
ಬೆಂಗಳೂರು (ಡಿ. 25): ಕಾಂಗ್ರೆಸ್‌ನಲ್ಲಿ ಅಧಿಕಾರ ಹೋದ ಮೇಲೆ ಯಾರೂ ಮಾತನಾಡಿಸೋದಿಲ್ಲ. ಆದರೆ ಸಿದ್ದರಾಮಯ್ಯ ಇದಕ್ಕೆ ಅಪವಾದ. ಮೊನ್ನೆ ದಿಲ್ಲಿಗೆ ಬಂದಿದ್ದ ಸಿದ್ದರಾಮಯ್ಯ ಅವರ ರೂಮ್ ಎದುರು ಅತಿ ಹೆಚ್ಚು ಶಾಸಕರು ಭೇಟಿಗೆ ಕಾಯುತ್ತಿದ್ದರು.
ಬಂದವರಿಗೆಲ್ಲ ‘ಅಯ್ಯೋ ಈ ಬಾರಿ ಆಗೋಲ್ಲ ಹೋಗು, ರಾಜಕೀಯ ಕಾರ್ಯದರ್ಶಿ ಮಾಡಸ್ತೀನಿ...ಲೋಕಸಭಾ ಚುನಾವಣೆ ಇದೆ. ಫುಲ್ ಜಾತಿ ಪ್ರಾತಿನಿಧ್ಯ’ ಎಂದು ನೇರವಾಗಿಯೇ ಹೇಳಿ ಕಳುಹಿಸುತ್ತಿದ್ದರು. ಆ ಕಡೆ ಖರ್ಗೆ, ಪರಮೇಶ್ವರ್, ಡಿ ಕೆ ಶಿವಕುಮಾರ್, ದಿನೇಶ್ ಗುಂಡೂರಾವ್ರನ್ನು ಶಾಸಕರು ಭೇಟಿ ಯಾಗಲು ಹೋದಾಗ ‘ಒಂದ್ ಮಾತು ವೇಣುಗೋಪಾಲ್‌ಗೆ ಹೇಳ್ತೀನಿ ನೋಡೋಣ’ ಎಂಬ ಟಿಪಿಕಲ್ ಕಾಂಗ್ರೆಸ್ ಡೈಲಾಗ್ ಬರುತ್ತಿದ್ದರೆ, ಸಿದ್ದರಾಮಯ್ಯ ಬಳಿ ಅವೆಲ್ಲ ಇಲ್ಲ.
ಒಂದೋ ‘ಮಾಡಿಸ್ತೀನಿ ಚಿಂತೆ ಮಾಡಬೇಡ’ ಅಥವಾ ‘ಇಲ್ಲ ಆಗೋಲ್ಲ’ ಅಷ್ಟೇ ಮಾತು.
ಎನ್ ಎ ಹ್ಯಾರಿಸ್‌ರನ್ನು ಮಂತ್ರಿ ಮಾಡಿ ಎಂದು ಬೆಂಗಳೂರಿನ ಶಾಸಕರು ಬಂದಾಗ, ‘ಹಳೆಯ ಬೆಂಗಳೂರಿಗೆ ಜಮೀರ್ ಇದ್ದಾನೆ. ಇನ್ನೊಂದು ಮುಸ್ಲಿಂ ಆಗೋದಿಲ್ಲ. ಈ ಸಲ ಹೈದರಾಬಾದ್ ಕರ್ನಾಟ ಕಕ್ಕೆ ಕೊಡ್ತೀವಿ’ ಎಂದು ಕಳುಹಿಸಿಯೇಬಿಟ್ಟರು. ಸೋತರೂ ಸಿದ್ದುಗೆ ಕರ್ನಾಟಕದ ಕಾಂಗ್ರೆಸ್‌ಗೆ ತಾನೆಷ್ಟು ಅನಿವಾರ್ಯ ಎಂದು ಗೊತ್ತಿದೆ. ಅದಕ್ಕೇ ಅಲ್ಲವೆ ಈ ಪಾಟಿ ಕಾನ್ಫಿಡೆನ್ಸ್.
-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.