‘ಪುತ್ರ ರಾಕೇಶ್ ಸಾವಿಗೆ ಖುದ್ದು ಸಿದ್ದರಾಮಯ್ಯ ಕಾರಣ’

Published : Jan 23, 2018, 03:12 PM ISTUpdated : Apr 11, 2018, 12:50 PM IST
‘ಪುತ್ರ ರಾಕೇಶ್ ಸಾವಿಗೆ ಖುದ್ದು ಸಿದ್ದರಾಮಯ್ಯ ಕಾರಣ’

ಸಾರಾಂಶ

ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ಸಿದ್ದರಾಮಯ್ಯ ಒಬ್ಬ ಕಲಬೆರಕೆ ಸಿಎಂ

ಮೈಸೂರು:  ಸಿಎಂ ಸಿದ್ದರಾಮಯ್ಯ  ಮಗ ರಾಕೇಶ್ ಬೆಲ್ಜಿಯಮ್ ಗೆ ಹೋಗಿದ್ದು ಕುಡಿದು ಡ್ರಗ್ಸ್ ತಗೊಂಡು ಮಜಾ ಮಾಡೋಕೆ ಹೋಗಿದ್ದು. ಆತ ಆರೋಗ್ಯ ತಪಾಸಣೆಗೆ ಬೆಲ್ಜಿಯಂಗೆ ಹೋಗ್ತೇನೆ ಎಂದಾಗ ತಡೆಯಬಹುದಿತ್ತು. ನೀನೆನೂ ಗಣ್ಯನಲ್ಲ, ಯಾವುದೇ ವಿಚಾರ ಸಂಕೀರ್ಣಕ್ಕೆ ನಿನ್ನನ್ನು ಆಹ್ವಾನ ಮಾಡಿಲ್ಲ, ಇಲ್ಲಿ ಉಳಿದು ಆರೋಗ್ಯ ತಪಾಸಣೆ ಮಾಡಿಸಿಕೊ ಎನ್ನ ಬಹುದಿತ್ತು. ಆದ್ರೆ ಅಧಿಕಾರದ ಗುಂಗಿನಲ್ಲಿ ಸಿದ್ದರಾಮಯ್ಯ  ತನ್ನ ಮಗನ ಹಿತವನ್ನೇ ಮರೆತ್ರು. ಒಂದು ರೀತಿಯಲ್ಲಿ ಅವರೇ ತಮ್ಮ ಮಗನನ್ನು ಕೊಲೆ ಮಾಡಿದಂತೆ. ಸಿದ್ದರಾಮಯ್ಯ ಅವರೇ ತನ್ನ ಕೈಯಾರೆ ರಾಕೇಶ್ ಕೊಲೆ ಮಾಡಿದ್ದು, ಎಂದು ಬಿಜೆಪಿ ಮುಖಂಡ ವಿ. ಶ್ರೀನಿವಾಸ್ ಪ್ರಸಾದ್ ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ.

ವರುಣಾ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಶ್ರೀನಿವಾಸದ ಪ್ರಸಾದ್, ಇದು.  ಈಗಿರೋ ಉತ್ತರಾಧಿಕಾರಿ ಡಾ.ಯತೀಂದ್ರ ನಿಮ್ಮ ಜೊತೆಯಲ್ಲೇ ಇರಲಿಲ್ಲ.  ತನ್ನಷ್ಟಕ್ಕೆ ತಾನು ಬೇರೆ ಮನೆಮಾಡಿಕೊಂಡಿದ್ದ. ನೀವು  ಕೂಡ ಆತನ ಬಗ್ಗೆ ಬೇರೆ ರೀತಿ ಹೇಳಿಕೆ ನೀಡ್ತಿದ್ರಿ. ಆತನ ಮುಖ ನೋಡಲ್ಲ ಅಂತಿದ್ರೀ, ಈಗ ಆತನೇ ಬೇಕಾಗಿದ್ದಾನೆ, ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ಕರ್ನಾಟಕ ಎಂದೂ ಈತಂಹ ಲಜ್ಜೆಗೆಟ್ಟ ಮುಖ್ಯಮಂತ್ರಿ ನೋಡಿಲ್ಲ, ಮುಖ್ಯಮಂತ್ರಿ ಅಂದ್ರೆ ಜನರ ಕಷ್ಟಗಳಿಗೆ ಸ್ಪಂದಿಸಬೇಕಾದ ಜವಾಬ್ದಾರಿ ಇರಬೇಕು. ಸಿಎಂ ಹಾವಭಾವ ನೋಡಿದ್ರೆ ನಾಚಿಕೆಯಾಗುತ್ತದೆ.  ಸಿದ್ದರಾಮಯ್ಯ ಒಬ್ಬ ಕಲಬೆರಕೆ ಸಿಎಂ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದು ನಮ್ಮ ದುರಂತ  ಎಂದು ಟೀಕಿಸಿದ್ದಾರೆ.

ವರುಣ ಹೊಸ ಕ್ಷೇತ್ರ ಆದಾಗ ವರುಣಾದಲ್ಲಿ ಸ್ಪರ್ಧೆ ಮಾಡಿ ಎಂದು ಹೇಳಿದ್ದು ನಾನು. ಈಗ ನಿರಾಸೆಯಾಗಿದೆ, ಮನಸ್ಸಿಗೆ ಸಾಕಷ್ಟು ನೋವಾಗಿದೆ. ಸಿದ್ದರಾಮಯ್ಯಗಿಂತ ರಾಜಕಾರಣದಲ್ಲಿ ನಾನೇ ಹಿರಿಯ. ಈ ವರೆಗೂ ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ. ನನ್ನ ಜೀವನದಲ್ಲಿ ಸಿದ್ದರಾಮಯ್ಯ ಮಾಸದ ಗಾಯ ಮಾಡಿದ್ದಾರೆ. ಮಂತ್ರಿಮಂಡಲ ಪುನರ್ ರಚನೆಯಲ್ಲಿ ನನ್ನ ಕೈ ಬಿಟ್ಟಿದ್ದಾರೆ. ಎದ್ದರೆ ಜುಟ್ಟು ಹಿಡಿತಾರೆ, ಕುಳಿತ್ರೆ ಬಾಲ ಹಿಡಿತಾರೆ. ಸಿದ್ದರಾಮಯ್ಯ ತುಂಬಾ ಡೆಂಜರ್ ವ್ಯಕ್ತಿ, ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸನ್ನಡತೆ ಕೈದಿಗಳಿಗೆ ಸಿಹಿ ಸುದ್ದಿ- ಕಾರಾಗೃಹದ ಅಧಿಕಾರಿ-ಸಿಬ್ಬಂದಿಗೆ ಬಂಪರ್ ಆಫರ್
ಯುವ ಕಾಂಗ್ರೆಸ್‌ನಿಂದ ನೂತನ ಅಭಿಯಾನ