುತ್ತದೆ. ಅವರಿಗೆ ಅಗೌರವ ತೋರುವ, ಶಕ್ತಿಗುಂದಿಸುವವರು ತಾವಾಗಿಯೇ ಮೂಲೆಗುಂಪಾಗುತ್ತಾರೆ. ಅವರ ಒಂದು ಕೂದಲಿಗೂ ಧಕ್ಕೆ ಆಗಲು ನಾವು ಬಿಡುವುದಿಲ್ಲ ’’ ಎಂದು ತಿಳಿಸಿದರು.
ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರೇ ಸಮನ್ವಯ ಸಮಿತಿ ಅಧ್ಯಕ್ಷರು. ಹೀಗಾಗಿ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಬರುವುದಿಲ್ಲ. ಐದು ವರ್ಷ ಈ ಸರ್ಕಾರವನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ನಾವೂ ಅಂಥ ಯಾವುದೇ ನೀಚ ಕೆಲಸ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಕಟ್ಟಾ ಬೆಂಬಲಿಗರಾಗಿರುವ ನಾರಾಯಣ್ ಇದೇ ವೇಳೆ ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.