ಮತ್ತೆ ಐಸಿಯುಗೆ ಸಿದ್ಧಗಂಗಾ ಶ್ರೀ

By Web DeskFirst Published Dec 15, 2018, 11:00 AM IST
Highlights

ಪಿತ್ತಕೋಶ ಮತ್ತು ಯಕೃತ್‌ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಸಣ್ಣಪುಟ್ಟತಪಾಸಣೆ ಸಲುವಾಗಿ ಶುಕ್ರವಾರ ಮತ್ತೆ ಐಸಿಯುಗೆ ಸ್ಥಳಾಂತರ ಮಾಡಲಾಗಿದೆ. 

ತುಮಕೂರು :  ಚೆನ್ನೈನ ರೆಲಾ ಆಸ್ಪತ್ರೆಯಲ್ಲಿ ಪಿತ್ತಕೋಶ ಮತ್ತು ಯಕೃತ್‌ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಸಣ್ಣಪುಟ್ಟತಪಾಸಣೆ ಸಲುವಾಗಿ ಶುಕ್ರವಾರ ಮತ್ತೆ ಐಸಿಯುಗೆ ಸ್ಥಳಾಂತರ ಮಾಡಲಾಗಿದೆ. ಇದೇ ವೇಳೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಎಸ್‌.ಎಂ.ಕೃಷ್ಣ, ಬಿ.ಎಸ್‌.ಯಡಿಯೂರಪ್ಪ ಪ್ರತ್ಯೇಕವಾಗಿ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು.

ಕಳೆದ ಶನಿವಾರ ಬೈಪಾಸ್‌ ಮಾದರಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶ್ರೀಗಳು ಚೇತರಿಸಿಕೊಂಡ ಕಾರಣ ಗುರುವಾರ ಸಂಜೆ ಆಸ್ಪತ್ರೆ ವೈದ್ಯರು ಶ್ರೀಗಳನ್ನು ತಪಾಸಣೆ ನಡೆಸಿ ಸ್ಪೆಷಲ್‌ ವಾರ್ಡ್‌ಗೆ ಸ್ಥಳಾಂತರ ಮಾಡಿದ್ದರು. ಶುಕ್ರವಾರದಂದು ಸಣ್ಣ ಪುಟ್ಟತಪಾಸಣೆ ಮಾಡುವ ಸಲುವಾಗಿ ಮತ್ತೆ ಐಸಿಯುಗೆ ಶಿಫ್ಟ್‌ ಮಾಡಿದ್ದಾರೆ. ಇನ್ನೂ ನಾಲ್ಕು ದಿವಸಗಳ ಕಾಲ ಅವರು ಐಸಿಯುನಲ್ಲೇ ಇರಲಿದ್ದಾರೆ. ಬಳಿಕ ಮತ್ತೆ ತಪಾಸಣೆ ನಡೆಸಿ ಬುಧವಾರ ಆಸ್ಪತ್ರೆಯಿಂದ ಡಿಸ್‌ಚಾಜ್‌ರ್‍ ಮಾಡುವ ಸಾಧ್ಯತೆ ಇದೆ. ಶ್ರೀಗಳು ಸಾಕಷ್ಟುಚೇತರಿಸಿಕೊಂಡಿದ್ದು, ಶುಕ್ರವಾರ ಸಹ ವಾರ್ಡ್‌ನಲ್ಲೇ ಇಷ್ಟಲಿಂಗ ಪೂಜೆ ನೆರವೇರಿಸಿದ ಜೊತೆಗೆ ರುದ್ರಾಭಿಷೇಕ ಕೂಡ ಮಾಡಿದ್ದಾರೆ ಎಂದು ವೈದ್ಯರು ತಿಳಿದ್ದಾರೆ.

ಸಿದ್ಧಗಂಗೆಯಿಂದ ಚೆನ್ನೈಗೆ ತೆರಳಿದಾಗಿನಿಂದ ಇಲ್ಲಿಯವರೆಗೂ ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಬೆಳಿಗ್ಗೆ ಶ್ರೀಗಳ ದರ್ಶನಕ್ಕೆ ಬೆಳಗಾವಿಯಿಂದ ನೇರವಾಗಿ ಚೆನ್ನೈಗೆ ಬಂದು ಶ್ರೀಗಳ ದರ್ಶನ ಪಡೆದರು. ಮಧ್ಯಾಹ್ನ 12 ಗಂಟೆಗೆ ಶ್ರೀಗಳ ಆರೋಗ್ಯ ವಿಚಾರಿಸಿದ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಸುಮಾರು ಅರ್ಧ ಗಂಟೆಗಳ ಕಾಲ ಆಸ್ಪತ್ರೆ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೂಡ ಮಧ್ಯಾಹ್ನ 3 ಗಂಟೆ ಸುಮಾರಿಗೆ ಶ್ರೀಗಳ ದರ್ಶನ ಪಡೆದು ಆರೋಗ್ಯ ವಿಚಾರಿಸಿದರು.

ಸಿದ್ದಗಂಗಾ ಶ್ರೀಗಳ ಚಿಕಿತ್ಸೆಗೆ ’ಮುಸ್ಲೀಂ’ ಲೇಪನ: ಡಿಕೆಶಿ ಸ್ಪಷ್ಟನೆ
click me!