ಆ್ಯಂಬುಲೆನ್ಸ್ ಬರಲು ರಸ್ತೆಯೇ ಇಲ್ಲ: ಗರ್ಭಿಣಿಯ ಪಾಡು ಕೇಳುವರು ಯಾರು?

Published : Jun 09, 2018, 09:21 PM IST
ಆ್ಯಂಬುಲೆನ್ಸ್ ಬರಲು ರಸ್ತೆಯೇ ಇಲ್ಲ: ಗರ್ಭಿಣಿಯ ಪಾಡು ಕೇಳುವರು ಯಾರು?

ಸಾರಾಂಶ

ಡಾಂಬರ್ ಕಾಣದ ರಸ್ತೆ, ದೇವರಿಗೆ ಪ್ರೀತಿ ಗರ್ಭಿಣಿ ಅವಸ್ಥೆ ಆಂಧ್ರದ ವಿಶಾಖಪಟ್ಟಣದ ಸಮೀಪದ ಹಳ್ಳಿ ಸಮಯಕ್ಕೆ ಆ್ಯಂಬುಲೆನ್ಸ್ ಬರದೇ ಪರದಾಟ ಗರ್ಭಿಣಿಯನ್ನು ಹಾಸಿಗೆ ಮೇಲೆ ಹೊತ್ತೊಯ್ದ ಗ್ರಾಮಸ್ಥರು 

ವಿಶಾಖಪಟ್ಟಣ(ಜೂ.9): ರಸ್ತೆ ಸರಿಯಿಲ್ಲದ ಕಾರಣ ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ತಲುಪದೆ, ಗರ್ಭಿಣಿ ಮನೆಯವರು ಹಾಸಿಗೆಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಘಟನೆ ವಿಶಾಖಪಟ್ಟಣದ ಬಳಿಯ ಹಳ್ಳಿಯೊಂದರಲ್ಲಿ ನಡೆದಿದೆ.

ಇಲ್ಲಿನ ಅನುಕು ಎಂಬ ಗ್ರಾಮದಲ್ಲಿ ಗರ್ಭಿಣಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಕುಟುಂಬಸ್ಥರು ಜಿಲ್ಲಾಸ್ಪತ್ರೆಯ ಆ್ಯಂಬುಲೆನ್ಸ್ ಗೆ ಫೋನ್ ಮಾಡಿದ್ದಾರೆ. ಆದರೆ ಅನುಕು ಗ್ರಾಮಕ್ಕೆ ತಲುಪಲು ರಸ್ತೆ ಮಾರ್ಗ ಸರಿಯಿಲ್ಲದ ಕಾರಣ, ಆ್ಯಂಬುಲೆನ್ಸ್ ಸರಿಯಾದ ಸಮಯಕ್ಕೆ ಗ್ರಾಮಕ್ಕೆ ತಲುಪಲು ಸಾಧ್ಯವಾಗಿಲ್ಲ.

ಇನ್ನು ಹೆರಿಗೆ ನೋವು ಹೆಚ್ಚಾದಾಗ ಮನೆಯವರು ಮಹಿಳೆಯನ್ನು ಹಾಸಿಗೆ ಮೇಲೆ ಕೂರಿಸಿ ಅದಕ್ಕೆ ಕಟ್ಟಿಗೆ ಕಟ್ಟಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಈ ರಸ್ತೆ ಮಾರ್ಗವನ್ನು ದುರಸ್ತಿಗೊಳಿಸುವಂತೆ ಬಹಳ ಹಿಂದೆಯೇ ಮನವಿ ಸಲ್ಲಿಸಲಾಗಿತ್ತಾದರೂ, ಈ ಕುರಿತು ಸ್ಥಳೀಯ ಆಡಳಿತ ಗಮನಹರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಾವುದೇ ಕ್ಷಣದಲ್ಲಾದರೂ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಉದಯ ಕದಲೂರು ಓಪನ್ ಹೇಳಿಕೆ
ಸಿಲ್ಕ್ ಬೋರ್ಡ್- ಕೆ.ಆರ್ ಪುರ ಮೆಟ್ರೋ ನಿಲ್ದಾಣದವರೆಗೂ ಹೈಟೆಕ್ ಹೊರವರ್ತುಲ ರಸ್ತೆ ಅಭಿವೃದ್ಧಿಗಾಗಿ ₹307 ಕೋಟಿ ಅನುಮೋದನೆ