ಅಡಕತ್ತರಿಯಲ್ಲಿ ರೈತರ ಸಾಲಮನ್ನಾ ವಿಚಾರ

First Published Jun 14, 2018, 8:26 PM IST
Highlights
  • ಸಮನ್ವಯ ಸಮಿತಿಯಲ್ಲಿ ಜೆಡಿಎಸ್'ನಿಂದ ಇಬ್ಬರು, ಕಾಂಗ್ರೆಸ್'ನಿಂದ ಮೂವರು ಸದಸ್ಯರು
  • ಯೋಜನೆ ಜಾರಿಗೆ ಆತುರ ಬೇಡ ಎನ್ನುತ್ತಿರುವ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ

ಬೆಂಗಳೂರು[ಜೂ.14]: ರೈತರ ಸಾಲ ಮನ್ನಾ ವಿಚಾರ ಮತ್ತೆ ಮುಂದೂಡಿಕೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಮೈತ್ರಿ ಸರ್ಕಾರ ಸಮನ್ವಯ ಸಮಿತಿಯನ್ನು ರಚಿಸಿದ್ದು ಜೆಡಿಎಸ್ ಪ್ರಣಾಳಿಕೆಯಲ್ಲಿರುವ  ರೈತರ ಸಾಲಮನ್ನಾಗೆ ಸಮಿತಿ ಮನ್ನಣೆ ನೀಡಿದರೆ ಮಾತ್ರ ರೈತರ  ಸಾಲಮನ್ನಾ ಮಾಡಲು ಸರ್ಕಾರ ಮುಂದಾಗಬೇಕಾಗುತ್ತದೆ.

ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 15 ದಿನಗಳಲ್ಲಿ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರು ಸಾಲಮನ್ನಾಗೆ ಆತುರ ಬೇಡ ಎಂದು ಮುಖ್ಯಮಂತ್ರಿ ಅವರಿಗೆ ಸಲಹೆ ನೀಡಿದ್ದಾರೆ. 

ಸಮನ್ವಯ ಸಮಿತಿಯು ಎರಡೂ ಪಕ್ಷಗಳ ಆಶ್ವಾಸನೆಯ ಪಟ್ಟಿಯನ್ನು ಸಿದ್ದಗೊಳಿಸಲಿದ್ದು ಸುಮಾರ 53 ಸಾವಿರ ಕೋಟಿ ಅಗತ್ಯವಿರುವ ಸಾಲಮನ್ನಾ ಯೋಜನೆಯನ್ನು ಸೇರಿಸಿದ್ದರೆ ಮನ್ನಾ ವಿಚಾರ ಕಾರ್ಯಗತವಾಗುವುದಿಲ್ಲ.  ಸಮಿತಿಯಲ್ಲಿ ಕಾಂಗ್ರೆಸ್'ನಿಂದ ಮೂವರು ಹಾಗೂ ಜೆಡಿಎಸ್'ನಿಂದ ಇಬ್ಬರು ಸದಸ್ಯರಿರುತ್ತಾರೆ. ಇವರು ಮೈತ್ರಿ ಸರ್ಕಾರದ ಪಟ್ಟಿಯನ್ನು ತಯಾರಿಸಲಿದ್ದಾರೆ.

click me!